...ಈ ಜಗದಲಿ
ತತ್ತರಿಸಿ ಹೋಗಿರುವೆನು ಈ ಜಗದ ನಾಟಕವ ಕಂಡು
ಕತ್ತರಿಸಿ ಬಿಡುತಿಹುದು ಚಿತ್ತವ ಸುತ್ತಮುತ್ತಲ ಪಾಪಿ ಹಿಂಡು
...ಈ ಜಗದಲಿ
ಸತ್ಯದಲಿ ಇರುತಿಹೆನು ಪ್ರತಿನಿತ್ಯದ ಬದುಕಿನಾಟದಲಿ
ಕುತ್ತಾಗಿ ಬರುತಿಹುದು ಸತ್ಯಕ್ಕೆ ಬೆಲೆ ಇಲ್ಲದೇ ಎತ್ತಲೂ
...ಈ ಜಗದಲಿ
ಹಂಗಿನಾಟವ ಆಡುವರು ನಿನ್ನ ಕಣ್ಣ ಮುಂದೆ ಬಣ್ಣದಿಂದಲಿ
ಪುಂಗಿ ಊದುವರು ಹಲವು ಭಂಗಿಗಳ ತೋರಿಸುವರು
...ಈ ಜಗದಲಿ
ಮಂಗನಾಗುವೆ ಹಲವು ಬಾರಿ ದಂಗುಬಡಿದಂತಾಗುವೆ ನಿಮಿಷದಲಿ
ಚೊಂಗನಂತೆ ಬಂದು ನುಂಗಿ ಬಿಡಲು ನೋಡುವರು
...ಈ ಜಗದಲಿ
ಎದುರು ನೋಡುತ್ತಿರುವೆ ಆನಂದದ ಹೊಳೆಯಲ್ಲಿ ಈಜಾಡಲು
ಮೊಸಳೆಯಂತೆ ಬೆನ್ನಟ್ಟಿ ಬರುತಿಹರು ತಿಂದು ಮುಗಿಸಲು
...ಈ ಜಗದಲಿ
- ಅಂಜಾರು ಮಾಧವ ನಾಯ್ಕ್

Comments
Post a Comment