ನೇಸರ ಮೂಡುತಲಿ
ನೇಸರ ಮೂಡುತಲಿ ತವಕದಿಂದೆದ್ದೆ ನಗು ಮೊಗವ ನೋಡಲು
ಮಿಂಚಿನ ಸಂಚಲನ ಮನದಲಿ ದೀಪ ಉರಿಸಿ ಬೇಡಲು
ಗೀರಿದೆ ವಿಶ್ವಾಸದ ಕಡ್ಡಿಯ, ಪ್ರಾರಂಬಿಸಲು ಧೈರ್ಯದಲಿ
ಬೆಳಗಿತು ಮುತ್ತಿನಂತಹ ದಿನ ಹರುಷದಲಿ
ಆಸೆಗಳ ಸರಮಾಲೆಯ ಪಟ್ಟಿಯ ನಿನ್ನ ಮುಂದಿಟ್ಟೆ
ನಿರಂತರ ನೀಡುವೆಯ ಆತ್ಮಸ್ಥೈರ್ಯದ ಬೆಳ್ಳಿತಟ್ಟೆ
ನೀನಿರಲು ನನಗೇಕೆ ಭಯ, ಕಾಡದು ಇನ್ನಾವುದೇ ಅಪಜಯ
ಬಲಪಡಿಸು ನನ್ನ ಇನ್ನಷ್ಟು , ದುಷ್ಟಶಕ್ತಿಗಳ ಎದುರಿಸಲು
ತಲೆಬಾಗಿರುವೆ ನಿನ್ನ ಚರಣಕೆ ವಿನಂತಿಯನು ಮಾಡುತ
ಕೈ ಬಿಡದಿರು ಎಂದೆಂದಿಗೂ ಸಡಗರವನ್ನು ನೀಡುತ
ನಗುಮೊಗದಿಂದ ಬಾಳ ಬಯಸುವೆ ,ಪಾದ ಸೇವೆ ಮಾಡುತಲಿ
ನೀಡುತ್ತಿರು ಹರುಷದ ಹೊಳೆಯನು ಸದಾ ಎನ್ನ ಬಾಳಲಿ
- ಅಂಜಾರು ಮಾಧವ ನಾಯ್ಕ್
ಮಿಂಚಿನ ಸಂಚಲನ ಮನದಲಿ ದೀಪ ಉರಿಸಿ ಬೇಡಲು
ಗೀರಿದೆ ವಿಶ್ವಾಸದ ಕಡ್ಡಿಯ, ಪ್ರಾರಂಬಿಸಲು ಧೈರ್ಯದಲಿ
ಬೆಳಗಿತು ಮುತ್ತಿನಂತಹ ದಿನ ಹರುಷದಲಿ
ಆಸೆಗಳ ಸರಮಾಲೆಯ ಪಟ್ಟಿಯ ನಿನ್ನ ಮುಂದಿಟ್ಟೆ
ನಿರಂತರ ನೀಡುವೆಯ ಆತ್ಮಸ್ಥೈರ್ಯದ ಬೆಳ್ಳಿತಟ್ಟೆ
ನೀನಿರಲು ನನಗೇಕೆ ಭಯ, ಕಾಡದು ಇನ್ನಾವುದೇ ಅಪಜಯ
ಬಲಪಡಿಸು ನನ್ನ ಇನ್ನಷ್ಟು , ದುಷ್ಟಶಕ್ತಿಗಳ ಎದುರಿಸಲು
ತಲೆಬಾಗಿರುವೆ ನಿನ್ನ ಚರಣಕೆ ವಿನಂತಿಯನು ಮಾಡುತ
ಕೈ ಬಿಡದಿರು ಎಂದೆಂದಿಗೂ ಸಡಗರವನ್ನು ನೀಡುತ
ನಗುಮೊಗದಿಂದ ಬಾಳ ಬಯಸುವೆ ,ಪಾದ ಸೇವೆ ಮಾಡುತಲಿ
ನೀಡುತ್ತಿರು ಹರುಷದ ಹೊಳೆಯನು ಸದಾ ಎನ್ನ ಬಾಳಲಿ
- ಅಂಜಾರು ಮಾಧವ ನಾಯ್ಕ್
Comments
Post a Comment