ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗೆ ......


ಪಡಬೇಡ ಅನ್ಯರ ಸ್ವತ್ತುಗಳನ್ನು ಕಂಡು ; ಹೊಟ್ಟೆಕಿಚ್ಚು
ಅನ್ನೋದು ನಿನ್ನ ಹಿಂಡೋದು  ತರತರ,ನಿರಂತರ

ನೀನ್ಯಾಕೆ ಶ್ರಮಿಸದಿರುವೆ , ಶಿಖರವೆರಲು ಪ್ರತಿನಿತ್ಯ
ಅಂಕುಶ ಹಾಕಬೇಡ , ಏರಿ ನಿಲ್ಲಲು ಬಯಸುವ ಮನುಜಗೆ

ನಿನ್ನ ಒಳಗಿನ ಸದ್ಗುಣಗಳ ಬಾಗಿಲ ತೆರೆ ಜಗಕೆ
ಖುಷಿಯ ಕ್ಷಣಗಳ ತುಂಬಿಕೊಳ್ಳು ನಿನ್ನ  ಮನಕೆ

ಸುಮ್ಮಗೆ  ನುಡಿಯದಿರವಗೆ ಕೆಲಸವಿಲ್ಲ ಎಂದು  ,
ಬರಬಹುದದು ತಿರುಗು ಬಾಣವಾಗಿ ಮುಂದೂ

ಪ್ರೀತಿಯಿಂದ ಸ್ವಾಗತಿಸು , ಕಷ್ಟಗಳನು ಎಂದಿಗೂ
ಸುಖ ಬಂದಾಗ ಮರೆಯಬೇಡ ನಡೆದು ಬಂದ ಪಯಣವ

ನಿನಗಾದಲ್ಲಿ ಸಹಾಯ ಹಸ್ತವ ನೀಡು ಪರರಿಗೆ
ಮರೆಯಬೇಡ ಕರಮುಗಿದು ಪ್ರಾರ್ಥಿಸಲು ಸರ್ವಶಕ್ತಗೆ

                         - ಅಂಜಾರು ಮಾಧವ ನಾಯ್ಕ್







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ