ನನ್ನ ಚಿನ್ನ
ನಾ ಎದ್ದೇಳುವ ಮುನ್ನ ಮೆಲ್ಲನೆ ಎದ್ದಳು ನನ್ನ ಚಿನ್ನ
ಕೊಟ್ಟಳು ಹಣೆಗೆ ಸಿಹಿಯಾದ ತುಟಿಯಲಿ ಅಂತರಂಗದ ಮುತ್ತನು
ಅದೇನೋ ತುಂಬಿದಂತಾಯಿತು ಪ್ರೀತಿಯ ಕೊಡಪಾನ
ಬತ್ತಿ ತುಳುಕದಿರಲಿ ದಿನನಿತ್ಯದ ಬದುಕ ಬವಣೆಯಲಿ
ಮೋಹದಲಿ ನೀಡಿದಳು ತಿಂಡಿ ತಿನಸುಗಳ ಸವಿಯಲು
ನಾನನುಭವಿಸಿದೆ ಊಟೋಪಚಾರಗಳ ಸರಮಾಲೆಯನು
ಮನದುಂಬಿ ಹೇಳಬಯಸಿದೆ ನೀ ನನ್ನ ಬಂಗಾರ
ಹೇಳುವ ಮುನ್ನ , ನಾ ಕಂಡೆ ಅವಳ ಮುಖದಲಿ ಚಿತ್ತಾರ
ಇರಲಿ ಎಂದೆಂದಿಗೂ ಸಹಬಾಳ್ವೆಯ ರಥದ ಚಲನೆಯ
ಜೀವನ ಸಾಗಲಿ ಅಡೆತಡೆಯ ಎದುರಿಸಿ ಮುನ್ನುಗ್ಗಲು
ದಿನಬಿಡದೆ ಬಯಸುವೆ ಓ ನನ್ನ ಚಿನ್ನ , ನೀ ಎನ್ನ
ಬಿಡಲಾರೆ ಎಂದಿಗೂ ಪ್ರತಿಕ್ಷಣದ ಹೆಜ್ಜೆಯಲಿ
ನಿನ್ನ ಕೈಗೆ ನನ್ನ ಕೈಯ ಜೋಡಿಸಿರುವೆ ಒಂದಾಗಿರಲು
ಸುಖವಾಗಿ ಚಿನ್ನದಂತೇ ಹೊಳೆಯಲಿ ನಮ್ಮ ಬದುಕು
-ಅಂಜಾರು ಮಾಧವ ನಾಯ್ಕ್
Comments
Post a Comment