(ಲೇಖನ -114) - ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ

(ಲೇಖನ -114) - ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ -ದೈಹಿಕವಾಗಿ ಜೀವದ ಪ್ರತಿಯೊಂದು ಅಂಗಗಳು  ಸರಿಯಾಗಿ ಕೆಲಸ ಮಾಡುತ್ತಾ, ಆರೋಗ್ಯದಲ್ಲಿ ಯಾವುದೇ ಏರುಪೇರುಗಳಿಲ್ಲದೆ ಚೆನ್ನಾಗಿದ್ದರೂ ಮಾನಸಿಕವಾಗಿ ಸರಿಯಾಗಿಲ್ಲದಿದ್ದರೆ ಅವರ ಬದುಕು  ಬಹಳ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗಿರುತ್ತದೆ. ಜೀವದ  ಪ್ರತಿಯೊಂದು ಅಂಗಗಳು  ಮಾನವನಿಗೆ  ಅಥವಾ  ಪ್ರಾಣಿಗಳಿಗೆ ಬಹಳ ಪ್ರಾಮುಖ್ಯ, ಒಂದು ಸಲ  ಅಂಗಾಂಗಗಳನ್ನು ಕಳೆದುಕೊಂಡಾಗ  ಅದರಲ್ಲಾಗುವ  ತೊಂದರೆಗಳು  ಅನುಭವಿಸಿದವರಿಗೆ ಮಾತ್ರ ಗೊತ್ತು. ಜೀವ ಸರಿಯಾಗಿ ಇರುವಾಗ ತಮ್ಮ ಅಜಾಗ್ರತೆಯಿಂದ ಅಥವಾ ಅವಘಡಗಳಲ್ಲಿ  ಅದೆಷ್ಟೋ ಜನರು  ಶಾಶ್ವತವಾಗಿ  ಅಂಗವಿಕಲರಾಗುತ್ತಾರೆ. ರೋಗಕ್ಕೆ ತುತ್ತಾಗಿ ಅಂಗವಿಕಲರಾದಾಗ ಮಾನಸಿಕವಾಗಿ ಕುಗ್ಗಿ ಹೋಗಿ ಅಲ್ಲಿ ಬದುಕಲು ಆಗದೇ ಇಲ್ಲಿ ಜೀವಿಸಲೂ ಆಗದೇ ಕಷ್ಟ ಪಡುವ ಜೀವಗಳು ನಮ್ಮ ಕಣ್ಣ ಮುಂದೆ ಕಾಣುತಿರುತ್ತದೆ.



       ಈ ವಿಷಯದಲ್ಲಿ, ಕಷ್ಟಗಳು  ನೋಡುವವರ ಕಣ್ಣಿಗೆ  ಗೊತ್ತಾಗುವುದಿಲ್ಲ, ನಿಜವಾಗಿ  ತೊಂದರೆಗೆ  ಒಳಪಟ್ಟು  ಜೀವಿಸುವವರು  ಅನೇಕ ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಹೆಚ್ಚಿನ ಜನರು ಆಸ್ಪತ್ರೆಯಲ್ಲಿ ಜೀವನ್ಮರಣದಲ್ಲಿ, ಮತ್ತು ಅನೇಕ ಜನರು ತಮ್ಮ ಮನೆಗಳಲ್ಲಿ ತೊಂದರೆಗಳೊಂದಿಗೆ ಬದುಕುತಿದ್ದಾರೆ. ಆಕಸ್ಮಿಕ ಘಟನೆಗಳಿಗೆನೂ ಮಾಡಲು ಸಾಧ್ಯವಿಲ್ಲ, ಆದರೆ ಅಜಾಗರೂಕತೆಯಿಂದ ನಡೆಯುವ ಅವಘಡಗಳು ಜೀವನದ ಚಿತ್ರಣವನ್ನು ಬದಲಾಯಿಸುತ್ತದೆ. ಅದೆಷ್ಟೋ ಯುವಕರು ಬೈಕು, ಕಾರು ಮತ್ತಿತರ ವಾಹನ ಚಲಾವಣೆಯ ಸಂಧರ್ಭದಲ್ಲಿ ವೀಲಿಂಗ್, ಪೈಪೋಟಿಗಳನ್ನು ಮಾಡುತ್ತಾ  ಭೀಕರ ಅಪಘಾತಕ್ಕೆ ಒಳಗಾಗಿ  ಜೀವ ಕಳೆದುಕೊಂಡ ನಿದರ್ಶನಗಳನ್ನು ನಾವು ನೋಡುತ್ತೇವೆ. ತಂದೆ ತಾಯಿಯರು ತನ್ನ ಮಕ್ಕಳಿಗಾಗಿ ಎಲ್ಲವನ್ನು  ಕೊಡಿಸಿ ಬೆಳೆಸಿ  ಸಾಕಿ  ಸಲಹಿರುತ್ತಾರೆ, ಆದರೆ ಯವ್ವನದ  ಸಮಯದಲ್ಲಿ ಅತಿರೇಕಕ್ಕೆ ಒಳಗಾಗಿ  ಇಂತಹ  ಅನೇಕ ಘಟನೆಗಳಿಗೆ  ಬಲಿಯಾಗುತ್ತಾರೆ.

       ಸಾವು ಎಂಬುದು  ಎಲ್ಲರಿಗೂ ಒಂದಲ್ಲ ಒಂದು ದಿನ  ಬಂದೇ ಬರುತ್ತೆ, ಆದರೆ ಸಾವನ್ನು  ಸ್ವಾಗತಿಸುವ ಕೆಲಸವನ್ನು ಹೆಚ್ಚಿನವರು  ಮಾಡಿಕೊಳ್ಳುತ್ತಾರೆ, ಒಬ್ಬ ವ್ಯಕ್ತಿಯನ್ನು  ಹೊಡೆದುರುಳಿಸಿ ಸಾಯಿಸುವ ಕೊಲೆಗಾರರು ಮತ್ತು ಅವರಿಗೆ  ಬೆನ್ನೆಲುಬಾಗಿ  ನಿಲ್ಲುವ  ವಿಕೃತ ಮನುಷ್ಯರು ಮನುಷ್ಯ ಜನ್ಮಕ್ಕೆ  ಅರ್ಹರಾಗಿರುವುದಿಲ್ಲ, ಒಂದು ವೇಳೆ  ಸಮಾಜಕ್ಕೆ ಕಂಟಕವಾಗಿರುವ ಜನರು ಇನ್ನೂ ಬದುಕಿದ್ದಾರೆಂದರೆ  ಅವರ ಅಂತ್ಯವಂತು  ಊಹಿಸಲು ಸಾಧ್ಯವಿಲ್ಲ. ತಂದೆ ತಾಯಿಯರಿಗೆ  ಜವಾಬ್ದಾರಿಯುತ  ಮಕ್ಕಳಾಗಿ ಬೆಳೆದರೆ  ಮನೆಯನ್ನು  ಯಾವುದೇ ಸಂದರ್ಭದಲ್ಲಿ  ಚೆನ್ನಾಗಿ ನೋಡಿಕೊಳ್ಳಬಹುದು. ಒಂದು ವೇಳೆ  ನಿಮ್ಮ ಸುತ್ತಲೂ  ಅಸೂಯೆ ಪಡುವ ಅದೆಷ್ಟು ಮಂದಿ  ಹೋರಾಟ ಮಾಡಿದರು  ನಿಮ್ಮನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ.

      ಸದಾ ಇನ್ನೊಬ್ಬರ ಮನೆಯ ಅಂಗಳ ಗುಡಿಸುವವರು ತನ್ನ ಮನೆಯ ಅಂಗಳವನ್ನು ಗುಡಿಸಿ ಸ್ವಚ್ಛಗೊಳಿಸಲು  ಮರೆತು ಬಿಟ್ಟಿರುತ್ತಾರೆ. ಅಂದರೆ  ಅಂಥವರ  ಜನ್ಮವಂತು  ಇಂತಹ ವಿಚಾರದಲ್ಲಿ ಮುಗಿದು ಹೋಗುತ್ತದೆ. ಇಲ್ಲಿ  ಒಬ್ಬ ಮನುಷ್ಯನ  ಮಾನಸಿಕತೆಯ ವಿಚಾರಗಳನ್ನು  ನೋಡಬಹುದು, ನೋಡಲು ಸುಂದರಿ ಅಥವಾ ಸುಂದರನಾಗಿ  ಅಥವಾ ದೊಡ್ಡ ಮನೆ  ಕಾರು ಬಂಗಲೇ  ಎಲ್ಲವನ್ನು ಇಟ್ಟುಕೊಂಡು  ಮನಸ್ಸಿನ  ಸ್ಥಿಮಿತ ಕಳೆದುಕೊಂಡಿರುವ ಅನೇಕ ಜನರು  ನಿಮ್ಮ ಜೀವನದಲ್ಲಿ  ಬಂದು ಹೋಗಿರಬಹುದು. ಅವರಲ್ಲಿ ತುಂಬಿರುವ ಕೆಟ್ಟ ಭಾವನೆಗಳು  ನಿಮ್ಮ ಜೀವನವನ್ನು ಹದಗೆಡಿಸಬಹುದು, ತನ್ನ ಊರಲ್ಲಿ  ನಾನೊಬ್ಬನೇ ಸರದಾರ  ನನಗಿಂತ ಮೇಲೆ ಯಾರು ಇಲ್ಲ  ನಾನೊಬ್ಬನೇ ರಾಜ ರಾಣಿ  ಎಂಬ ಅಹಂಕಾರ ಒಂದಲ್ಲ ಒಂದು ದಿನ  ಅವರಲ್ಲಿ ತುಂಬಿರುವ  ಕೆಟ್ಟ ಭಾವನೆಗಳು  ಕೊನೆಯ ಕಾಲದಲ್ಲಿ  ಅನುಭವಿಸುವಂತೆ ಮಾಡಿರುತ್ತದೆ.

        ತನ್ನ ಮಾನಸಿಕತೆಯನ್ನು, ಮನಸ್ಸಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರೆ, ಉತ್ತಮ ಜನರ  ಸಹವಾಸ, ವಿವೇಕವುಳ್ಳವರೊಂದಿಗೆ  ಮಾತುಕತೆ, ಜ್ಞಾನಿಗಳೊಂದಿಗೆ  ಸಂವಾದಗಳನ್ನು ಮಾಡುತ್ತಾ, ಮನಸ್ಸಿಗೆ  ಏಕಾಗ್ರತೆ, ಧೈರ್ಯ,  ಮತ್ತು ಒಳ್ಳೆತನಗಳನ್ನು  ಜೋಡಿಸುವ ಜನರೊಂದಿಗೆ ಅಲ್ಪ ದಿನ ಬದುಕಿದರು  ನಮ್ಮ ಜೀವನ ಸಾರ್ಥಕವಾಗುತ್ತದೆ. ಮುಳ್ಳು ರಾಜಕೀಯ ದ್ವೇಷ ರಾಜಕೀಯ, ಕುಟುಂಬಗಳನ್ನು  ಒಡೆಯುವ, ಒಡೆದು  ಅದರ ಚಂದವನ್ನು ನೋಡುವ  ಅನೇಕ ಮಂದಿ  ಸುಸ್ತಾಗಿ  ಬಿದ್ದು ನರಳಾಡಿದ  ನಿದರ್ಶನಗಳನ್ನು  ತಾವು ನೋಡಿದ್ದೀರ ಬಹುದು. ಈ ವಿಚಾರದಲ್ಲಿ  ಕಲಿತ ವಿಷಯವೇನೆಂದರೆ  ನೀನ್ಯಾರಿಗೂ  ತೊಂದರೆ ಕೊಡುತ್ತಾ  ಬದುಕಬೇಡ, ನಿನಗೆ ತೊಂದರೆ ಕೊಡುವವರು ಅದೆಷ್ಟು ಮಂದಿ ಬಂದರೂ  ಅವರ ಕರ್ಮಗಳನ್ನು ತುಲನೆ ಮಾಡುವ ಶಕ್ತಿ  ಒಂದಲ್ಲ ಒಂದು ದಿನ  ಮೇಲೇರಗಿದಾಗ ಅವರ ಅಂತ್ಯವಂತು  ಬಹಳ ಭೀಕರವಾಗಿ  ಆಗಿ ಹೋಗಿರುತ್ತದೆ.

       ನಿನ್ನ ಜೀವನವನ್ನು   ದೇವರು ಸೃಷ್ಟಿಸಿದ್ದಾರೆ, ದೇವರಂತೆ ಚೆನ್ನಾಗಿ ಬಾಳು, ನಿನ್ನ ಒಳಿತನ್ನು ಬಯಸುವವರೊಂದಿಗೆ  ಜೀವಿಸು. ಜೀವನದಲ್ಲಿ ಅಹಂಕಾರಗಳನ್ನು ಬದಿಗಿಟ್ಟು  ಮನೆಗೆ ಮತ್ತು ಸಮಾಜಕ್ಕೆ  ಒಳ್ಳೆಯ ವ್ಯಕ್ತಿಯಾಗಿ ಬಾಳು.

                ✍️ಮಾಧವ. ಕೆ. ಅಂಜಾರು 









Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ