ತಂಗಾಳಿ

ತಂಗಾಳಿ ಬೀಸುತಲಿ ,ನೀ ನನ್ನ ಹೃದಯದಲಿ
ನಾನಿರುವೆ ಸಂತೋಷದ ಹೊನಲಿನಲಿ
ಇಂದು ಮುಂದು ಎಂದೆಂದಿಗೂ

ಬಯಕೆ ಬಣ್ಣಗಳಿಗೆ ಮರುಳಾಗದೆ, ಇರುವೆ
ನಿನ್ನೀ ಪ್ರೀತಿಯ ನಸುನಗೆಯ ಸವಿಯಲು
ಮರೆಯಲಾಗದ ಕಂಬನಿ ನೀಡುತ್ತಿದೆ ಇಬ್ಬನಿ

ಎಲ್ಲೊ ಇರುವ ಮನಸ್ಸಿನ ,ಉಯ್ಯಾಲೆಯ
ನೀ ತಂದು ತೂಗುತ್ತಿರುವೆ , ಹಾಯಾಗಿ
ನಿನ್ನುಸಿರು ಸೇರುತಿದೆ ನನ್ನುಸಿರ ಪಾಲಿನಲಿ

ತಪ್ಪು ಒಪ್ಪುಗಳಿಗೆ ಸರಿಸಾಟಿಯಾಗಿ , ಈ ಜೀವನ
ಸಾಗುತ್ತಿದೆ ಕಲ್ಲು ಮುಳ್ಳುಗಳ ಕಾಡು ಮೇಡಿನಲಿ
ತಂಗಾಳಿ ಬೀಸಲಿ ನೋವು ನಲಿವಿನಲಿ ,
ತಂಗಾಳಿ ಬೀಸಲಿ ನೋವು ನಲಿವಿನಲಿ

                            -ಅಂಜಾರು ಮಾಧವ ನಾಯ್ಕ್


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ