ಪುಟ್ಟ ಕವಿಯ ಆಶಯ

ನಾ ಕವಿಯಲ್ಲ ,ನಾ ಕವಿಯಲ್ಲ ಗೀಚಿಹೆನು ಬರಬಲ್ಲ ಬರಹ
ತಿಳಿಯದು ನನಗೆ ರಾಗ ಸುರಾಗವು, ನುಡಿಸುತಿರೆ ವೀಣೆ ತಂಬೂರಿಯ

ಇಂಪಾಗಿ ಇರದು  ನುಡಿಸುವ ತಾಳ ತಂಬೂರಿಯು
ಪ್ರೀತಿಯಲಿ ಸ್ವಾಗತಿಸುವೆ ತಂಬೂರಿ ನಾದಗಳ

ಕೇಳಲು ಇಚ್ಚಿಸದಿರಬಹುದು ನೀ , ಪುಟ್ಟ ಹೃದಯದ ಮಿಡಿತ
ಹಿಡಿತದಲಿಲ್ಲ ಏರಿಳಿತದ ನೂರೊಂದು ಸ್ವಪ್ನಗಳ ಬಡಿತ

ಕೊಳದ ತಾವರೆಯಂತೆ ಹಾಯಾಗಿ ತೇಲುತಿರುವೆ ಮನದಲಿ
ವಿಶ್ವಾಸದ ಮೊಗ್ಗು ಮೂಡುತಿಹುದು ಪುಟ್ಟ ಕವಿಯಾಗಲು

ಮನಬಿಚ್ಚಿ ನುಡಿಸುವೆ  ತಂಬೂರಿಯ , ಕಂಠದಲಿ ಹಾಡುವೆ ರಾಗ ಲಯಗಳ
ಓ ನನ್ನ ಗೆಳೆಯ ನೀ ಯಾಗಿರು ಆಸರೆ ಈ ಪುಟ್ಟ ಕವಿಯು  ಬೆಳೆಯಲು 

                                       -ಅಂಜಾರು ಮಾಧವ ನಾಯ್ಕ್






Comments

Post a Comment

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ