ಆರ್ಥಿಕ ಸಹಾಯಕ್ಕಾಗಿ ಮನವಿ ಪತ್ರ


PLEASE READ AND HELP THEM AS MUCH AS POSSIBLE , AND SHARE TO YOUR FRIENDS , SOCIAL WORKERS WHOM YOU KNOW TO GIVE FINANCIAL AND MORAL SUPPORT TO THIS POOR FAMILY.

ಆರ್ಥಿಕ ಸಹಾಯಕ್ಕಾಗಿ ಮನವಿ ಪತ್ರ







 ಮಾನ್ಯರೇ ,

 ನಾನು ಸದಾನಂದ ನಾಯ್ಕ ಪ್ರಾಯ (45 ವರ್ಷ ), ...ನನ್ನ ಇಬ್ಬರು ಮಕ್ಕಳು ಸಚಿನ್ - ಪ್ರಾಯ (21 ವರ್ಷ ), ಸುಶ್ಮಿತಾ -ಪ್ರಾಯ (18 ವರ್ಷ ), ಹೆಂಡತಿ ಸುಜಾತ ಈ ಮೇಲಿನ ವಿಳಾಸ ದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದೇನೆ .

ಎಲ್ಲಾ ಹೃದಯವಂತರಲ್ಲಿ ನನ್ನ ಅಳಲನ್ನು ಹೇಳುತ್ತಿದ್ದೇನೆ , ಅವಿದ್ಯಾವಂತನಾದ ನಾನು ಬಡತನದಿಂದ ಬಳಲುತ್ತಿದ್ದು ನನ್ನ ಮಕ್ಕಳ ಜೀವನವಾದರೂ ಸುಖಮಯವಾಗಿರಲಿ ಎಂದು ಕೂಲಿ ಮಾಡಿ ದುಡಿದು ಜೀವನ ಮಾಡುತ್ತಿರುವಾಗಲೇ ತಾಳಲಾರದ ಕಷ್ಟ ಕಾರ್ಪಣ್ಯಗಳು ಒಂದರ ಹಿಂದೆ ಒಂದು ಎರಗಿ ಬರುತ್ತಿದ್ದು ನನ್ನಿಂದ ನನ್ನ ಕುಟುಂಬ ನಡೆಸಲು ತುಂಬಾ ಕಷ್ಟ ಆಗುತ್ತಿದೆ. ದಿನಕೂಲಿಯಿಂದ ಪಡೆದ ಹಣದಿಂದ ಇಬ್ಬರು ಮಕ್ಕಳ ಶಾಲೆ ಕಾಲೇಜು ಖರ್ಚು ವೆಚ್ಚ ನಡೆಯುತ್ತಿತ್ತು , ಕೆಲಸಮಯದ ಹಿಂದೆ ಸರ್ಕಾರದ ನಬಾರ್ಡ್ ನ ಹೊಸ ರಸ್ತೆ ಯೋಜನೆಯಿಂದಾಗಿ ನನ್ನ ಫಲವತ್ತಾದ ೫೦ ಸೆಂಟ್ಸ್ ಕೃಷಿ ಜಾಗವನ್ನು ಯಾವುದೇ ಪರಿಹಾರ ಇಲ್ಲದೆ ಕಳೆದುಕೊಂಡಿದ್ದೇನೆ. ಎರಡು ವರ್ಷಗಳ ಹಿಂದೆ ಕೆಲಸ ಮಾಡುತ್ತಿರುವಾಗ , ಬಲಕಣ್ಣಿಗೆ ಕಲ್ಲಿನ ಬಲವಾದ ಏಟು ಬಿದ್ದು ಆಸ್ಪತ್ರೆಗೆ ಸೇರಿ ಶಸ್ತ್ರ ಚಿಕಿತ್ಸೆ ಮಾಡಿದ್ದರೂ ಫಲಕಾರಿಯಾಗದೆ ಇದ್ದುದರಿಂದ ಮೂರು ತಿಂಗಳ ಹಿಂದೆಯಷ್ಟೇ ಮತ್ತೊಮ್ಮೆ ಶಸ್ತ್ರ ಚಿಕತ್ಸೆ ಮಾಡಿಯೂ ಉಪಯೋಗವಾಗದೆ ಈಗ ಒಂದು ಕಣ್ಣಿನ ದೃಷ್ಟಿ ಹೊಂದಿಲ್ಲ,ಇದರಿಂದ ನನಗೆ ಕೆಲಸ ಮಾಡಲು ಕೂಡ ತುಂಬಾ ಕಷ್ಟವಾಗುತ್ತಿದ್ದು , ಅಳಿದುಳಿದ ಎಲ್ಲವನ್ನು ಕಳೆದುಕೊಂಡಿದ್ದೇನೆ .

ವಿಧಿಯಾಟ ಇನ್ನೂ ಮುಗಿಯದೆ ಮೊನ್ನೆಯಷ್ಟೇ ನಡೆದ ಅಫಘಾತದಲ್ಲಿ ನನ್ನ ಮಗನ (ಸಚಿನ್) ಬಲಗೈ ಮತ್ತು ಬಲಗಾಲು ಸಂಪೂರ್ಣ ಜಜ್ಜಿ ಹೋಗಿ ಕಾಲಿನ ಮತ್ತು ಕೈಯ ನರ ಮತ್ತು ಎಲುಬು ತುಂಡಾಗಿ ಈಗ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾಗಿದ್ದಾನೆ.ಅಂತಿಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದು , ಈಗ ಕಾಲೇಜಿಗೂ ಹೋಗಲಾರದೆ , ಭವಿಷ್ಯದ ಚಿಂತೆಯಲ್ಲಿ ಬಳಲುತ್ತಿದ್ದಾನೆ. ಸುಮಾರು ಆರು ತಿಂಗಳವರೆಗೆ ನನ್ನ ಮಗನಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ,ಸಂಪೂರ್ಣ ವಿಶ್ರಾಂತಿ ಪಡೆಯಲು ವೈಧ್ಯರು ಹೇಳಿರುತ್ತಾರೆ. ಈ ಪರಿಸ್ಥಿತಿಯಲ್ಲಿ ನಾನೇನು ಮಾಡುವುದು ಎಂದು ತೋಚುತ್ತಿಲ್ಲ . ನನ್ನಲ್ಲಿ ಯಾವುದೇ ತರಹದ ಆದಾಯ ಇಲ್ಲದೆ ಇರೋದರಿಂದ , ನಿಮ್ಮೆಲ್ಲರ ಸಹಾಯವನ್ನು ಈ ಮೂಲಕ ಕೇಳಿಕೊಳ್ಳುತಿದ್ದೇನೆ .

ಸಹೃದಯಿಗಳಾದ ತಾವು ತಮ್ಮಿಂದ ಆದಷ್ಟು ಆರ್ಥಿಕ ಸಹಾಯವನ್ನು ಬಯಸುತ್ತೇನೆ . ನಿಮ್ಮ ಸಹಾಯಕ್ಕೆ ಸದಾ ಆಭಾರಿಯಾಗಿರುತ್ತೇನೆ .

ಬ್ಯಾಂಕ್ ಖಾತೆ ವಿಳಾಸ
ಸಚಿನ್
ಸಿಂಡಿಕೇಟ್ ಬ್ಯಾಂಕ್ , ಮೂಡುಬೆಳ್ಳೆ
ಉಡುಪಿ ,ಕರ್ನಾಟಕ
ಖಾತೆ ಸಂಖ್ಯೆ : 0240-22000-16501
 

ಇತೀ ತಮ್ಮ ವಿಧೇಯ


 ಸದಾನಂದ ನಾಯ್ಕ
ನೆಲ್ಲಿಕಟ್ಟೆ , ಮೂಡುಬೆಳ್ಳೆ
ಉಡುಪಿ
ಮೊಬೈಲ್ :9980664279


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ