(ಲೇಖನ -112)ಗಲ್ಫ್ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ?

(ಲೇಖನ -112) ಗಲ್ಫ್ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ? ನಿಮ್ಮ ಕುತೂಹಲಕ್ಕೆ ನನ್ನೆರಡು ಮಾಹಿತಿ. ಹಬ್ಬದ ಸಮಯಬಂದಾಗ ಕುಟುಂಬ, ಗೆಳೆಯ, ಗೆಳತಿ ಸಮಾಜದಲ್ಲಿ ಸಂತೋಷ ಸಡಗರ, ಹೊಸ ಬಟ್ಟೆ, ವಾಹನ, ಇನ್ನಿತರ ಆಸೆಗಳ ಅನಾವರಣ. ಹಬ್ಬ ನಮ್ಮ ಕನಸುಗಳನ್ನು ನನಸುಮಾಡುವ ಶಕ್ತಿಯನ್ನು ಹೊಂದಿರುತ್ತವೆ ಎಂದು ಹೇಳಬಹುದು. ಯಾಕೆಂದರೆ ಪ್ರತೀ ವರುಷದ ಹಬ್ಬದ ದಿನದಂದು ನಾವುಗಳು ತೆಗೆದುಕೊಳ್ಳುವ ನಿರ್ಧಾರ ನನಸಾಗಿರುತ್ತದೆ. ಉದಾಹರಣೆಗೆ ವರುಷದ ಮೊದಲನೆಯ ಹಬ್ಬ ಯುಗಾದಿ, ಅಂದು ನಾವುಗಳು ಹೊಸ ಮನೆಯನ್ನು ಕಟ್ಟುವ, ಹೊಸ ವಾಹನ ತೆಗೆದುಕೊಳ್ಳೋಣ ಅಥವಾ ಇನ್ನಿತರ ವಿವಿಧ ಆಸೆಗಳ ಪಟ್ಟಿಯನ್ನು ನಮ್ಮ ಮನಸ್ಸಿನೊಳಗೆ ಇಟ್ಟುಕೊಂಡು ನಮಗೆ ಗೊತ್ತಿಲ್ಲದೆಯೇ ಸಾಕಾರಗೊಳ್ಳಲು ಪ್ರಯತ್ನಿಸಿ ಹೊಸ ವರುಷ ಬರುತ್ತಿದ್ದಂತೆ ನಮ್ಮ ಯೋಜನೆ ಕಾರ್ಯರೂಪಕ್ಕೆ ಬಂದಿರುತ್ತದೆ. ಹಬ್ಬದ ವಾತಾವರಣದೊಂದಿಗೆ ನಮ್ಮ ಮನೆ ಮನ ಖುಷಿಯಾಗಿರುತ್ತದೆ.

       ಸಂಸ್ಕಾರ, ಸಂಸಾರ ಇವೆರಡನ್ನು ಸಂತೋಷದಿಂದ ನೋಡಿಕೊಂಡಾಗ ನಮಗೆ ಉನ್ನತಿಎಂಬುದು ತಾನಾಗಿಯೇ ಬರುತ್ತದೆ ಅನ್ನುವ ಅಭಿಪ್ರಾಯ. ಸಾಗರದಾಚೆಯ ದೇಶ ಅದೂ ಗಲ್ಫ್ ರಾಜ್ಯದಲ್ಲಿ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ, ದೀಪಾವಳಿಯ ಸಂಧರ್ಭದಲ್ಲಿ ಮನೆಗೆ ದೀಪಾಲಂಕಾರ, ಹೊಸ ಬಗೆಯ ತಿಂಡಿ ತಿನಸು, ಭೋಜನ ಮತ್ತು ಕೆಲವರು ವಿಶಿಷ್ಟ ರೀತಿಯಲ್ಲಿ ಸುಂದರವಾದ ಬಟ್ಟೆಗಳನ್ನು ಧರಿಸಿ ದೇವರಿಗೆ ನಮಿಸಿ ಸಿಹಿ ತಿಂಡಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ. ಇಲ್ಲಿ ಪ್ರತಿಯೊಂದು ಧರ್ಮದ ಜನರು ತಮ್ಮ ಹಬ್ಬಗಳಲ್ಲಿ ಒಬ್ಬರಿಗೊಬ್ಬರು ಶುಭಾಶಯ ಕೋರುತ್ತಾ ನಗು ನಗುತ್ತಾ ತಮ್ಮ ದಿನನಿತ್ಯದ ಕೆಲಸಕ್ಕೆ ಅಣಿಯಗುತ್ತಾರೆ.

       ಪಟ್ಟಣದ ಅನೇಕ ಅಂಗಡಿ ಅಥವಾ ದೊಡ್ಡ ಮಟ್ಟದ ಶಾಪಿಂಗ್ ಮಾಲ್ ನಲ್ಲಿ ದೀಪಾವಳಿ, ರಂಜಾನ್ , ಕ್ರಿಸ್ಮಸ್ ಹಬ್ಬಗಳು ಬಂದಾಗ ಅದಕ್ಕೆ ತಕ್ಕಂತೆ ಬೇಕಾಗುವ ಸಾಮಗ್ರಿಗಳನ್ನು ತಂದಿಟ್ಟು ಎಲ್ಲರಿಗೂ ಅನುಕೂಲಮಾಡಿಕೊಡುತ್ತಾರೆ. ಹಬ್ಬಗಳು ತುಂಬಾನೇ ಸಂಭ್ರಮದಿಂದ ನಡೆಸುತ್ತಾರೆ. ಮನೆಯೊಳಗೇ ಗೂಡು ದೀಪ, ಮನೆಯ ಹೊರಗೆ ವಿದ್ಯುತ್ ದೀಪಾಲಂಕಾರ, ತಮ್ಮ ಊರನ್ನು ನೆನೆಸುತ್ತ ಚಿಕ್ಕ ಪುಟ್ಟ ಸಭಾ ಕಾರ್ಯಕ್ರಮ ಮಾಡಿ ತೃಪ್ತಿ ಪಡೆಯುತ್ತಾರೆ. ಪ್ರತಿ ವರುಷ ಬರುವ ದೀಪಾವಳಿಗೆ ನಾವು ಊರಿಗೆ ಹೋಗಿ ನಮ್ಮ ಸಂಸಾರದ ಎಲ್ಲರೊಂದಿಗೆ ಹಬ್ಬ  ಆಚರಿಸಬೇಕೆಂದು ಬಯಸುತ್ತಾರೆ.

     ಇಲ್ಲಿ, ಊರಿನಲ್ಲಿ ಸಿಗುವ ಪ್ರತಿಯೊಂದು ವಸ್ತುಗಳು ಲಭ್ಯವಾಗಿರುತ್ತದೆ, ಹೂ, ಹಣ್ಣು, ದೀಪಾಲಂಕಾರ ವಸ್ತು, ಆಯಾಯ ಹಬ್ಬಕ್ಕೆ ಸಂಬಂಧಪಟ್ಟ ವಸ್ತು ಸುಲಭವಾಗಿ ಸಿಗುತ್ತದೆ. ಹಾಗಾಗಿ ಹಬ್ಬದ ಆಚರಣೆಗೆ ತೊಂದರೆಗಳನ್ನು ಎದುರಿಸುವುದಿಲ್ಲ. ಹೆಚ್ಚಿನ ಜನರು ಬಹುಮಹಡಿ ಕಟ್ಟಡದಲ್ಲಿ ವಾಸವಾಗಿರುವ ಕಾರಣ ಅಕ್ಕ ಪಕ್ಕದ ಜನರಿಗೆ ಸಿಹಿತಿಂಡಿ, ಪಾಯಸ ನೀಡಿ ಸಂಭ್ರಮಪಡುತ್ತಾರೆ. ಅಥವಾ ಕೆಲವು ಹೋಟೆಲುಗಳು ಹಬ್ಬಕ್ಕೆ ಸಂಬಂಧಪಟ್ಟ ಅಡುಗೆಗಳನ್ನು ಮಾಡಿ ಇನ್ನಷ್ಟು ಮೆರುಗನ್ನು ನೀಡುತ್ತಾರೆ.

     ನಮ್ಮ ಊರಿನಲ್ಲಿ ಸಿಗುವ, ಕಬ್ಬು, ಕಾಯಿ,ಬಣ್ಣ, ಹಣ್ಣುಗಳು, ತರಕಾರಿ, ಬಟ್ಟೆ, ಮಣ್ಣಿನ ಪರಿಕರ, ಹೀಗೆ ಎಲ್ಲವೂ ಸಿಗುವುದರಿಂದ ಹಬ್ಬದ ಆಚರಣೆಗೆ ತೊಂದರೆಗಳು ಆಗುವುದಿಲ್ಲ. ಬಹಳ ದೊಡ್ಡ ಮಟ್ಟದ ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಮಾಡುವ ಕೆಲವು ಸಂಘ ಸಂಘಟನೆ ಊರಿನ ಹಬ್ಬದ ವಾತಾವರಣ ಸೃಷ್ಟಿಸುತ್ತದೆ. ಕನ್ನಡ, ತುಳು, ಕೊಂಕಣಿ, ಮುಸ್ಲಿಂ ಸಂಘದ ಜನರೆಲ್ಲರೂ ಒಗ್ಗೂಡಿ ವಿವಿಧ ಹಬ್ಬಗಳನ್ನು ಸಂತೋಷದಿಂದ ಆಚರಿಸುತ್ತಾರೆ

       ಕೆಲವು ನಿರ್ದಿಷ್ಟ ಪ್ರದೇಶ ಅಥವಾ ಭಾರತೀಯರು ಹೆಚ್ಚಾಗಿರುವ ಸ್ಥಳದಲ್ಲಿ ಚಿಕ್ಕ ಪ್ರಮಾಣದ ಪಟಾಕಿ, ನಕ್ಷತ್ರ ಕಡ್ಡಿ, ಬಂಡಿ, ರಾಕೆಟ್ ಸಿಡಿಸಿ ಸಾವಿರಾರು ಜನರು ಒಗ್ಗೂಡುತ್ತಾರೆ, ಮಕ್ಕಳು  ದೊಡ್ಡವರು ಎಲ್ಲರೂ ಸೇರಿ ಈ ಹಬ್ಬವನ್ನು ಅದ್ಧುರಿಯಾಗಿ ಮಾಡುತ್ತಾರೆ.

      ನಮ್ಮ ಭಾರತೀಯ ನೆಲದ ಸಂಸ್ಕೃತಿ ಪ್ರಪಂಚದ ಮೂಲೆ ಮೂಲೆಯಲ್ಲಿ ತಮ್ಮದೇ ರೀತಿಯಲ್ಲಿ ಆಚರಣೆ ಮಾಡುತ್ತಾರೆ ಇಲ್ಲಿಯ ಪ್ರಜೆಗಳು ಭಾರತೀಯರ ಹೆಚ್ಚಿನ ಹಬ್ಬಗಳನ್ನು ತಿಳಿದುಕೊಂಡಿರುತ್ತಾರೆ. ರಂಜಾನ್ ಮುಬಾರಕ್, ಹ್ಯಾಪಿ ದೀಪಾವಳಿ ಹ್ಯಾಪ್ಪಿ ಕ್ರಿಸ್ಮಸ್ ಸಂದೇಶಗಳ ರವಾನೆಯೊಂದಿಗೆ ಸಂತೋಷಪಡುತ್ತಾರೆ.

              ✍️ಮಾಧವ. ಕೆ ಅಂಜಾರು 












Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ