ಓ ಕಲಿಯುಗದ ಮನುಜ .......

ಹೆತ್ತು ಸಲಹಿದವರ ಮರೆತ  ಕರುಳಕುಡಿಯ , ನೀನೆಷ್ಟು
ಗಳಿಸಿದರೇನು ಫಲ, ತುತ್ತು ಅನ್ನವ ನೀಡದೆ ಇದ್ದರೆ

ಚರ್ಮದ ಹೊದಿಕೆಯ ಮೇಲೆ ,ಸೂಟು ಬೂಟುಗಳ ಧರಿಸಿ
ಮಲ್ಲಿಗೆ ಪರಿಮಳ ಸಿಂಪಡಿಸಿ ,ಲೋಕವೆಲ್ಲ ನಾನೇ ಚೆಲುವ ಎಂದರೆ ...!!!

ಒಂದಿಷ್ಟು ಸೌಜನ್ಯತೆ ಇರದೆ , ಮತ್ತೋರ್ವರ  ಹೀಯಾಳಿಸಿ
ಬುದ್ದಿಯ ಹೇಳಹೊರಟ ನೀನೆಷ್ಟು ಯೋಗ್ಯನಯ್ಯ ....!!!!

ಕಷ್ಟ ಸುಖಗಳ ಅರಿಯದೆ , ತೋರುಬೆರಳ ಎತ್ತುವ
ನೀನ್ಯಾಕೆ ತೆಗಳುತ್ತೀಯ  , ಅವನ ಅವಸ್ಥೆಯ ಕಂಡು

ಪರರು ಹೇಳುತಿಹರು , ಅವನ ಜೀವನ ಪಾಡುಗಳ
ನಿನಗೇನು ಗೊತ್ತು ಪರರು ನಿನ್ನ ನೋಡುವ ರೀತಿ

ಅವಲೋಕಿಸುತ್ತಿರು ನಿನ್ನನು , ಪ್ರಶ್ನಿಸಿಸುತ್ತಿರು ತನ್ನನು
ಅಹಂಕಾರಿಯೇ ಆಸೆಬುರುಕನೇ ,ವಿಶ್ವಾಸಿಯೇ

ಲೋಕದಿ ಕಹಿಯಾಗದೆ ,ಸಿಹಿಯಾದ ಬಾಳನ್ನು ಬಾಳಿ
ಮಾದರಿಯಾಗಿ ಬದುಕಲು ಕಲಿ, ಓ  ಹುಲು  ಮನುಜ

                      - ಅಂಜಾರು ಮಾಧವ ನಾಯ್ಕ್




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ