ಅಮ್ಮ

ನೆನಪುಗಳು ಕಾಡುತ್ತಿದೆ ಅಮ್ಮ ನಿನ್ನ ನೋಡಲು
ಸ್ವಪ್ನಗಳು ಬೀಳುತ್ತಿದೆ ನಿನ್ನಾಸರೆ ಪಡೆಯಲು

ನಿನ್ನ ಪ್ರೀತಿಯ ಮಾತುಗಳು, ಕೇಳುತ್ತಿದೆ ನಿದ್ದೆಯಲಿ
ನಾನೆದ್ದು ನೋಡಿದರೆ ಸ್ತಬ್ದನಾಗುವೆ ಹಾಸಿಗೆಯಲಿ

ಹಣೆಯ ಮೇಲೆ ಕೈಯ ಸವರಿ, ಕಿವಿಯಲ್ಲಿ ಪಿಸುಗುಟ್ಟುತ್ತಿದ್ದೆ
ಕಂದಾ ಎದ್ದೇಳು ಬೆಳಗಾಯಿತು, ನೇಸರ ನಗುತಿಹನು

ಕೇಳಿಯೂ ಕೇಳದಂತೆ ನಾ ತಿರುಗಿ ಮಲಗುತ್ತಿದ್ದೆ ಚಾಪೆಯಲಿ
ಸದ್ದು ಮಾಡದೇ ಮಲಗಬಿಟ್ಟಳು , ಕೆಲಹೊತ್ತು ಸಂತಸದಲಿ

ತಿಂಡಿ ತಿನಸುಗಳ ಗಮಗಮ ಪರಿಮಳ ಬಡಿಯುತ್ತಿರಲು ಮೂಗಿಗೆ
ಅಮ್ಮಾ ನಾ ಎದ್ದೆ , ಎಂದು ತಬ್ಬಿಕೊಂಡೆನು ಪ್ರೀತಿಯಲಿ

ಸಂತಸದಿಂದ ಅಮ್ಮನೆಂದಳು , ನೀ ಎನ್ನ ಮುದ್ದು ಬಂಗಾರ
ಹರುಷದಲಿ ನಾ ಕುಣಿದೆ ಅಮ್ಮನಾ ಆಸೆಯನು ಕಂಡು

                                            -ಅಂಜಾರು ಮಾಧವ ನಾಯ್ಕ್

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ