ತಿರುಗಿನೋಡೊಮ್ಮೆ ಓ ಮನುಜ

        ತಿರುಗಿನೋಡೊಮ್ಮೆ ಓ ಮನುಜ ಜೀವನದ ಪಗಡೆಯಾಟವ
  ಅದೆಷ್ಟು ತಪ್ಪುಗಳ ಮಾಡಿರುವೆಯೋ ,ತಿಳಿದು - ತಿಳಿಯದೆ ನಿನ್ನಾಟದಲಿ

 ಮಾಡಿದ ತಪ್ಪಿಗೆ ತಲೆಬಾಗಿ ನೀನಿದ್ದರೇ , ಚೆಲುವಾಗಿ ಇರಬಹುದು ನಿನ್ನ ಪಯಣ
  ತಪ್ಪೆಂದು ತಿಳಿದು ಅಹಂಕಾರಿಯಾದರೆ , ಕರಗಿ ಹೋಗುವುದು ನಿನ್ನ ಜೀವನ

         ನೀಡುತ್ತಿರು ನೊಂದ ಜೀವಕೆ , ಪ್ರೀತಿಯ ಔತಣವ ಚೆಂದದಲಿ
          ಅದರಿಂದ ನಿನಗಾಗುವುದು ಆನಂದದ ನಿರಂತರ ಅನುಭವ

            ಪಾಪಿ , ನೀನೆಷ್ಟು ಜನರ ಮನದಲಿ ಚೆಲ್ಲಾಟವಾಡಿರುವೆ
         ಆ ಮನದ ಶಾಪವು ನಿನ್ನ ಬಿಡಲಾರದು ತಿನ್ನದೇ ಎಂದಿಗೂ

         ನೀನೆಂದುಕೊಂಡಂತೆ , ಇರಬಹುದು ನಿನ್ನಲ್ಲಿ ಹಣ ಜನ ಬಲ
               ದೇವರು ಮುನಿದರೆ ಪಡುತ್ತಿಯಾ ಪಾಪದ ಫಲ

         ಅತಿಯಾಸೆಗೆ ಬಲಿಯಾಗಿ , ಬಲಿತೆಗೆದುಕೊಳ್ಳಬೆಡ ಬಡವರನು
      ಅಹಂಕಾರವ ದೂರವಿಟ್ಟು ,ಹರುಷದಿಂದಲಿ ಆಡು ಪಗಡೆಯಾಟವ

                                          -ಅಂಜಾರು ಮಾಧವ ನಾಯ್ಕ್ 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ