(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ
✍️Madhav. K. Anjar
ನನ್ನ ಹೃದಯ ಹಗುರಗೊಳಿಸಲಷ್ಟೇ..... ನೋವನ್ನು ಮರೆಸಿ ನನ್ನನ್ನು ನಾನು ಉಳಿಸುತ್ತ ಮಗುವಿನ ಅಗಲುವಿಕೆಯ ಸಾಂತ್ವನ ಬಿಟ್ಟು ಮತ್ತೇನು ಸಾಧ್ಯ ಭಗವಂತ 🙏🏿ಕ್ಷಮಿಸು.
(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ! ನೀವೆಲ್ಲರೂ ಕ್ಷೇಮವಾಗಿರಿ, ದೇವರು ನನ್ನನ್ನು ಬಹಳವಾಗಿ ಇಷ್ಟಪಟ್ಟ ನನಗೆ ಆತನ ಪಾದ ಸೇರಲು ಅವಕಾಶ ಕೊಡಿ.... ನಾನೆಲ್ಲಿದ್ದರೂ ನಿಮ್ಮೊಳಗಿರುವೆ, ಬೇಸರ ಬೇಡ, ನನ್ನ ಅಪ್ಪ ಅಮ್ಮನ ಹೃದಯದಲ್ಲಿ ಹಾಯಾಗಿರುವೆ, ಅವರು ತಂದು ಕೊಟ್ಟ ಪ್ರತೀ ಉಡುಗೊರೆ, ಎಲ್ಲವೂ ನನಗೆ ತುಂಬಾ ಖುಷಿ ಕೊಟ್ಟಿದೆ, ಆದರೇನು ಮಾಡಲಿ ದೇವರು ಸುಮಾರು ತಿಂಗಳ ಹಿಂದೆಯೇ ಬರಹೇಳುತಿದ್ದ, ಬರಲಾರೆ ಎಂದು ಹೇಳಿದರೂ ಕೇಳಲಿಲ್ಲ ಕರೆದುಬಿಟ್ಟ. ಆ ಪುಟ್ಟ ಹೆಜ್ಜೆಗಳನ್ನೀಡುತ್ತ, ಅಂಗಳದಲ್ಲಿ ಅಣ್ಣ ತಮ್ಮ ತಂಗಿಯ ಜೊತೆಯಾಗಿ ಕಣ್ಣಮುಚ್ಚಾಲೆ, ಆಡಿದ ನೆನಪುಗಳು, ಅಪ್ಪ ಅಮ್ಮ ಗೆಳೆಯ ಗೆಳತಿಯರೊಂದಿಗೆ ಆಟವಾಡಿ ಸುಸ್ತಾಗಿ ರಾತ್ರಿ ಕನಸಲ್ಲೂ ನನ್ನ ಪ್ರೀತಿಯ ಎಲ್ಲರನ್ನು ನೋಡುತಿದ್ದೆ, ನಿಮ್ಮೆಲರ ನಗು ಆಶೀರ್ವಾದ ಚಿಕ್ಕ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿಯಿತು. ನಾನೇನು ತೊಂದರೆ ಮಾಡಿದ್ದರೂ ಕ್ಷಮಿಸಿ...... ನನಗೆ ಕೊನೆಯ ಕ್ಷಣದಲ್ಲಿ ನೋವನ್ನು ತಡೆಯುವ ಶಕ್ತಿ ಆ ದೇವರು ಕೊಟ್ಟಿರುತ್ತಾನೆ, ಚಿಂತಿಸಬೇಡಿ..... ನನ್ನ ಪಯಣ ಮುಗಿಯಿತು....
ಆ ಮುಗ್ದ ಮಗುವಿನ ನೋವನ್ನು ಹೇಗೆ ಹೇಳಲಿ ನಾನು! ನನ್ನ ಬರಹ ಪ್ರೀತಿಯ ಸಾನ್ವಿಗೆ, ನಾನೆಲ್ಲೋ ನೀನೆಲ್ಲೋ ನಿಮ್ಮ ಅಣ್ಣ, ಮಾವ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವಷ್ಟರಲ್ಲೇ ದಿನಾಲೂ ನೋವು ತಿನ್ನುತ್ತಾ, ಮರೆಯಲಾಗದ ನಿನ್ನನು ಕೊನೆಗೆ ಕಣ್ಣಮುಚ್ಚಾಲೆ ಆಟದಂತೆ ಅಡಗಿ ಕುಳಿತೆಯ ಮಗುವೇ? ಆ ದೇವರಲ್ಲಿ ನಾವೆಲ್ಲರೂ ಬೇಡಿಕೊಂಡೇವು, ನಮ್ಮ ಸಾನ್ವಿಯನ್ನು ಆದಷ್ಟು ಬೇಗ ಸರಿಮಾಡು ಅವಳು ಇನ್ನೂ ಚಿಕ್ಕವಳು ಅವಳಿಗೆ ಯಾಕೆ ಈ ನೋವನ್ನು ಕೊಟ್ಟುಬಿಟ್ಟೆ? ಅವಳು ಮಾಡಿರುವ ತಪ್ಪಾದರೂ ಏನು? ನಾವು ಮನುಷ್ಯರು ನಮ್ಮನ್ನು ಕ್ಷಮಿಸಿ ರಕ್ಷಿಸು ನಮ್ಮ ಪ್ರಾರ್ಥನೆ ನಿನಗೆ ಕೇಳಲಿಲ್ಲವೇ? ಭಗವಂತನಾದ ನಿನಗೆ ಅವಳು ಅಷ್ಟು ಇಷ್ಟವಾದಳು ಎಂದರೆ ಕರುಳ ಕುಡಿಗೆ ಅದೆಷ್ಟು ನೋವು ಆಗಿರಬಹುದು ನಿನಗೆ ತಿಳಿಯಲಿಲ್ಲವೇ?
ಮಗುವೊಂದು ಒಂದು ಮನೆಯಲ್ಲಿ ಜನ್ಮವಿತ್ತಾಗ ಸಾವಿರಾರು ಕನಸುಗಳು, ಮನೆ ನಂದನವನ, ಮನೆ ತುಂಬಾ ಗದ್ದಲ, ನಗು, ಆಟದ ಉಪಕರಣ, ಕಥೆ, ನೃತ್ಯ, ಕವನ, ನಟನೆ ಎಲ್ಲವೂ ಮನೆಯಲ್ಲಿ ತೊಡಗುತ್ತದೆ, ಮಕ್ಕಳಿರುವ ಮನೆ ಯಾವತ್ತೂ ಸದ್ದು ಗದ್ದಲ ತಮಾಷೆ ಎಲ್ಲವನ್ನೂ ಹೊಂದುತ್ತ ವರುಷಗಳು ಅದೆಷ್ಟು ವೇಗವಾಗಿ ಹೋಗಿಬಿಡುತ್ತದೆ. ಮೊನ್ನೆ ಮೊನ್ನೆ ನೋಡುತಿದ್ದ ಮಗು ಇಷ್ಟು ಬೇಗ ಬೆಳೆದೋಯ್ತು ಇನ್ನೂ ಅವರ ಕನಸನ್ನು ನನಸು ಮಾಡಲು ಅಪ್ಪ ಅಮ್ಮ ಪಡುವ ಕಷ್ಟ್ಟಗಳು ಒಂದೆರಡು ಅಲ್ಲವೇ ಅಲ್ಲ, ಆದರೆ ಪ್ರಪಂಚದಲ್ಲಿ ಸಾವಿರಾರು ಘಟನೆ, ಪ್ರಕೃತಿಯ ವಿಕೋಪ, ಸೃಷ್ಟಿಯ ನಿಯಮದಂತೆ ಎಲ್ಲವೂ ಒಂದಲ್ಲ ಒಂದು ದಿನ ಮಣ್ಣಾಗುತ್ತದೆ. ಪ್ರತಿಯೊಂದು ಜೀವ, ಜೀವನ ಕೊನೆಯಾಗುವಾಗ ಬದುಕಿದ್ದವರು ಮರುಗಬೇಕು ಅಷ್ಟೇ ಆದರೆ ನಮ್ಮಿಂದ ಆಗದೇ ಇರುವ ಕಾರ್ಯಕ್ಕೆ ದೇವರು ಸಹಾಯ ಮಾಡುತ್ತಾನೆ ಎಂಬ ಭರವಸೆಯಿಂದ ಬದುಕುತ್ತೇವೆ.
ಬದುಕಿನಲ್ಲಿ ಎಷ್ಟು ಎಷ್ಟು ಜಾಗ್ರತೆ ಇದ್ದರೂ ಸಾಲದು, ಅಂತೂ ಇಂತೂ ಊಹಿಸಲು ಅಸಾಧ್ಯವಾದ ಸಮಸ್ಯೆಗಳಿಗೆ ತುತ್ತಾಗಿ ಜೀವ ಕಳೆದುಕಳ್ಳುವ ಮಕ್ಕಳು ಮತ್ತು ದೊಡ್ಡವರು. ಸಾವೆನ್ನುವುದು ಎಲ್ಲರಿಗೂ ಒಂದಲ್ಲ ಒಂದು ದಿನ ಇದೆ. ಆದರೆ ಅದರ ಮೊದಲು ನಡೆಯುವ ಅನೇಕ ನಿದರ್ಶನಗಳು ನಮಗೆ ತಡೆದುಕೊಳ್ಳುವ ಶಕ್ತಿ ಆ ದೇವರೇ ಕೊಡಬೇಕು ವಿನಃ ನೋವನ್ನು ಶಕ್ತಿ ಇಲ್ಲದೇ ಹೋದಲ್ಲಿ ಬದುಕು ಇನ್ನಷ್ಟು ದುಸ್ತರವಾಗುತ್ತದೆ. ಒಂದು ಮನೆಯಲ್ಲಿ ಒಂದು ಜೀವ ಹೋದಾಗ ಆಗುವ ಪರಿಣಾಮ ಊಹಿಸಲು ಅಸಾಧ್ಯ. ಯಾರ ಕೊನೆ ಎಲ್ಲಿ ಬರೆದಿದೆಯೋ ಗೊತ್ತಿಲ್ಲ, ಯಾರ ಕಷ್ಟಗಳು ಎಲ್ಲಿ ಕೂಡಿದೆಯೋ ಗೊತ್ತಿಲ್ಲ, ನಾಲ್ಕು ದಿನದ ಈ ಜೀವನದಲ್ಲಿ ಏರಿಳಿತ ಆಗುವ ಎಲ್ಲರೂ ತಮ್ಮ ಮನಸ್ಸನ್ನು ಗಟ್ಟಿಯಾಗಿಸಿ ಮುನ್ನಡೆಯುವ ಶಕ್ತಿಯನ್ನು ಕಾಣದ ಶಕ್ತಿ ಕೊಡುತ್ತಾನೆ ಎಂದು ಭಾವಿಸುತ್ತೇನೆ.
ಜೀವನದಲ್ಲಿ ಅತೀ ಪ್ರೀತಿ ಮಾಡಿದರೂ ಕಷ್ಟ, ಅತೀ ನೋವು ಕೊಟ್ಟರು ಕಷ್ಟ, ಎಲ್ಲವೂ ಇದ್ದರೂ ಕಷ್ಟ, ಇಲ್ಲದೇ ಇದ್ದರೂ ಕಷ್ಟ, ಒಂದಲ್ಲ ಒಂದು ಕೊರತೆಗಳಿಂದ ಕೊರಗಿ ಬದುಕುವ ಹೆಚ್ಚಿನ ಜನರು ಶಾಶ್ವತ ವಿರುವಂತೆ ವರ್ತಿಸುತ್ತ, ಅನೇಕ ತರಹದ, ಬಣ್ಣ ಬಣ್ಣದ ಜೀವನದಲ್ಲಿ ತೊಡಗಿಸಿಕೊಳ್ಳುತ್ತಾರೆ, ಕೊನೆಯ ಘಳಿಗೆಯಲ್ಲಿ ನಾವೇನು ನಮ್ಮ ಶಕ್ತಿ ಏನು, ನಾನು ಮಾಡಿದ ಒಳ್ಳೆಯ ಕೆಲಸ, ಪ್ರೀತಿ ವಾತ್ಸಲ್ಯ ಎಲ್ಲವೂ ಕಣ್ಣೆದುರಿಗೆ ಬರುತ್ತದೆ ಅಲ್ಲವೇ?
ಇರುವ ಅಲ್ಪ ದಿನವನ್ನು ಚೆನ್ನಾಗಿ ತೆಗೆಯಲು ಆಗುತ್ತಿಲ್ಲ ಅಲ್ಲವೇ ಯಾಕೆಂದರೆ ನಮ್ಮಲಿರುವ ಆಸೆ, ಅಸೂಯೆ, ದ್ವೇಷ, ಮದ, ಮತ್ಸರ, ಅಹಂಕಾರ, ಅವನು ಮುಂದೆ ಹೋದರೆ ಹೇಗೆ ಉರುಳಿಸಲಿ ಎಂಬ ಚಿಂತೆ, ಅವರು ದೊಡ್ಡ ಮನೆ ಕಟ್ಟಿದರೆ ನಾನು ಹೇಗೆ ಮಾಡಲಿ ಎಂಬ ಚಿಂತೆ, ಅವರು ಐಶ್ವರ್ಯ ಕಾರು ತೆಗೆದುಕೊಂಡರೆ ನಾನು ಹೇಗೆ ಮಾಡಲಿ ಎಂಬ ಪೈಪೋಟಿಯಲ್ಲಿ ನಮ್ಮೆಲ್ಲರ ಜೀವನ ಬಹಳ ಅತಿವೇಗದಲ್ಲಿ ಮುಗಿಯುತ್ತಿದಂತೆ, ಸಂತೋಷ, ಸಾಧನೆ, ಪ್ರೀತಿ, ಸಂಸಾರ, ಅಪ್ಪ ಅಮ್ಮ, ಗಂಡ, ಹೆಂಡತಿ, ಅತ್ತೆ, ಸೊಸೆ, ನಾದಿನಿ ಎಲ್ಲಾ ಸಂಬಂಧ ದೂರ ದೂರ ಮಾಡುತ್ತ ನಾನು ನಾನೆಂಬ ಹಠಕ್ಕೆ ಬಿದ್ದು ದಿಕ್ಕಿಲ್ಲದೇ ಮಣ್ಣಾಗುವ ಜೀವಗಳು.... ಮನುಷ್ಯ ಜೀವನ ಮೂರು ದಿನ.... ಹುಟ್ಟು ಯವ್ವನ ಮುಪ್ಪು.... ಈ ಮೂರು ದಿನಗಳಲ್ಲಿ ನಡೆಯುವ ಆಟಗಳು ನಮಗೆ ತಿಳಿಯದೆ ಇರುವಂತದ್ದು.
ಸಾನ್ವಿಯ ಬದುಕು ಚಿಕ್ಕದಾಗಿದ್ದರೂ ಒಂದೊಂದು ಪಾಠವನ್ನು ಲೋಕಕ್ಕೆ ಹೇಳುವ ಪ್ರತೀ ಘಟನೆಗಳು ಕೆಲವರು ಅರ್ಥ ಮಾಡಿಕೊಂಡು ಬದುಕಿದರೆ ಇನ್ನು ಕೆಲವರು ಪಕ್ಕದ ಮನೆಯಲ್ಲಿ ಬೆಂಕಿ ಬಿದ್ದರೆ ನನಗೇನು ಅನ್ನುತ್ತಾ ಅದೇ ಚಾಳಿ ಮುಂದುವರಿಸಿ ಅನ್ಯಾಯ ಜೀವನ ನಡೆಸಿ ಕೊನೆಯಗುತ್ತಾರೆ.... ಒಳಿತು ಮಾಡು ಮನುಜ ನೀನಿರುವುದು ಒಂದು, ಎರಡು ಜಾಸ್ತಿ ಎಂದರೆ ಮೂರು ದಿವಸ.
ಸಾನ್ವಿಯ ಅಗಲಿಕೆಯಿಂದ ನೋವನ್ನು ಅನುಭವಿಸುತ್ತಿರುವ ಮನೆ ಮತ್ತು ಕುಟುಂಬಕ್ಕೆ ಶ್ರೀ ದೇವರು ಕಾಪಾಡಲಿ, ಸಾನ್ವಿಯ ಹೆಸರು ಗುಣ ನಡತೆ ಎಲ್ಲವೂ ಪ್ರಪಂಚದಲ್ಲಿ ಜನಿಸುವ ಮಕ್ಕಳಲ್ಲಿ ಸೇರಿಕೊಳ್ಳಲಿ........
✍️ಮಾಧವ. ಕೆ. ಅಂಜಾರು
Comments
Post a Comment