ವ್ಯರ್ಥ ಮನುಜರಿಹರು ಭೂಮಿಯಲಿ

ಸತ್ಯ ಧರ್ಮದ ಶಕ್ತಿಯನರಿಯದೆ , ಕತ್ತಿ ಎತ್ತಿ ಕತ್ತನು ಕೊಯ್ವರು ಹುಂಬರು
   ನಿತ್ಯ ಬದುಕಿನ ಹೋರಾಟದಲಿ , ನ್ಯಾಯವನ್ನೇ ಮರೆವರು ಜನರು

  ಇನ್ಯಾರೋ ಮಾಡಿದ ಆಸ್ತಿಯನು , ತನ್ನದೆಂದು ಬೊಗಳುವರು ಧೈರ್ಯದಲಿ
ಕಂಡ ಕಂಡವರಿಗೆಲ್ಲಾ ಡಂಗುರವ ಸಾರುವರು , ಬೆಂಡಾಗಿ ಹೋದರು ಜೀವದಲಿ.....!

     ರಕ್ತ ಸಂಬಂಧದ ಅರ್ಥವನರಿಯದೆ ವ್ಯರ್ಥ ಮನುಜರಿಹರು ಭೂಮಿಯಲಿ
ಅರ್ಥವಾದರೂ  ದುಷ್ಕೃತ್ಯವ ಮಾಡುವರು ಒಂದಿಷ್ಟೂ ನೋವನರಿಯದೆ ಸಂಬಂಧದಲಿ

ಒಟ್ಟಾಗಿ ಬರುವರು ಕೆಟ್ಟದಾಗಿ ಹೇಳುವರು , ನಾ ನೇರ ನಿನ್ನ ಚಟ್ಟ ಕಟ್ಟುವೆ ಎಂದು
    ಸಿಟ್ಟಾಗಿ ದೇವನು ಕಷ್ಟ ಕೊಟ್ಟರೂ , ತನ್ನಿಷ್ಟದಂತೆ ನಡೆವರು ಲೋಕದಲಿ

ಕಟ್ಟು ಕಟ್ಟಿನ ನೋಟನು  ಹೊಯ್ವರು ಕೆಟ್ಟು ಹೋದರು ಮಾನವು
ಕೆಟ್ಟ ಕೆಲಸವ ಮಾಡಿ ದುಷ್ಟರಾಗಿ ಬಂದು ಕಷ್ಟ ಕೊಡುವರು ಜನರು

   ಸದಾ ಭಕ್ತಿಯನು ಮಾಡುತಿಹೆ , ಶಕ್ತಿಯನು ನೀಡು ಎನಗೆ ನಿರಂತರ
ಯುಕ್ತಿಯಲಿ  ನನ್ನ ನಿಯುಕ್ತಿ ಮಾಡು ಕೆಟ್ಟ  ಜನರ  ಜುಟ್ಟನು ಎತ್ತಿ ಹಿಡಿಯಲು

                                          - ಅಂಜಾರು ಮಾಧವ ನಾಯ್ಕ್



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ