ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ

                ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನುವರು, ಈ ಜಗದಲಿ
            ಕತ್ತೆ ಇರದಿದ್ದರೇ ನಾನಿಂದು ಸತ್ತೆ ಎನುವನು ಭಾರವ ಹೊರುವವನು

 ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಅನ್ನುವರು, ಈ ಜಗದಲಿ
 ಮಾತು ಮಾತಿಗೂ ಜಗಳವನು ಕಾಯುತ , ನಾ ನಿನ್ನ ಬಿಡಲಾರೆ ಅನ್ನುವರು ದ್ವೇಷದಲಿ

      ತಂದೆ ತಾಯಿಯೇ ದೇವರು, ಮೊದಲ ಪಾಠ ಅನ್ನುವರು, ಈ ಜಗದಲಿ
ಪ್ರತಿದಿನವೂ ಹೀಯಾಳಿಸುವರು ಹೆತ್ತುಸಲಹಿದ ತಂದೆ ತಾಯಿಯ ಕೆಲ ಮನುಜರು

    ಕಾಯಕವೇ ಕೈಲಾಸ -ಕೈ ಕೆಸರಾದರೆ ಬಾಯಿ ಮೊಸರೆನ್ನುವರು, ಈ ಜಗದಲಿ
       ದಿನಕ್ಕೊಂದು ತುತ್ತು ಅನ್ನವ ಕೊಡದೇ ದುಡಿಸಿಕೊಳ್ಳುವರು ಈ ದಿನದಲಿ

                ಮಾತು ಬೆಳ್ಳಿ ಮೌನ ಬಂಗಾರ ಎನುವರು , ಈ ಜಗದಲಿ
    ಮಾತಾಡದಿದ್ದರೂ...  ಮಾನ ತೆಗೆದು ಮೌನವಾಗಿಸಿ ಬಿಡುವರು,ಈ ಲೋಕದಲಿ

                                                       - ಅಂಜಾರು ಮಾಧವ ನಾಯ್ಕ್

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ