ಹಿಂಡು ಪಾಪಿಗಳ ಕಂಡು ತುಂಡಷ್ಟೂ ಬೆರಗಾಗದಿರು

ಹಿಂಡು ಪಾಪಿಗಳ ಕಂಡು, ತುಂಡಷ್ಟೂ  ಬೆರಗಾಗದಿರು
ಚೆಂಡಿನಾಟವ ಆಡು  ಜಗದ ಈ ಡೊಂಬರಾಟದಲಿ

ಸಜ್ಜಾಗಿರು ನಿನ್ನಾಟಕೆ  ಹೆಜ್ಜೆಯನು ಕೊಡುತ
ಗೆಜ್ಜೆ ನಾದವ ಹೊಮ್ಮಲಿ ನೀನಿಡುವ ಹೆಜ್ಜೆಯಲಿ

ಆಗಮಿಸಲಿ ಪ್ರತಿಕ್ಷಣದ ಸವಾಲಿನ ಆಟವು
ಹೆಮ್ಮೆಯಿಂದ ಹೇಳು , ನಾ ಬರುವೆ ಜಯಶಾಲಿಯಾಗಿ

ಬಿಡಬೇಡ ಮೈದಾನದ ಪರಿಧಿಯನು , ಎಂದಿಗೂ
ಜನ ನಿನ್ನಾಟವ ಕಂಡು , ಚೆಂಡನು ತುಂಡು ಮಾಡದಿರಲೆಂದು

ಅನುಭವಿಸುವೆ ನೀನು ಆಟ ಚೆಲ್ಲಾಟಗಳ ನಿರಂತರ
ಗಳಿಸುವೆ ಬಹು-  ಬಹುಮಾನಗಳ  ,ಆಡುತಲಿ ಎಂದೂ

ಪ್ರೇಕ್ಷಕನಾಗಿಹನು ಜೀವನದಾಟದಲಿ, ಆ ಸೃಷ್ಟಿಕರ್ತನು
ಮೋಸವ ಮಾಡದಿರು ನಿನ್ನಾಟ ಜಯಗಳಿಸುವತನಕ

                                - ಅಂಜಾರು ಮಾಧವ ನಾಯ್ಕ್


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ