Posts

Showing posts from December, 2020

ನಮ್ಮದಾಗಲಿ ಸೌಭಾಗ್ಯ (ಕವನ -40)

ಅಂತೂ ಬಂತು ಹೊಸವರುಷ ಕಳೆದು ಹೋದ ದಿನಗಳ ನೆನೆಸಿದರಂತು  ಈ ವರುಷ ಬದುಕಿದ್ದೆ ಒಂದು ಭಾಗ್ಯ ಸಾವಿರಾರು ಸಾವು, ನೋವು ದುರ್ಘಟನೆಗಳ ಸರಮಾಲೆ ನಮ್ಮದಾಯ್ತು ದೌರ್ಭಾಗ್ಯ ನಮ್ಮದಾಗಲಿ ಸೌಭಾಗ್ಯ ಹರುಷ ತರಲಿ ದಿನನಿತ್ಯ ಹೊಸವರುಷ ನಮ್ಮೆಲ್ಲರ ಭಾಗ್ಯ ಮನ್ನಿಸೆನ್ನ ತಪ್ಪುಗಳ ಲಾಲಿಸೆನ್ನ ಸಿಹಿ ಮಾತುಗಳ ಎನ್ನ ಕಣ್ಣಾಗು ನೀ ಮುಂದಿನ ದಿನಗಳಲಿ ನಿಮಗೂ ನಿಮ್ಮವರಿಗೂ ಹೊಸ ವರುಷದ ಶುಭಾಶಯಗಳು ಪ್ರೀತಿಯೊಂದಿಗೆ               ✍️ಮಾಧವ ನಾಯ್ಕ್ ಅಂಜಾರು 🌷

ನಿನಗಾಗಿ ಕವನ (ಕವನ -41)

ನಿನ್ನ ನಗುವಿಗೆ ನೀನೆ ಕಾರಣ ನಿನ್ನ ನಗುವೇ ನಿನಗೆ ಭೂಷಣ   ನಗಬೇಕಾದರೆ ಬೇಕು ಕಾರಣ ನಗು ನಗುತಾ ಸಾಗಲಿ ಜೀವನ ನಿನ್ನ ನಗುವಲಿ ನನ್ನ ಚಾರಣ ನಿನ್ನ ಮೊಗದಲಿ ಸಾವಿರ ಗುಣ ನಿನ್ನೊಂದಿಗೆ ಇರುವ ಕಾರಣ ಎನ್ನ ಬದುಕು ಹಸಿರು ತೋರಣ ನಿನಗಾಗಿಯೇ ನನ್ನ ಈ ಪ್ರಾಣ ಸಣ್ಣ ಸಣ್ಣ ಜಗಳ ಬಣ್ಣ ಹೊನ್ನಂತೆ ನಿನ್ನ ಈ ಕವನ ಬೆಳಗುತಲಿರಲಿ ಜೀವನ ಕವನ       ✍️ಮಾಧವ ನಾಯ್ಕ್ ಅಂಜಾರು 🌷          

ತಿಳುವಳಿಕೆ (ಕವನ -42)

ಸಂಸ್ಕಾರ ಇಲ್ಲದವಳು ಹಸೆಮಣೆ ಏರಬಾರದು ಜವಾಬ್ದಾರಿ ಇಲ್ಲದವರು ಸಂಸಾರ ಮಾಡಬಾರದು ಸಹನೆ ಇಲ್ಲದವಳು ಮಕ್ಕಳನ್ನು ಹೇರಬಾರದು ಪ್ರೀತಿಯೇ ಇಲ್ಲದವನು ಗಂಡನಾಗಿ ಇರಬಾರದು ನ್ಯಾಯ ಅರಿಯದವನು ನ್ಯಾಯವಾದಿ ಆಗಬಾರದು ಸತ್ಯವಿಮರ್ಶೆ ತಿಳಿಯದವನು  ನ್ಯಾಯಾಧೀಶ ಆಗಬಾರದು       ✍️ಮಾಧವ ನಾಯ್ಕ್ ಅಂಜಾರು 🌷

ಆಸೆಗಳು (ಕವನ -43)

ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾಬಿಟ್ಟಿ ಬಿಟ್ಟು ಹೋಗದು ಇಷ್ಟಪಟ್ಟು ಮಾಡುವ ದುಡಿಮೆ ಕಷ್ಟವೆಂದು ಅನಿಸಿಕೊಳ್ಳದು ಬೆಟ್ಟದಂತಿರುವ ಆಸೆಗಳಿಗೆ ಸಂಪಾದನೆ ಸಾಕಾಗದು ಕೆಟ್ಟದಾಗಿ ಮಾಡಿದ ಸಂಪಾದನೆ ಹೆಚ್ಚು ಹೊತ್ತು ನಿಲ್ಲದು ಬಿಟ್ಟಿಯಾಗಿ ಸಿಗುವ  ಹಣ ಎಷ್ಟಿದ್ದರೂ ಸಾಕಾಗದು ಸಿಟ್ಟುಗೊಂಡು ಗಳಿಸಿದ ಹಣ ಚಟ್ಟ ಏರಿಸದಿರದು!    ✍️ಮಾಧವ ನಾಯ್ಕ್ ಅಂಜಾರು 🌷

ನನ್ನ ಪ್ರಪಂಚ ನೀನು (ಕವನ -44)

ನಿನ್ನ ಕಣ್ಣ ನೋಟಕೆ ಹೃದಯ ಬಡಿತ ಏರಿಕೆ ಸಣ್ಣ ಹೆಜ್ಜೆಯನಿಡುತ ನಡೆವ ನಿನ್ನ ಸೌಂದರ್ಯವೇ ಶೀಲಾ ಬಾಲಿಕೆ, ಮೈ ಮುಚ್ಚುವ ಸೀರೆಯುಡುತ  ರಂಗು ರಂಗಿನ ಬಳೆ ತೊಟ್ಟು ಹಣೆಗೊಂದು ತಿಲಕವಿಟ್ಟು ಮಲ್ಲಿಗೆ ಮುಡಿದ ಜಡೆಯೊಂದಿಗೆ ಕಾಲ್ಗೆಜ್ಜೆ ಸದ್ದಿನೊಳು ಓಡಾಡುವ ಪರಿ ಕಾಣುತ ಮೈ ಮರೆತು ಸ್ತಬ್ದನಾದೆ, ನನಗೊಲಿದ ಲಕ್ಷ್ಮಿ ನೀನು ನಿನ್ನಲಿರೋ ಶಕ್ತಿಯೇನು ಕ್ಷಣ ಕ್ಷಣಕೂ ನೀ ನುಡಿವ ಮಾತುಗಳೇ ಸವಿ ಜೇನು ನಿನಗಾಗಿ ಎದ್ದೇಳುವ ಪ್ರೀತಿಯ ನಲ್ಲ  ನಾನು ನನ್ನ ಪ್ರಪಂಚವೇ ನೀನು        ✍️ಮಾಧವ ಅಂಜಾರು 🌷

ನಾಚಿಕೆ ತರದಿರಲಿ (ಕವನ -45)

ನಾನಾಡುವ ಮಾತು ನಿನಗೆ ನೋಯಿಸದಿರಲಿ ನಾ ಕೇಳುವ ಪ್ರಶ್ನೆ ನಿನಗೆ ಕಹಿಯಾಗದಿರಲಿ ನಾನುಡುವ ಬಟ್ಟೆ ನಿನಗೆ ಕೀಳಾಗದಿರಲಿ ನಾ ಹಾಕುವ  ಪಾದರಕ್ಷೆ  ನಿನಗೆ ನಾಚಿಕೆ ತರದಿರಲಿ ನಾನಿರುವ ಮನೆ ಅಂತಸ್ತಿಗೆ ಧಕ್ಕೆ ತರದಿರಲಿ  ನಾನಿರುವ ಮಣ್ಣು ಕಳೆಗುಂದದಿರಲಿ ನಾನಿರುವ ಊರು ನಿನಗೆ ದೂರವಾಗದಿರಲಿ ನನ್ನಲಿರೋ ಮನ ನಿನ್ನ ಜೊತೆ ಬಿಡದಿರಲಿ       ✍️ಮಾಧವ ಅಂಜಾರು 🌷

ನಿಮ್ಮ ಜುಟ್ಟು (ಕವನ -46)

ಯಾರೇನೇ ಹೇಳಿದರೂ ಯಾರೇನೇ ಮಾಡಿದರೂ ನಿಮ್ಮ ಸದ್ಗುಣಗಳನು ಬದಲಿಸಬೇಡಿ, ಯಾರೇನೇ ಹೀಯಾಳಿಸಿದರೂ ಯಾರೇನೇ ಮುನಿದರೂ ನಿಮ್ಮ ಜುಟ್ಟನು ಮಾತ್ರ ಅವರ ಕೈಲಿ ಕೊಡಬೇಡಿ ಯಾರಾದರು ಪ್ರೀತಿಸಿದರೆ ಯಾರಾದರೂ ಗೌರವಿಸಿದರೆ ನಿಮ್ಮ ಪ್ರತಿಕ್ರಿಯೆ ಮಾತ್ರ ಸರಿಯಾಗಿ ಇದ್ದಿರಲಿ         ✍️ಮಾಧವ ಅಂಜಾರು 🌷

ಸುಳ್ಳುಗಾರ (ಕವನ -47)

ನಾನು ಸತ್ಯವನ್ನೇ ಹೇಳುತ್ತೇನೆ ಎಂದು ಹೇಳುತಿದ್ದ  ಕಳ್ಳ ತನ್ನ ಸಂಗಡಿಗರೆಲ್ಲರೂ ಸತ್ಯವಂತರೆಂದು ಸುಳ್ಳುಬಿಟ್ಟ, ನಾನು ದೇವರಂತೆ ಎಂದು ಹೇಳುತಿದ್ದ ಸುಳ್ಳ ದೇವರೇ ಇಲ್ಲವೆಂದು ರಾಕ್ಷಸರಂತೆ ನಡೆದುಬಿಟ್ಟ  ನಾನು ನಿಮ್ಮವನೆಂದು  ಹೇಳುತಿದ್ದ ಸುಳ್ಳುಗಾರ ಪ್ರಪಂಚವೇ ಸುಳ್ಳೆಂದು ವಾದಿಸಿ ಮಣ್ಣಾಗಿಬಿಟ್ಟ          ✍️ಮಾಧವ ಅಂಜಾರು 🌷

ಹುಲುಮನುಜ (ಕವನ -48)

ಸಾಕಿ ಸಲಹುವವನಿರುವಾಗ  ನನಗ್ಯಾಕೆ ಚಿಂತೆ ಸಂತೆಯಲ್ಲಿರೋ  ಜೀವಕೆ ಸದ್ದು ಗದ್ದಲದ ಗೋಜಿಲ್ಲ ಯಾರೇನು ಹೇಳಿದರೂ ಬೆಲೆ ನಿರ್ಧಾರವಾಗಿರದು ಹುಲುಮನುಜ ನಾನು ಸಾಗಲಿ ದಿನಗಳ ಕಂತೆ , ಉಸಿರು ಕೊಟ್ಟವನಿರುವಾಗ ಇಲ್ಲ ಕತ್ತು ಹಿಡಿಯುವವರ ಚಿಂತೆ ಮತ್ತು ಬಂದಿರುವ ಹುಳ ಮನುಜನ ನಡುವೆ ಜೀವನದ ಸಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುವ ಬದುಕ ಬಂಡಿಗಿರದಿರಲಿ ವ್ಯಥೆ          ✍️ಮಾಧವ ಅಂಜಾರು 🌷

ನಿನ್ನ ಜೊತೆ (ಕವನ -49)

ನಿನ್ನವರ್ಯಾರೆಂದು ತಿಳಿಯಬೇಕಿದ್ದರೆ ಬದುಕಿನ ಕಷ್ಟಕಾಲವನ್ನು ನೆನಪಿಸಿಕೊಳ್ಳು  ನಿನ್ನೊಳಿತನ್ನು ಬಯಸುವವರ ತಿಳಿಯಬೇಕಿದ್ದರೆ  ಅವರೊಂದಿಗಿದ್ದು ಅರಿತುಕೊಳ್ಳು! ನಿನ್ನ ಹೊಗಳುವವರೆಲ್ಲರೂ ಕೈ ಹಿಡಿಯುವವರಲ್ಲ ನಿನ್ನ ಜೊತೆಗಿರುವ ಎಲ್ಲರೂ ಕೆಟ್ಟವರೂ ಅಲ್ಲ ಸ್ಪಷ್ಟ ನಡತೆಯ ಗುಣ ನಿನ್ನೊಳಗಿದ್ದರೆ ಯಾರ ಭಯವು ಕಾಡೋದಿಲ್ಲ!       ✍️ಮಾಧವ ಅಂಜಾರು 🙏🌷

ಬಯಕೆ (ಕವನ -50)

ಪ್ರೀತಿ ಬಯಸುವವನು ನಯವಿನಯತೆ ತೋರುತ್ತಾನೆ ನಗು ಬಯಸುವವನು ನಗುಮುಖ ತೋರಿಸುತ್ತಾನೆ  ದ್ವೇಷ ಹೆಚ್ಚಾಗಿರುವವನು  ದ್ವೇಷದ ಜೀವನ ಸಾಗಿಸುತ್ತಾನೆ  ಅಸೂಯೆತುಂಬಿರೋನು  ಊರೆಲ್ಲ ಅಸೂಯೆ ತುಂಬುತ್ತಾನೆ ಮಾತು ತಿಳಿದವನು ಸಿಹಿ ಮಾತನ್ನಾಡುತ್ತಾನೆ ಏನನ್ನೂ ಬಯಸದವನು ಮನಬಂದಂತೆ ಇರುತ್ತಾನೆ         ✍️ಮಾಧವ ಅಂಜಾರು 🌷

ಭಯವಿಲ್ಲ (ಕವನ -51)

ನಾನು ಮರೆಯಾದಾಗ ಯಾರು  ಅಳುತ್ತಾರೆ ಅನ್ನೋದು ಎನಗೆ ತಿಳಿಯುವುದಿಲ್ಲ  ನಾನು ಬದುಕಿದ್ದಾಗ ಜೊತೆಯಲ್ಲಿ ಇರುವವರನ್ನು  ನಾ ಮರೆಯೋದಿಲ್ಲ ನಗುವಾಗ ಎನ್ನ ಜೊತೆ ಸೇರುವವರ ಬಗ್ಗೆ ಚಿಂತೆಯಿಲ್ಲ ನೊಂದಾಗ ಜೊತೆಯಿಲ್ಲದವರ ಕುರಿತು ಬೇಸರವೂ ಇಲ್ಲ ಏಕಾಂಗಿಯಾಗಿ  ಬಂದಮೇಲೆ ಒಬ್ಬನೇ ಹೋಗಲು ಭಯವಿಲ್ಲ         ✍️ಮಾಧವ ಅಂಜಾರು 🌷

ಉಡುಗೊರೆ (ಕವನ -52)

ದೇವರು ಬರೆದ ಸಂಖ್ಯೆಯನು ಬದಲಿಸಲಾಗದು  ತಂದೆ ತಾಯಿಯ ಪಾಠವನು ಮರೆಯಲಾಗದು  ಗೆಳತಿ ಕೊಟ್ಟ ಉಡುಗೊರೆ ಕಳೆದು ಹೋಗದು ಹೆಂಡತಿ ಕೊಟ್ಟ ಮುತ್ತನು ಹೇಳಿಕೊಳ್ಳಲಾಗದು ಗೆಳೆಯನ ಜೊತೆಯ ಹಾಸ್ಯ ಮುಗಿಸಲಾಗದು ಚೆಂದುಳ್ಳಿ ಹುಡುಗಿಯ ನಗುವ ಮರೆತವನಿರನು!     ✍️ಮಾಧವ ಅಂಜಾರು 🌷

ದೇವ ರಚಿತಾ (ಕವನ -54)

ದೇವ ರಚಿತಾ ಈ ಭುವಿಗೆ ನಿನ್ನ ಆಗಮನ ಸುಲಲಿತ ಆ ನಿನ್ನ  ಮೊಗದ ಸೊಬಗಿಗೆ ನಾನಾದೆನು ವಿಚಲಿತ ಪ್ರತಿ ಕ್ಷಣಕೂ ಕಣ್ಣೆದುರಿಗೆ ಬರುವ ನಿನ್ನ ಮುಗುಳುನಗೆ ಮರೆಮಾಚಿತು ನನ್ನೆಲ್ಲ ಚಿಂತೆಗಳ ಸರಮಾಲೆ ಬಾನಂಗಳದ ಮಲ್ಲಿಗೆ ಎನ ಜೀವದ ಸಂಪಿಗೆ ಎಂದಿಗೂ ಜೊತೆಗಿರು ಪರಿಮಳದ ಕಾಡ ಸಂಪಿಗೆ      ✍️ಮಾಧವ ಅಂಜಾರು 🌷

ಮರೆಯಬೇಡ (ಕವನ -55)

ಬದುಕಿರುವಾಗ ಸಾಯಬೇಕೆಂದು ಶಪಿಸಿಕೊಳ್ಳಬೇಡ ಸಾವು ಬಂದಾಗ ಬದುಕಲೆನಿಸಿದರೂ ಬದುಕಲಾಗದು! ಆರೋಗ್ಯವಿರುವಾಗ ಇದ್ದವರಿಗೆಲ್ಲ ತೊಂದರೆ ಮಾಡಬೇಡ  ಅನಾರೋಗ್ಯ ಬಿದ್ದಾಗ ಮಾಡಿದ ಪಾಪ ಜೊತೆಗಿರುವುದು ಮರೆಯಬೇಡ! ಸಂತಸವಿರುವಾಗ ಕೆಟ್ಟ ಘಟನೆಗಳ ನೆನೆದು ಚಿಂತಿಸಬೇಡ ಬೇಸರವಾದಾಗ ಸಂತಸದ ಕ್ಷಣಗಳನು ನೆನೆಯಲು ಮರೆಯಬೇಡ!       ✍️ಮಾಧವ ಅಂಜಾರು 🌷

ಜೀವನ (ಕವನ -56)

ಓಡು ಕುದುರೆಯಂತೆ  ಹಾಡು ಕೋಗಿಲೆಯಂತೆ ಮಾತನಾಡು ಗಿಳಿಯಂತೆ ಹೋರಾಡು ಸೈನಿಕನಂತೆ ಓದು ಜ್ಞಾನಕ್ಕಾಗಿ ಬದುಕು ಪ್ರೀತಿಗಾಗಿ ನಗು ಸಂತೋಷಕ್ಕಾಗಿ ಜೀವಿಸು ಮಾನವನಾಗಿ             ✍️ಮಾಧವ ಅಂಜಾರು 🌷

ಸಿಹಿಮುತ್ತು (ಕವನ -57)

ಸಮುದ್ರದಾಳದ ಮುತ್ತು ನೀನು ಎನ್ನ ಬಾಳಿನುಸಿರೆ ನೀನು ನೀನಿಲ್ಲದೆ,ನಾನಿದ್ದರೆ ಎನ್ನ ಜೀವದ ಪಾಡೇನು! ಬಾನಂಗಳದ ಮಿಂಚು ನೀನು ಮೋಡಗಳ ಮಿಲನದ ಮಳೆಹನಿಯು ನೀನು ಧರೆಗಿಳಿದ ಸಮಯ ಹರುಷವೇನು! ಹೂದೋಟದ ನಡುವೆ  ಕಂಗೊಳಿಸುವ ಗುಲಾಬಿ ನೀನು ನಿನಗಾಗಿ ಬಂದಿರೋ ದುಂಬಿ ನಾನು ಸಿಹಿಮುತ್ತ ಕೊಟ್ಟು ಬಿಡುವೆಯೇನು?          ✍️ಮಾಧವ ಅಂಜಾರು 🌷       

ಚುನಾವಣೆ ಬವಣೆ (ಕವನ -58)

ಚುನಾವಣೆಗಳಲ್ಲಿ ವೇಷ ಕಟ್ಟಿಕೊಳ್ಳಬೇಡಿ ದ್ವೇಷ ಮಾಡಿಕೊಳ್ಳಬೇಡಿ ನಾಶವಾಗಲು ಹೋಗಬೇಡಿ ರಾಜಕೀಯವೆಂದರೆ ಹೊಡೆದಾಟವಲ್ಲ ಜಾತಿ ಧರ್ಮಗಳ ಪೈಪೋಟಿ ಅಲ್ಲವೇ ಅಲ್ಲ ಪಕ್ಷಗಳ ಮುಖಂಡರು ಕಾಸು ಮಾಡಲು ಇಳಿಯಬೇಡಿ ನಿಷ್ಠಾವಂತ ಮುಖಂಡರನ್ನು ನೋಡಿ ಆರಿಸಿಕೊಳ್ಳಿ        ✍️ಮಾಧವ ಅಂಜಾರು 🌷

ಕನಸಿನ ರಾಣಿ (ಕವನ -60)

ಮಾಯಾಜಿಂಕೆ ನೀನು ಆಗೊಮ್ಮೆ ಈಗೊಮ್ಮೆ ಕಣ್ಣೆದುರಿಗೆ ಬಂದು ಓಡಾಡುತ್ತಿರುವೆ ಏನು? ಮೀನಾಕ್ಷಿಯೇ ನೀನು ಕಣ್ಣ ಮಿಟುಕಿಸುವ ನೋಟ ಸಾರಿ ಹೇಳುತಿದೆನಗೆ ಸೌಂದರ್ಯದ ಅರ್ಥವೇನು? ಹಂಸವೇ ನೀನು ನಿನ್ನ ಹೆಜ್ಜೆಯ ಗೆಜ್ಜೆನಾದಕೆ ಸರಿಸಾಟಿ ಕಾಣೆನು ಎನ್ನ ಕನಸಿನ ರಾಣಿ ನೀನು         ✍️ಮಾಧವ ಅಂಜಾರು 🌷

ಸಕ್ಕರೆ ಸಿಗಲಿ (ಕವನ -62)

ಎನ್ನ ಹೊಗಳುವವರಿಗೆ  ಸಕ್ಕರೆ  ಸಿಗಲಿ  ಎನ್ನ ತೆಗಳುವವರಿಗೆ ಮಿಕ್ಕ ಸಕ್ಕರೆ ಸಿಗಲಿ ಹೊಗಳುತ್ತ ಇರುವವರಿಗೆ ನೆಮ್ಮದಿಯಿರಲಿ ತೆಗಳುತ್ತಿರುವವರಿಗೆ ಅಸೌಖ್ಯ ತಟ್ಟದಿರಲಿ ಹೊಗಳುವವರು ತೆಗಳುವವರು ನನ್ನ ಜೊತೆಯಲಿರಲಿ ಅವರಿಲ್ಲದ್ದರೆ ಜೀವನ ಖಾಲಿ             ✍️ಮಾಧವ ಅಂಜಾರು 🌷