ಆಶೀರ್ವಾದ

ಅಮ್ಮನ ಆಸರೆಯಲಿ , ಕಳೆದು ಹೋದ ಆ ದಿನಗಳು
ಬಯಸುತ್ತಿದೆ ಇಂದು ,ಮರುಕಳಿಸಲಿ ಸಂತೋಷದ ಕ್ಷಣಗಳು

ಎದೆತುಂಬಿ ನಗುತ್ತಿದ್ದೆ, ಅಮ್ಮನ ಮೋಹವನು ಕಂಡು
ಕಾಡುತ್ತಿದೆ ಇಂದು ,ಬಾಲ್ಯದಾಟದ ಹುಲ್ಲಿನ ಚೆಂಡು

ತಾಳಲಾರದ ಹಸಿವಿನ ನಡುವೆಯೂ ಇರುತ್ತಿತ್ತು ಹುಮ್ಮಸ್ಸು
ಆದರಿಂದು ನನಗಾಗುತ್ತಿದೆ ಮನದಾಳದ ವಿಪತ್ತು

ಹಲವು ಕನಸುಗಳ ಕಂಡೆ , ನಮ್ಮವರ ಮುಂದೆ
ಅದ ತಿಳಿದು ನೆನೆಸಿಕೊಂಡರು ,ಇವನಿಗಿಲ್ಲ ಹಿಂದೆ ಮುಂದೆ

ನಾ ಕಳೆಯಲಿಲ್ಲ ಹೃದಯದ ಬಲವನ್ನು , ಅಷ್ಟು ಸುಲಭವಾಗಿ
ಸಿಗಲಿಲ್ಲ ಪ್ರೋತ್ಸಾಹದ ಹರಿವು , ಎನ ಬಾಳಲಿ ನಿರಂತರವಾಗಿ

ವಿಶ್ವಾಸವು ಕೊಂಡೊಯ್ಯುತ್ತಿದೆ, ನನ್ನೀ ಬಾಳಿನ ದೋಣಿಯನು
ಭರವಸೆಯು ನೀಡುತ್ತಿದೆ , ಪ್ರತಿಕ್ಷಣದ ಚಲನೆಯನು

ನನಗಿರಲಿ ಆತ್ಮ ಸ್ಥೈರ್ಯದ ಬತ್ತಳಿಕೆಯು ಮುಂದೂ
ನಾನಾಗಿರುವೆ ಬಹುಬಾಣಗಳ ಸರದಾರ ಎಂದೂ

ಲೊಕದೆತ್ತರಕೆ ಬೆಳಗಿಸಲಿ ನನ್ನ , ನಾ ಸಾಯುವ ಮುನ್ನ .
ನನಗಿದೆ  ತಂದೆ ತಾಯಿಯ ಆಶೀರ್ವಾದವು

               - ಅಂಜಾರು ಮಾಧವ ನಾಯ್ಕ್




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ