ಬದುಕೆಂಬ ನೌಕೆ

ಬದುಕೆಂಬ ನೌಕೆಯಲಿ ಸಾಗುತಿಹೆನು ದಡವ ಸೇರಲು
ಸೇರಿ ನಲಿಯಲು ಹವಣಿಸುತಿದೆ ದಣಿದ ಪಯಣವು

 ಕಂಡೆ ದೂರ ತೀರದಲಿ ನಸುನಗೆಯ ಹೊಂಗಿರಣ
ಸಮೀಪಿಸಿದೆ ಆಲಂಗಿಸಲು ಕ್ಷಣ ಕ್ಷಣದ ಸಿಂಚನ

ಖುಷಿಯಾಯಿತು ಮಿಲನ , ಸ್ಪರ್ಶಿಸಿದೆ ಅಂತಕರಣ 
ಒಡೆಯದಿರಲಿ ಮನವೆಂಬ ಕನ್ನಡಿಯು ; ಪ್ರತಿಬಿಂಬಿಸಲಿ

ಸದ್ಗುಣಗಳ ಸರಮಾಲೆ ನೀಡುತಿರಲಿ ರಹದಾರಿ
ಮನದುಂಬಿ ನೀಡುವೆನು   ಹೂವನು ಸ್ನೇಹದಲಿ

ತೆಗೆದುಕೋ ನಾ ತಂದ ಸಿಹಿಯನ್ನು ಪ್ರೀತಿಯಲಿ
ಹರಸು ನೀ ಈ ನಾವಿಕನ ಪಯಣವು ದಡ ಮುಟ್ಟಲಿ

                        - ಅಂಜಾರು ಮಾಧವ ನಾಯ್ಕ್







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ