(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.
✍️Madhav. K. Anjar
(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್.
ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ. ಅಂತರಾಷ್ಟ್ರೀಯ ಮಟ್ಟದಲ್ಲಿ ದನಿಯಾಗತೊಡಗಿದ ಸೌಜನ್ಯ ಪರ ನ್ಯಾಯ ಹೋರಾಟ. ಈ ಹಿಂದಿನ ಲೇಖನದಂತೆ ಕಲೆಯೊಂದು ಶಕ್ತಿ, ವಿವಿಧ ಕಲೆ ವಿವಿಧ ರೂಪದಲ್ಲಿ ಜನರನ್ನು ತಲುಪುತ್ತದೆ ಮತ್ತು ಜನರನ್ನು ರಂಜಿಸಿ, ಉತ್ತಮವಾದ ಸಂದೇಶವನ್ನು ಮನಸ್ಸಿಗೆ ಮುಟ್ಟುವಂತೆ ಮಾಡುತ್ತದೆ.
ಒಂದು ಸುಂದರವಾದ ಕುಟುಂಬದಲ್ಲಿನ ಪ್ರೀತಿ, ಪ್ರೇಮ ಮತ್ತು ಮೊಬೈಲ್ ಬಳಕೆಯೊಂದಿಗೆ ಭಗ್ನ ಪ್ರೇಮಿಯ ಬಲೆಯಲ್ಲಿ ಸಿಕ್ಕಿ ಒಂದು ದುರಂತ ಅಂತ್ಯ ಕಂಡ ಹೆಣ್ಣು. ಹೌದು ಇದೆಷ್ಟೋ ಮನೆಯಲ್ಲಿ ನಡೆಯುವ ಘಟನೆಗಳು, ಕೆಲವೊಂದು ಪ್ರೇಮ ಪ್ರಕರಣಗಳು ಸುಖ ಅಂತ್ಯ ಕಂಡರೂ, ಹಲವಾರು ಪ್ರೇಮ ಪ್ರಕರಣಗಳು ದುರಂತ ಅಂತ್ಯ ಕಂಡಿರೋ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಿದೆ. ಪ್ರೀತಿಯ ಅಣ್ಣನ ಒಂದು ಮೊಬೈಲ್ ಕೊಡುಗೆ ತಂಗಿಯ ಜೀವನದಲ್ಲಿ ಬದಲಾವಣೆ, ಓದು ಬರಹ ಬದಿಗಿಟ್ಟು ಅಪರಿಚಿತನ ಪ್ರೇಮದ ಬಲೆಗೆ ಸಿಕ್ಕಿ ಕೊನೆಗೆ ಪ್ರೇಮಿಯಿಂದ ಮತ್ತು ಅವನ ಸ್ನೇಹಿತರಿಂದ ಅತ್ಯಾಚಾರ ಮತ್ತು ಹತ್ಯೆಯಾದ ಮುಗ್ದ ಹೆಣ್ಣು. ಹೌದು ಕತೆಗಳನ್ನು ನೋಡಲು ಕೇಳಲು ಸುಲಭ, ಇತ್ತೀಚಿನ ದಿನಗಳಲ್ಲಿ ಸುಳ್ಳು ಪ್ರೇಮ ಪ್ರಕರಣಗಳು ಅತೀ ಹೆಚ್ಚು ಮತ್ತು ದೈಹಿಕ ಸುಖಕ್ಕೆ ನಡೆಯುವಂತಹ ಪ್ರೇಮಗಳೇ ಜಾಸ್ತಿ ಅನ್ನಬಹುದು.! ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ತೊಂದರೆ, ಓದು ಬರಹದಲ್ಲಿ ಚೆನ್ನಾಗಿದ್ದ ವಿದ್ಯಾರ್ಥಿಯ ಬದುಕಿನಲ್ಲಿ ಬದಲಾವಣೆ, ಅಣ್ಣ, ತಂಗಿಗೆ ಪ್ರೀತಿಯಿಂದ ನೋಡುತ್ತಾ ಮನೆಯ ಆಗು ಹೋಗುಗಳನ್ನು ಕೊನೆಯ ಕ್ಷಣದಲ್ಲಿ ತಿಳಿದರೂ, ಪರಿಸ್ಥಿತಿಯನ್ನು ನಿಭಾಯಿಸಲು ಆಗದೇ ಕೊನೆಗೆ ತನ್ನ ತಂಗಿಯ ಬಲಾತ್ಕಾರ ಮತ್ತು ಕೊಲೆಯ ಸುದ್ದಿ ಕೇಳಿ ರೋಧಿಸಿದ ಪ್ರತಿಯೊಂದು ದೃಶ್ಯಗಳು ಕಣ್ಣಂಚಲಿ ನೀರು ತುಂಬಿಸಿತು.
ಇದನ್ನು ನೋಡುತಿದ್ದಂತೆ ಕೆಲವರಿಗೆ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿದಂತಾದರು ಪ್ರೇಕ್ಷಕನಾಗಿ ಕುಳಿತು ಮೂಕ ರೋಧನೆ ಮಾಡಿದಂತಾಯಿತು. ಹಾಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ, ಆರಂಭದಿಂದಲೂ ಕೊನೆಯವರೆಗೂ ನಕ್ಕು ಸುಸ್ತಾಗಿಬಿದ್ದ ಪ್ರೇಕ್ಷಕರು, ಪ್ರತೀ ಕಲಾವಿದನ ಸಂಪೂರ್ಣ ಶ್ರಮ ಮತ್ತು ಉತ್ತಮವಾದ ನಟನೆ ಮನರಂಜನೆಯನ್ನು ಕೊಟ್ಟಿತು.
ಸುಮಾರು ಮೂರು ಘಂಟೆಗಳ ಕಾಲ ನಮ್ಮನ್ನು ನಾವು ಮರೆಯುವಂತೆ ಮಾಡಿದ ಪ್ರತಿಯೊಬ್ಬ ಕಲಾವಿದ ಮತ್ತು ಬಿಲ್ಲವ ಸಂಘ ಕುವೈಟ್ನ ಎಲ್ಲಾ ಸದಸ್ಯರ ಪ್ರಯತ್ನಕ್ಕೆ ಸಾಕ್ಷಿಯಾದ ಈ ನಾಟಕ ಇನ್ನಷ್ಟು ಪ್ರದರ್ಶನಗೊಳ್ಳಲಿ, ಸಮಾಜದ ಕಣ್ಣನ್ನು ತೆರೆಸಲಿ.
ಶ್ರೀಯುತ ಅಣ್ಣಾಮಲೈನಂತಹ ಇನ್ನಷ್ಟು ಅಧಿಕಾರಿಗಳು ನಮಗೆ ಅವಶ್ಯಕತೆ ಇದೆ, ಹಣ ಮತ್ತು ರಾಜಕೀಯದ ನಡುವೆ ಅಧಿಕಾರಿಗಳು ಮತ್ತು ನ್ಯಾಯವು ಹಾದಿ ತಪ್ಪಬಾರದು, ಹೆಣ್ಣುಮಕ್ಕಳು ತನ್ನನ್ನು ತಾನು ಆದಷ್ಟು ರಕ್ಷಿಸಿಕೊಳ್ಳಬೇಕು, ಮನೆ ಅಣ್ಣ ತಮ್ಮ ಸಂಬಂದಿಕರ ಕೆಲವು ಒಳ್ಳೆಯ ಮಾಹಿತಿಯನ್ನು ಗಮನಿಸಬೇಕು, ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಅದರಿಂದ ದುರಂತ ಕಂಡಾಗ ಎರಡೂ ಮನೆಯ ಕಷ್ಟ ನಷ್ಟ ಬೇಸರವನ್ನು ತರುವಂತೆ ಆಗಬಾರದು. ಆರೋಪ ಸಾಬೀತುಪಡಿಸಲು ಸಾಕ್ಷಿ ಮುಖ್ಯ, ಕಾನೂನಿನ ಕಣ್ಣಿಗೆ ಬಟ್ಟೆ ಕಟ್ಟುವ ದುಷ್ಟ ಅಧಿಕಾರಿಗಳು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ನ್ಯಾಯವೆಂಬುವುದು ಮರೀಚಿಕೆ.
ಉತ್ತಮವಾದ ನಿರೂಪಣೆ, ವಿವಿಧ ಭಾಷೆಗೆ ಮಾನ್ಯತೆ, ನೃತ್ಯ, ಪ್ರಹಸನ, ಒಟ್ಟಿಗೆ ಉತ್ತಮ ಗುಣಮಟ್ಟದ ಸಮಾರಂಭ.
ಸರ್ವರಿಗೂ ಶುಭವಾಗಲಿ.....
✍️ಮಾಧವ. ಕೆ. ಅಂಜಾರು.
Thank u😍
ReplyDelete🙏🏿🌹
DeleteSuper
ReplyDelete