Posts

Showing posts from March, 2021

ಜಾಣರಲ್ಲ (ಕವನ -9)

ಮುಂದಿನ ಸಾಲಲಿ ಕುಳಿತಿರೋರೆಲ್ಲ ಜಾಣರಲ್ಲ ಹಿಂದಿನ ಸಾಲಲಿ ಕೂರುವವರೆಲ್ಲ ದಡ್ಡರೂ ಅಲ್ಲ ಬಣ್ಣ ಬಣ್ಣದ ಉಡುಗೆ ತೊಡುವವರೆಲ್ಲ  ಸಿರಿವಂತರಲ್ಲ ಕಣ್ಣಿಗೆ ಕಂಡರೂ ಕಾಣದಂತಿರುವವರು ಕುರುಡರಲ್ಲ ಬುದ್ಧಿಮಾತು ಹೇಳುವವರೆಲ್ಲ ಸತ್ಯವಂತರಲ್ಲ ಸಿಟ್ಟಲ್ಲಿ ಮಾತಾಡುವವರೆಲ್ಲ ಕೆಟ್ಟವರೂ  ಅಲ್ಲ ನಿನ್ನೊಳಗಿನ ಗುಟ್ಟು ಶಿವನೇ ಬಲ್ಲ ದೇವನ ಕಣ್ಣುತಪ್ಪಿಸೋಕೆ ಸಾಧ್ಯವಂತೂ ಇಲ್ಲ     ✍️ಮಾಧವ ಅಂಜಾರು 🌷

ಬಾಳು -ಗೋಳು (ಕವನ -10)

ಬಾಳು - ಗೋಳು *********** ಮೂರು ದಿನದ ಬಾಳು ಮಾಡೋರಿರುವರು ಗೋಳು ದಿನ, ವಾರ, ತಿಂಗಳು ಹರಿಹಾಯ್ವರು  ಹಗಲಿರುಳು, ಒಂದೊತ್ತಿನ ಊಟಕೂ ಕನ್ನ ಹಾಕೋ ಜನಕೂ ಅವರಲಿರೋ ದುಷ್ಟಚಟಕೂ ಕಷ್ಟ ನಷ್ಟವು  ಸಮಾಜಕೂ, ಅಸತ್ಯ ಕೂಡಿದ ಜನರು ಅಲ್ಲಲ್ಲಿ ತುಂಬುತಿಹರು ಸತ್ಯ ಕಾಯೋ ಹಲವರು ನಶಿಸಿ ಹೋಗುತಿಹರು, ✍️ಮಾಧವ ನಾಯ್ಕ್ ಅಂಜಾರು 🌹

ದೇವರೇ ಕಣ್ಣ ತೆರೆ (ಕವನ -12)

ಕಣ್ಣ ತೆರೆ ದೇವರೇ ************ ನೀನ್ಯಾಕೆ ಕಲ್ಲಾಗಿರುವೆ ಎನ್ನ ಅಳಲು ಕೇಳಬಾರದೆಂದೇ? ನೀನ್ಯಾಕೆ ಮೌನವಾಗಿರುವೆ ಎನ್ನ ಪ್ರಾರ್ಥನೆಗೆ ಅರ್ಥವಿಲ್ಲವೆಂದೇ? ನೀನ್ಯಾಕೆ ಮರೆಯಾಗಿರುವೆ ನಿನ್ನ ಕಂಡರೆ ಬಿಡಲಾರೆನೆಂದೇ? ನೊಂದು ಬಸವಳಿದೆ ಅಂದು,  ಇಂದೂ ಭುವಿಯಲಿ ನಡೆಯೋ ಅನಾಚರವ ಕಂಡು ನಿಲ್ಲುತ್ತಿಲ್ಲ ಅಲ್ಪವೂ ಭಯವಿಲ್ಲ ಸ್ವಲ್ಪವೂ ನಿನ್ನ ನಂಬಿದೆನಗೆ ದಿನವೆಲ್ಲಾ  ಯಾಕೀ ನೋವು? ನೀನಿದ್ದರೆ ಕಣ್ಣತೆರೆ ನೀನಿದ್ದರೆ ಮೌನತೊರೆ ನೀನಿದ್ದರೆ ದೇವರೇ ಎನಗೊಳಿತು ಬರೆ ಆಲಿಸೆನ್ನ ಪ್ರೀತಿಯ ಕರೆ ಇಲ್ಲವೆಂದಾದರೆನ್ನ ನಿನ್ನ ಬಳಿ ಬೇಗ ಕರೆ 😢 ✍️ಮಾಧವ ನಾಯ್ಕ್ ಅಂಜಾರು 🌹

ಪಾಪದ ಕೊಡ (ಕವನ -11)

ಪಾಪದ ಕೊಡ ********** ಜೀವನದಿ ನಿರಂತರ ಕಷ್ಟಗಳೇ ಎದುರಿಗಿದ್ದಲ್ಲಿ ಕಷ್ಟವೇನೆಂದು ನಮಗೆ ಪೂರ್ತಿ ತಿಳಿದಿರುತ್ತದೆ, ಕಷ್ಟದಲಿ ಜೀವನವೇ ಬೇಡವೆನಿಸಿದಾಗ ಕಷ್ಟವನು ಸರಿಸಿನಿಲ್ಲುವ ಶಕ್ತಿ ನಮಗೆ ಸಿಗುತ್ತದೆ,  ದುಷ್ಟರಿಂದ ಕಷ್ಟವಾದರೆ ಅವರ ಪಾಪದಕೊಡ ತುಂಬುತ್ತಿದ್ದಾರೆಂಬ ಸತ್ಯ, ಮತ್ತೇನಾದರೂ ಕಷ್ಟವಿದ್ದರೆ ಇನ್ನೊಬ್ಬರ ನೋವ ಅನುಭವಿಸುತ್ತೇವೆಂಬ ಸತ್ಯ, ದೂರವಾಗಲಿ ಕಷ್ಟ ಈಡೇರಲಿ ನಮ್ಮಿಷ್ಟ. ✍️ಮಾಧವ ಅಂಜಾರು🌹🙏

ಕನ್ನಡ ಶಾಲೆ (ಕವನ -13)

ಕನ್ನಡ ಶಾಲೆ ******** ಒಂದು ಚೀಲ ಒಂದು ಕೊಡೆ ಒಂದು ಜೊತೆ ಬಟ್ಟೆಯು ಸಾಕಿತ್ತು ಕನ್ನಡ ಶಾಲೆಗೆ ಒಂದು ಶಾಲೆಗೆ ಒಬ್ಬ ಮೇಸ್ಟ್ರು ಒಂದು ಊರಿಗೆ ನಾಲ್ಕು ಮೇಸ್ಟ್ರು ಸಾಕಿತ್ತು ಕನ್ನಡ ಶಾಲೆಗೆ ಒಂದು  ಮೈಲಿ ನಡೆದುಕೊಂಡು ಹಣ್ಣು ಹಂಪಲು ತಿಂದುಕೊಂಡು ಹೋಗುತಿದ್ದೆ ಕನ್ನಡ ಶಾಲೆಗೆ ಶಾಲೆ ಬಿಡುತ ರಾಷ್ಟ್ರಗೀತೆ ಆರಂಭದಲಿ ನಾಡ ಗೀತೆ ಕಲಿಯುತಿದ್ದೆ ಕನ್ನಡ ಶಾಲೆಯಲಿ ತಂದೆ ತಾಯಿ ದೇವರೆನುತ ದಿನಚರಿಯ ಬರೆದುಕೊಂಡು ಹೋಗುತಿದ್ದೆ ಕನ್ನಡ ಶಾಲೆಗೆ ನೂಲು ಸುತ್ತಿದ ಚೆಂಡಿನಲಿ ಲಗೋರಿ ಆಟವಾಡುತಲಿ ಕುಟ್ಟಿ ದೊಣ್ಣೆಯ ಆಟವು ನಡೆಯುತಿತ್ತು ಶಾಲೆಯಲಿ ಕೊಕ್ಕೋ ಆಟ ಮರಕೋತಿಯಾಟವಾಡುತ ಆಲದ ಮರದ ಜೋಕಾಲಿ ದಾಟುತ್ತಿದ್ದೆ  ಮುಳ್ಳ ಬೇಲಿ ತುಂಬಿ ತುಳುಕುವ ಕೆರೆಯಲಿ ಮುಳುಗಿ ತೆಗೆದ ಹೂ ಕಮಲ ತಂದು ಮಾಲೆ ಮಾಡುತಲಿ ತೊಡುತ  ಕಲಿತೆ ಶಾಲೇಲಿ ಆದರಿಂದು ಬೀಗ ಬೀಳುತಿದೆ ಕನ್ನಡ ಶಾಲೆಯಲಿ ಹಂಚು ಹಳೆಯಾಗುತಿದೆ ಪ್ರತಿ ಕನ್ನಡ ಶಾಲೆಯಲಿ ಮಕ್ಕಳಿಲ್ಲದ ಶಾಲೇಲಿ ಕಾಯುತಿವೆ ಹಳೆ ಬೆಂಚು ಬೀಳುತಿದೆ ಕಪ್ಪು ಗೋಡೆ ಆವರಿಸುತಿದೆ ಬಳ್ಳಿ ಗಿಡಗಳು ✍️ಮಾಧವ ನಾಯ್ಕ್ ಅಂಜಾರು😔

ಮಾತನು ಕೇಳು (ಕವನ -14)

ಮಾತನು ಕೇಳು        *********** ತಾಳು ಮನವೇ ತಾಳು ಚಿಂತ್ಯಾಕೆ,  ನೀ ಹೇಳು ಆಡಿದ ಮಾತನು ಕೇಳು ನೋಡಿದ ಘಟನೆಯ ಸಾಲು ಸರಿಸಿ ನೀ  ಎದ್ದೇಳು!,  ಹಾಡು ಹೃದಯ ಹಾಡು ನಿನ್ನ ಕೆಲಸವ ಮಾಡು ಸೋಲಿಸುವರ ನೋಡು ತೀರಿಸಬೇಡ ಸೇಡು ಜಯಕ್ಕಾಗಿ ಹೋರಾಡು ! ಸಹಿಸು ಜೀವವೇ ಸಹಿಸು ಸಿಗುವ ನೋವ ಸಹಿಸು ಖುಷಿಯ ಕ್ಷಣ ನಮಿಸು ಪ್ರೀತಿ ಬಾಂಧವ್ಯ ಬೆಳೆಸು ಒಳ್ಳೆತನವ ಉಳಿಸು !    ✍️ಮಾಧವ ಅಂಜಾರು 🌹

ರೈತನೇ ಬೆನ್ನೆಲುಬು (ಕವನ -16)

ರೈತನೇ ಬೆನ್ನೆಲುಬು ************* ಬೆಳಗಿನ ತಿಂಡಿ ಗಂಜಿ ಊಟ ಸೂರ್ಯ ಉದಯಿಸುತ್ತಿದ್ದಂತೆ ಕರೆಯುತಿದ್ದ ಹಾಲು, ಹಕ್ಕಿಗಳ ಚಿಲಿಪಿಲಿ ಮುದ ನೀಡುತಿತ್ತು ದಿನಾಲೂ ಹುಂಜನ  ಕೂಗು ಕೇಳಿದ ಮಾತ್ರಕೆ ಕೋಳಿ ಮರಿಗಳ ಚಿಲಿಪಿಲಿ ಕೂಗು ಗೂಡಲಿ ಹೊರಗೆ ಓಡುತ ಸಾಗುತ ತೋಟದ ಕೀಟಗಳೆ ಕೋಳಿಗೆ ಊಟ ಅಂಗಳದಿ ಕರುವು ಅಂಬಾ ಎನುತಲೇ ಬಿಚ್ಚಿದ ಹಗ್ಗವ ಎಳೆದಾಡುತಲೇ ಸೇರಿತು ತಾಯಿಯ ಕೆಚ್ಚಲು ಗುದ್ದಲು ಪ್ರೀತಿಯ ಸವರಿಕೆ ನೆತ್ತಿಯ ಮೇಲೆ ಸಂತೋಷದಿ ಕರುವು ಕುಡಿಯಿತು ಹಾಲು ಕತ್ತಿಯ ಹರಿತಕೆ ಬೋರ್ಗಲ್ಲ ಹುಡಿಯು ಮರದ ದಿಂಬಿನ ಮೇಲೆ ಉಜ್ಜುತ್ತಾ ಮಾರುದ್ದದ ಹಗ್ಗವ ಸುತ್ತಿದ ಅಪ್ಪ ಮೈತುಂಬ ಬೆವರೊಂದಿಗೆ ಬರುತ್ತಲೇ ತಲೆಯಲಿ ಹುಲ್ಲಿನ ಮೇವು ಕೋಣಗಳ ಮುದ್ದಾಡುತಾ ಹಾಕಿದ ಮೇವು ಗಬ ಗಬ ತಿನ್ನುತಾ ನೋಡಿದ "ಕಾಳ " ತಂದೆಯ ಮೊಗದಲಿ ಅದೆಷ್ಟು ಆನಂದ ಇನ್ನಷ್ಟು ಹೊಟ್ಟೆಗೆ ತಿಂದನು "ಬೊಲ್ಲ " ಅಮ್ಮನ ಕೂಗು ಎಲ್ಲಿರುವಿರಿ ಮಕ್ಕಳೇ? ತಡವಾಯ್ತು ಎನಗೆ ಗದ್ದೆಗೆ ನಡೆಯಲು ನೇಜಿಯ ಎಳೆದು ಹಾಕಬೇಕೆನುತ ಓಡಿ ಓಡಿ ನಡೆದು ಬಂದಳು ಮೈಗೆ ಕೆಸರನು ಹೊತ್ತು ಮೊಸರಿನ ಗಂಜಿ ಬಟ್ಟಲು ತುಂಬ ತೆಗೆದರು ಭರಣಿಯ  ಉಪ್ಪಿನಕಾಯಿ ಹಪ್ಪಳ ಸೆಂಡಿಗೆ ಚಟ ಪಟ ಅಗಿಯುತ ಮಾವಿನ ಕಾಯಿಯ ರಸವನು ಸವಿಯುತ ದಿನವನು ದೂಡುವ ರೈತನ ಅಳಲು ಕೇಳಲು ಯಾರಿಲ್ಲ ಅವನ ನೋವು ಪೇಪರು ಟಿವಿ ಯಲಿ ದಿನವೂ ಕಾವು ರೈತರೇ ಬೆನ್ನೆಲುಬು ಅವನಿಗಿಲ...

ನೀ ಎನ್ನ ದೇವತೆ (ಕವನ -15)

ನೀ ಎನ್ನ ದೇವತೆ ************ ನಾ ನಿನ್ನ ಮರೆಯಲಾರೆ ನೀ ನನ್ನ ಇಷ್ಟಪಟ್ಟರೆ ನಾ ನಿನ್ನ ಶಪಿಸಲಾರೆ ನೀ ಎನಗೆ ಕಷ್ಟ ಕೊಟ್ಟರೆ ನಾ ನಿನ್ನ ಬಿಡಲಾರೆ ನೀ ಎನ್ನ ನಂಬಿದ್ದರೆ ನಾ ನಿನ್ನ ತೊರೆಯಲಾರೆ ನೀ ಎನ್ನ ಬಳಿಯಿದ್ದರೆ, ನಾ ನಿನ್ನ ಕೇಳಲಾರೆ ನೀ ಎನ್ನ ಮನದಲಿದ್ದರೆ ನಾ ನಿನ್ನ ಶಪಿಸಲಾರೆ ನೀ ಎನ್ನ ಮನಗೆದ್ದರೆ ನಾ ನಿನ್ನ ನೋಯಿಸಲಾರೆ ನೀ ಎನ್ನ ನಗಿಸುತಿದ್ದರೆ ನಾ ನಿನ್ನ ತಡೆಯಲಾರೆ ನೀ ನನ್ನ ದೊಷಿಸುತಿದ್ದರೆ ನಾ ನಿನ್ನ ಉಸಿರೇ ನೀ ನನ್ನ ಉಸಿರಾಗಿರು ನಾ ನಿನ್ನ ನಗುವೇ ನೀ ನನ್ನ ಮಗುವಾಗಿರು ನಾ ನಿನ್ನ ಆಸ್ತಿಯೇ ನೀ ಎನ್ನ ಆಸ್ತಿಯಾಗಿರು ನಾ ನಿನ್ನ ದೇವರೇ ನೀ ಎನ್ನ ದೇವತೆಯಾಗಿರು ✍️ಮಾಧವ ನಾಯ್ಕ್ ಅಂಜಾರು 🌹🙏

ಬುದ್ದಿವಂತರು (ಕವನ -17)

ಬುದ್ಧಿವಂತ ********** ಯಾರು ಶಾಶ್ವತರು ಭುವಿಯಲಿ ಏನು ಶಾಶ್ವತವೋ ಬೇಕು ಬೇಡಗಳ ಹುಡುಕಾಟದಲಿ ಇಲ್ಲವಾಯಿತು ನೆಮ್ಮದಿ ಜೀವನದುದ್ದಕ್ಕೂ,  ಯಾರು ಪ್ರಬಲರು ಈ ಜಗದಲಿ ಯಾರು ಬುದ್ದಿವಂತರು ನಾನು ನಾನೆಂಬ ಹಠದಲಿ ಕಳೆದೋಯ್ತು ಬದುಕು ಶೀಘ್ರದಲಿ ಯಾವ ಪ್ರಶಸ್ತಿಯೋ ಸಮಾಜದಲಿ ಯಾಕೆ ಕುಸ್ತಿಯೋ ಗೌರವ ಪಡೆದ  ಮಾತ್ರಕೆ ಸಾರ್ಥಕವೇ ನಮ್ಮ ಬದುಕು? ✍️ಮಾಧವ ನಾಯ್ಕ್ ಅಂಜಾರು 🌹🙏

ಸ್ಪಂದನ (ಕವನ -18)

  ಸ್ಪಂದನ ******* ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯ ನಿಮ್ಮಲ್ಲಿದ್ದರೆ ನೋವನ್ನು ಸಹಿಸಿಕೊಳ್ಳಲು ಕೂಡ ನಿಮ್ಮ ಹೃದಯ ತಯಾರಿಯಲ್ಲಿರುತ್ತದೆ, ಇನ್ನೊಬ್ಬರ ಪ್ರೀತಿಗೆ ಸ್ಪಂದಿಸುವ ಮನಸ್ಸು ನಿಮ್ಮಲ್ಲಿದ್ದರೆ ಪ್ರೀತಿಯ ಅರ್ಥವೇನೆಂದು ತಿಳಿಸುವ ಶಕ್ತಿ ನಿಮ್ಮಲ್ಲಿರುತ್ತದೆ ಇನ್ನೊಬ್ಬರ ಅವನತಿಗೆ ಕಾಯುವ ಮನಸ್ಥಿತಿ ನಿಮ್ಮಲ್ಲಿದ್ದರೆ ಅವನತಿ ನಿಮ್ಮದೇ ಬಾಗಿಲಲ್ಲಿ ಕಾಯುತ್ತಿರುತ್ತದೆ ಒಂದಲ್ಲ ಒಂದು ದಿನ ಸತ್ಯ ಗೆಲ್ಲುತ್ತದೆ               ✍️ಮಾಧವ ಅಂಜಾರು 🌷 .

ನಿನ್ನ ಬಳಿ ಇರುವಾಗ (ಕವನ 19)

ನಿನ್ನ ಬಳಿ ಬರುವಾಗ *************** ನೀನೆನ್ನ ಹೊಗಳಬೇಡ ನಾ ನಿನ್ನ ಬಳಿಯಿದ್ದಾಗ ನೀನೆನ್ನ ತೆಗಳಬೇಡ ನಾನಿನಿತು ದೂರವಿದ್ದಾಗ ನೀನೆನ್ನ ಶಪಿಸಬೇಡ ಎಂದಾದರು ಕೋಪಗೊಂಡಾಗ, ನೀ ಎನ್ನ ಕೇಳಬೇಡ ಅಪ್ಪ ಅಮ್ಮನ ಜೊತೆಯಲಿರುವಾಗ ನೀ ಎನ್ನ ನೋಡಬೇಡ ಎನ್ನ ಕಣ್ಣು ತುಂಬಿಬಂದಾಗ ನೀ ಎನ್ನ ನೋಯಿಸಬೇಡ ಎನ್ನ ಜೀವನ ಸರಿಯಿಲ್ಲದಾಗ, ನೀ ಎನ್ನ ಕೈ ಬಿಡಬೇಡ ನಾ ನಿನ್ನ ಹಿಡಿಯುವಾಗ ನೀನಂತು ದೂರಸರಿಯಬೇಡ ನಾ ನಿನ್ನ ಬಳಿ ಬರುವಾಗ ನೀನೆನ್ನ ನೆನಪಿಸಬೇಡ ನಾನೆಲ್ಲವ ಬಿಟ್ಟು ಹೋದಾಗ, ✍️ಮಾಧವ ನಾಯ್ಕ್ ಅಂಜಾರು 🌹🙏

ಬೆಳಕಾಗಿ ನಾನಿರುವೆ (ಕವನ -20)

ಹೂವಾಗಿ ಬಂದಿರುವೆ ಎನ ಹೃದಯ ಸೇರಿರುವೆ ಜೋಗುಳವ ಹಾಡುತಲೇ ತಬ್ಬಿನಿನ್ನ ಮುದ್ದಾಡುವೆ ಹೆಜ್ಜೇನ ಸವಿದಂತೆ ತುಟಿಗೊಂದು  ಮುತ್ತಕೊಡುವೆ ಉಸಿರಲ್ಲಿ ಉಸಿರಾಗಿ ಕೊನೆತನಕ ಜೊತೆಗಿರುವೆ ಸಿಹಿಯಾದ ಮಾತೊಂದಿಗೆ  ನಿನಜೊತೆ ಹೆಜ್ಜೆಹಾಕುವೆ ರವಿಯಾಗಿ ನಿನಗಾಗಿ ಬೆಳಕಾಗಿ ನಾನಿರುವೆ ಸವಿಯಾದ ಬದುಕಲಿ ನೀ ನನ್ನ ಚಂದಿರ ನಿನ್ನ ನಗುವ ನೆನೆಯುತ ಬಾಳೆಲ್ಲ ಸುಮಧುರ      ✍️ಮಾಧವ ಅಂಜಾರು 🌷

ತನ್ನುಸಿರ ಅರ್ಥ (ಕವನ -21)

ಬುದ್ದಿ ಹೇಳೋಕೆ ನೀನ್ಯಾರು? ಅನ್ನುವವಗೆ ತಿದ್ದುವುದು ವ್ಯರ್ಥ ತಪ್ಪನ್ನು ಸಮರ್ಥಿಸಿಕೊಳ್ಳುವವಗೆ ನ್ಯಾಯಮಾತು ವ್ಯರ್ಥ ನಾನಿಲ್ಲದೆ ನೀನಿಲ್ಲ ಹೇಳುವವಗೆ ತಿಳಿದಿಲ್ಲ ಜಗದ ಅರ್ಥ ನಿನ್ನಿಂದ ನನಗೇನಾಗಬೇಕು ಅನ್ನುವವಗೆ ಸಹಾಯವೆಲ್ಲ ವ್ಯರ್ಥ ಹಸಿದವಗೆ ಆಹಾರದ ಬದಲು ಇನ್ನುಳಿದೆಲ್ಲವೂ ವ್ಯರ್ಥ ಉಸಿರೆಲ್ಲಾ ನೀನೇ ಹೇಳುವವಗೆ ತಿಳಿದಿಲ್ಲ ತನ್ನುಸಿರ ಅರ್ಥ           ✍️ಮಾಧವ ಅಂಜಾರು 🌷

ಬದುಕೆಂಬ ನೌಕೆ (ಕವನ -22)

ನೀನಾಡಿದ ಮಾತು ಕೊನೆಯದ್ದಾಗಿರಬಹುದು ನೀ ನೋಡಿದ ಜೀವ ಇನ್ನಿಲ್ಲವಾಗಬಹುದು ನೀ ತಿನ್ನಿರೋ ತಿನಸು ಸಿಗದಿರಲೂಬಹುದು, ನಿನ್ನಲಿರೋ ಶಕ್ತಿ ಕ್ಷೀಣವಾಗಬಹುದು ನಿನ್ನಲಿರೋ ಯುಕ್ತಿ ಉಪಯೋಗಕ್ಕಿರದು ನಿನ್ನಾಸ್ತಿಗಳೆಲ್ಲವೂ ಮಣ್ಣಾಗಲೂಬಹುದು, ಸಿಹಿಮಾತು ಉಳಿಯಬಹುದು ಕಹಿಮಾತುಗಳೂ ಉಳಿಯಬಹುದು ಬದುಕೆಂಬ ನೌಕೆಯು ಬಿರುಗಾಳಿಗೆ ಸಿಕ್ಕಿಬೀಳಬಹುದು ದೇವನೊಬ್ಬನ ಸಹಾಯವಿದ್ದರೆ ಎಲ್ಲಾದರೂ ಬದುಕಬಹುದು         ✍️ಮಾಧವ ನಾಯ್ಕ್ ಅಂಜಾರು 🌷

TPI

Image
 

ನಿನ್ನವರಿಲ್ಲ (ಕವನ 23)

ನಿನ್ನವರು ಯಾರು ಇಲ್ಲ ಇಲ್ಲಿ ನಿನ್ನವರು ಯಾರೂ ಇಲ್ಲ ಬೆಣ್ಣೆಯಂತೆ ಮಾತನ್ನಾಡಿ ಕನ್ನ ಹಾಕೋ ಜನರೇ ಎಲ್ಲಾ ನೊಂದು ನೀನು ಜೀವಿಸುತ್ತಿದ್ದರು ಬಂದು ತುಳಿಯೋ ಜನರೇ ಎಲ್ಲಾ, ಇಲ್ಲಿ ನಿನ್ನವರು ಯಾರೂ ಇಲ್ಲ ಬಂಧುಬಳಗ ಸೋಗಿನಲ್ಲಿ ಬಣ್ಣ ಬಣ್ಣದ ಚಿತ್ರಣವೆಲ್ಲ ಸಮಯ ಕೆಟ್ಟು ಸತ್ತು ಹೋದರೂ  ನಿನ್ನನಿನಿತು ನೆನೆಯೋರಿಲ್ಲ ಮಾಡಿದಕರ್ಮ ಜಾಸ್ತಿಯಾಗಿ ದೇವನಶಿಕ್ಷೆ ಹೇಳುವರೆಲ್ಲ ಇಲ್ಲಿ ನಿನ್ನವರು ಯಾರೂ ಇಲ್ಲ ನ್ಯಾಯನೀತಿ ಪಾಲಿಸೋರಿಲ್ಲ ಸಿರಿವಂತನ ಹಿಂಬಾಲಕರೆಲ್ಲ ಬಡವನೆಂದು ಅರಿತಮೇಲೆ ನಿನ್ನ ಬಳಿ ಸುಳಿಯೋರಿಲ್ಲ ಆಡಂಬರದ ಬದುಕಿಗಾಗಿ ಕಣ್ಣಿದ್ದೂ ಕುರುಡರೇ ಎಲ್ಲಾ ಇಲ್ಲಿ ನಿನ್ನವರು ಯಾರೂ ಇಲ್ಲ     ✍️ಮಾಧವ ನಾಯ್ಕ್ ಅಂಜಾರು🙏

ಈಗಲೇ (ಕವನ 24)

ಇಷ್ಟಪಟ್ಟಿದ್ದರೆ ಈಗಲೇ ವ್ಯಕ್ತಪಡಿಸು ನಾ ಸತ್ತು ಹೋದ ಮೇಲಲ್ಲ ಇಷ್ಟವಿದ್ದರೆ ನೀನೀಗಲೇ ಮಾತಾಡು ನಾ ಬೆಸ್ತು ಬಿದ್ದಾಗವಲ್ಲ ಇಷ್ಟವಿದ್ದರೆ ನೀನೀಗಲೇ ಗೆಳೆತನ ಬೆಳೆಸು ನಾ ದೂರ ಹೋದಾಗ ಅಲ್ಲ ಇಷ್ಟವಿದ್ದರೆ ನೀನೀಗಲೇ ಮಾತಾಡು ನಾ ಮಾತು ನಿಲಿಸಿದಾಗಲ್ಲ ಇಷ್ಟವಿದ್ದರೆ ನೀ ಈಗಲೇ ನಕ್ಕುಬಿಡು ನಾ ಬೇಸರ ಹೊಂದಿದಾಗಲ್ಲ ಇಷ್ಟವಿದ್ದರೆ ನೀ ಜೊತೆಯಲಿರು ನಾ ದೂರ ಹೋದಗಲಲ್ಲ    ✍️ಮಾಧವ ನಾಯ್ಕ್ ಅಂಜಾರು,,🙏

ಇನ್ನೇನು ಬೇಕು (ಕವನ -25)

ಇನ್ನೇನು ಬೇಕು ಜಗದಲಿ ರಕ್ಷಕರು ಭಕ್ಷಕರಾಗಿಹರು ಜನಸೇವಕರು ಕುರುಡರಾದರು  ಸತ್ಯವಾದ ತ್ಯಜಿಸಿರುವರು ನ್ಯಾಯ ಸತ್ತುಹೋಯಿತು  ಇನ್ನೇನು ಬೇಕು ಜಗದಲಿ ಅಧಿಕಾರ ಅಸ್ತ್ರವಾಯಿತು ಬಡವನ  ತುಳಿದಾಯಿತು ಸತ್ಯವನ್ನು ತಿರುಹಿಬಿಟ್ಟರು ಅತ್ಯಾಚಾರ ಮಿತಿಮೀರಿತು ಇನ್ನೇನು ಬೇಕು ಜಗದಲಿ ಅಣ್ಣ ತಮ್ಮನ ಕೊಲ್ಲುತಿಹರು  ಅಪ್ಪ ಮಗಳನ್ನು ಭೋಗಿಸಿದನು ತಮ್ಮ ಅಣ್ಣನ ಕೊಂದನು ಮಕ್ಕಳು ಪೋಷಕರ ತುಳಿದರು ಇನ್ನೇನು ಬೇಕು ಜಗದಲಿ ಮಾಂಗಲ್ಯದ ಅರ್ಥ ಹೋಯಿತು ವಿವಾಹಿತ ವಿಕೃತ ಸುಖ ಬಯಸಿದ ವಯಸ್ಸಿಗೆ ಮೊದಲೇ ಕಾಮ ಕಿರಿಯರನ್ನು ವಿವಾಹವಾದರು  ಇನ್ನೇನು ಬೇಕು ಜಗದಲಿ ಸಂಬಂಧಗಳು  ಬಿರುಕಾದವು  ಪ್ರೀತಿ ನಾಟಕವಾಯಿತು ಉಪಕರಿಸಿದವಗೆ ಉಪದ್ರವಿಸಿದರು ಸ್ನೇಹ ಸುಳ್ಳಾಯಿತು ಇನ್ನೇನು ಬೇಕು ಜಗದಲಿ ಆನೆಗೆ ಬೆಂಕಿಯಿಟ್ಟರು ನಾಯಿಯನ್ನು ಜಿವಂತ ಸುಟ್ಟರು ಮನುಷ್ಯನ ಜೀವಂತ ಸುಟ್ಟರು ಎಲ್ಲಾ ಪ್ರಾಣಿಗಳ ತಿಂದು ಬಿಟ್ಟರು ಇನ್ನೇನು ಬೇಕು ಜಗದಲಿ ಕಾಡುಗಳ ಅಳಿಸಿದರು  ನದಿಗಳ ನಾಶಗೈದರು ನಗು, ಅಳು  ಕಪಟವಾಯಿತು ದೇವರನ್ನೂ ಹೀಯಾಳಿಸಿದರು ಇನ್ನೇನು ಬೇಕು  ಜಗದಲಿ ಧರ್ಮಗಳು ಹೊಡೆದಾಡಿತು  ಜಾತಿಗಳು ಮತಿಗೆಟ್ಟಿತು ಮನುಷ್ಯತ್ವ ಇಲ್ಲವಾಯಿತು    ✍️ಮಾಧವ ನಾಯ್ಕ್ ಅಂಜಾರು 🌷

ಹೊಂಗಿರಣ (ಕವನ -26)

ನಿನಗಾಗಿಯೇ  ಕವನ ನಿನಗಾಗಿಯೇ ಈ ಜೀವನ ಹಾಯಾಗಿರಲಿ ಪ್ರತೀದಿನ ಬಾಳಪುಟಗಳ ತೋರಣ ನಿನಗಾಗಿಯೇ ಕವನ ಹಲವು ಸಂಧರ್ಭಗಳೇ ಕಾರಣ ಬೆಸೆದುಬಿಟ್ಟ ಸುಗುಣ ಹಸಿರಾಗಿರಲಿ ನಮ್ಮದಿನ ನಿನಗಾಗಿಯೇ ಈ ಕವನ ಎನ್ನೆದೆಯ ಗೂಡಲಿ ಬಡಿದಾಡುವ ಹೃದಯಕೆ ಸಿಹಿಮಾತುಗಳೇ ಹೊಂಗಿರಣ           ✍️ಮಾಧವ ನಾಯ್ಕ್ ಅಂಜಾರು 🌷