Posts

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ

Image
(ಲೇಖನ -100), "ಕುವೈಟ್ ಕಲಾ ಮಾಣಿಕ್ಯ"  ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರು ಕನಸಾಗಿ ತೆಗೆದುಕೊಂಡರೆ ಇನ್ನು ಕೆಲವರು ಹವ್ಯಾಸವಾಗಿ ತೆಗೆದುಕೊಂಡು ಬರ ಬರುತ್ತಾ ಬಹಳಷ್ಟು ಎತ್ತರಕ್ಕೆ ಬೆಳೆದು ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಒಂದು ಕಡೆಯಲ್ಲಿ ಆತ್ಮ ತೃಪ್ತಿ,ಒಂದು ಕಡೆಯಲ್ಲಿ ಸಾಧನೆಯ ಮೆಟ್ಟಿಲು ಹತ್ತುವ ಖುಷಿ. ಇವೆರಡನ್ನು ಗಳಿಸಲು ಪ್ರತಿಯೊಬ್ಬ ಕಲಾಸಕ್ತಿಯ ವ್ಯಕ್ತಿ ತನ್ನ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಅನ್ನುವುದನ್ನು ಯೋಚಿಸಲು ಸಾಧ್ಯವಿಲ್ಲ. ನಿಮಗೆ ಸಮಯ ಎಲ್ಲಿ ಸಿಗುತ್ತದೆ? ನೀವು ಇದನ್ನೆಲ್ಲಾ ಹೇಗೆ ಮಾಡುತ್ತೀರಿ ಎಂದು ಕೇಳುವ ಕೆಲವು ಜನರು ಪ್ರತ್ಯಕ್ಷ ಮತ್ತು ಪ್ರೋತ್ಸಾಹ ಕೊಟ್ಟು ಕಲೆಯನ್ನು ಮತ್ತು ಕಲಾಗಾರರನ್ನು ಬೆಳೆಸುತ್ತಾರೆ ಮತ್ತು ಉಳಿಸುತ್ತಾರೆ.         ಕುವೈಟ್ ಎಂಬ ಮರುಭೂಮಿಯಲ್ಲಿ, ಕೇವಲ ಕೆಲವೇ ಪಟ್ಟಣ, ಅದರೊಳಗೆ ಹುದುಗಿರುವ ಕಲೆಗಾಗಾರರು, ಹಲವಾರು ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಡುವ ಖುಷಿ ಬಹಳಷ್ಟು ಇದೆ. ಕಥೆ, ನಿರೂಪಣೆ, ಬರಹ, ನೃತ್ಯ, ನಟನೆ, ಚಿತ್ರ, ಇಂತಹ ಅನೇಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ನೆಮ್ಮದಿಗೆ ಕಾರಣರಾಗುವ ಈ ಪ್ರತೀ ಕಲಾವಿ...

(ಲೇಖನ -99)ಭಾರತದ ಕೃಷಿ ಪದ್ಧತಿ ಹವಾಗುಣಗಳಿಗೆ ಅನುಸಾರವಾಗಿ ಮಾತ್ರ ಕೃಷಿ ಬೆಳೆಯುವುದನ್ನು ಹೆಚ್ಚಾಗಿ ಅವಲಂಬಿತವಾಗಿದೆ

✍️Madhav. K. Anjar   (ಲೇಖನ - 99) ಭಾರತದ ಕೃಷಿ ಪದ್ಧತಿ ಹವಾಗುಣಗಳಿಗೆ ಅನುಸಾರವಾಗಿ ಮಾತ್ರ ಕೃಷಿ ಬೆಳೆಯುವುದನ್ನು  ಹೆಚ್ಚಾಗಿ ಅವಲಂಬಿತವಾಗಿದೆ. ಭಾರತದ ಕೃಷಿ ಮತ್ತು ಜಪಾನ್ ದೇಶದ  ಕೃಷಿ ಪದ್ಧತಿಗೆ  ಹೋಲಿಕೆಯನ್ನು ಮಾಡಿದಾಗ  ಮಾನವ ಅವಲಂಬಿತ  ಕೃಷಿ ಪದ್ಧತಿ ಭಾರತ ದೇಶದಲ್ಲಿ ಹೆಚ್ಚಾಗಿದೆ. ಇದರಿಂದ ರೈತರಿಗೆ ತನ್ನ  ಬೆಳೆಯನ್ನು ಉತ್ತಮ ಲಾಭದಲ್ಲಿ  ಪಡೆದುಕೊಳ್ಳಲು  ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕಾಲಾವಸ್ಥೆಗೆ ತಕ್ಕಂತೆ ಬೆಳೆಯುವ ಬೆಳೆಗಳಲ್ಲಿ  ಹವಾಮಾನದ  ವೈಪರಿತ್ಯ  ಮತ್ತು ಪ್ರಕೃತಿ  ವಿಕೋಪಗಳಿಂದ  ಉಂಟಾಗುವ ಅಡಚಣೆಗಳಿಂದ ರೈತರು ತಾನು ಬೆಳೆದ  ಬೆಳೆಯನ್ನು ಕಟಾವಿಗಿಂತ ಮುಂಚೆ  ಕಳೆದುಕೊಳ್ಳುತ್ತಾರೆ. ಇಂದಿಗೂ ಸಣ್ಣ ರೈತರುಗಳ ಕಷ್ಟಗಳು  ಹೇಳತೀರದು. ಸಣ್ಣ ರೈತರು ವರ್ಷಕ್ಕೆರಡು ಬಾರಿ ಕೃಷಿ ಮಾಡುವ ಸಂದರ್ಭಗಳು ಕೂಡ  ವಿರಳವಾಗುತ್ತಿದೆ. ಸರ್ಕಾರ  ಬೇಕಾದಷ್ಟು ಉಪಕರಣಗಳನ್ನು ತಂದಿದ್ದರೂ  ಇನ್ನೂ ಎಲ್ಲಾ ರೈತರಿಗೆ  ತಲುಪಿಸುವಲ್ಲಿ  ವಿಫಲವಾಗಿದೆ ಎಂದು ಕಾಣುತ್ತಿದೆ. ರೈತರ ಮನೆಗೆ ಸರ್ಕಾರದ ಸವಲತ್ತು,  ಅಥವಾ ವಿವಿಧ ರೂಪದ  ಕೃಷಿ ಪದ್ಧತಿಯ ವಿಧಾನಗಳನ್ನು ಹೇಳಿಕೊಡುವುದು  ಇಲ್ಲವಾಗಿದೆ. ಮಾಹಿತಿಗಳು ಬಂದಿದ್ದರೂ ಕೂಡ  ಕೆಲವೇ ಕೆಲವು ಜನರಿಗೆ  ಸರ್ಕಾರದ ಸ...

(ಲೇಖನ - 98) ಜೀವನ ಚಕ್ರ - ಹುಟ್ಟು ಮತ್ತು ಸಾವಿನ ನಡುವೆ ಬದುಕು ನಡೆಸುವುದು ಜೀವನವಾದರೆ, ಹುಟ್ಟು ಮತ್ತು ಸಾವಿನ ನಡುವೆ ಮಾಡುವ ತಪ್ಪು ಒಪ್ಪುಗಳು ಕರ್ಮಗಳಾಗುತ್ತವೆ. ಜೀವನವನ್ನು ಕೇವಲವಾಗಿ ಒಂದು ಸುತ್ತು ಅಥವಾ 24 ಗಂಟೆಗೆ ಹೋಲಿಸಬಹುದು

✍️Madhav. K. Anjar  (ಲೇಖನ - 98) ಜೀವನ ಚಕ್ರ - ಹುಟ್ಟು ಮತ್ತು ಸಾವಿನ ನಡುವೆ ಬದುಕು ನಡೆಸುವುದು ಜೀವನವಾದರೆ, ಹುಟ್ಟು ಮತ್ತು ಸಾವಿನ ನಡುವೆ ಮಾಡುವ ತಪ್ಪು ಒಪ್ಪುಗಳು ಕರ್ಮಗಳಾಗುತ್ತವೆ. ಜೀವನವನ್ನು ಕೇವಲವಾಗಿ ಒಂದು ಸುತ್ತು ಅಥವಾ 24 ಗಂಟೆಗೆ ಹೋಲಿಸಬಹುದು, ಇಪ್ಪತ್ತನಾಲ್ಕು ತಾಸುಗಳಲ್ಲಿ ನಾವೆದ್ದು, ಮಿಂದು, ತಿಂದು, ಕೆಲಸ ಕಾರ್ಯಗಳನ್ನು ಮಾಡಿ ವಿಶ್ರಾಂತಿಗಾಗಿ ಮಲಗಿ ಮತ್ತೆ ಮೇಲೆದ್ದರೆ ಮತ್ತೆ 24 ತಾಸು ಓಡಾಡಬಹುದೇನೆಂಬ ಭರವಸೆ. ಇನ್ನು ಸೂರ್ಯೋದಯದ ಮುಂದೆ ಏಳದೆ ಹೋದರೆ ಜೀವನವೆಂಬ ಪದಕ್ಕೆ ಪೂರ್ಣವಿರಾಮ. ಎಷ್ಟು ಕ್ಷಣಿಕವಲ್ಲವೇ? ಇಂದು ಬದುಕಿದ್ದ ಮನುಷ್ಯ, ಅಥವಾ ಯಾವುದೇ ಜೀವಿಗಳು ನಾಳೆ ಎಂಬ ಭರವಸೆಯಲ್ಲಿ ಬದುಕುತ್ತವೆ ಹೊರತು ನಾಳೆ ಎಂಬುವುದು ನಮ್ಮದಾಗಿರುತ್ತದೆ ಎಂದು ಖಂಡಿತವಾಗಿ ಹೇಳಲಾಗುವುದಿಲ್ಲ. ಆದರೆ ಕೆಲವು ಅವಿವೇಕಿ ಮನುಷ್ಯರ ಲಕ್ಷಣಗಳು ಅಮೃತ ಕುಡಿದ ದೇವರಂತೆ ಇರುತ್ತದೆ ಅಲ್ಲವೇ? ನಾನು ಎಂಬುವುದನ್ನು ಕೂಗಿ ಹೇಳುತ್ತಾ, ಅವನು ಎಂಬುವುದನ್ನು ದ್ವೇಷ ಸಾದಿಸುತ್ತ, ಹಿಡಿತವಿಲ್ಲದ ನಾಲಿಗೆಯೊಂದಿಗೆ ತನಗೆ ಬೇಕಾದಂತೆ ಬಣ್ಣ ಬದಲಾಯಿಸಿ ನಾಟಕೀಯವಾಗಿ ಬದುಕು ನಡೆಸುವ ಕೆಲವು ಕಳ್ಳ ಮನುಜರು ಹಳ್ಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ದಿನಕಳೆಯುತ್ತಾರೆ.         ಗೊಸುಂಬೆ ಬಣ್ಣ ತಾನು ಹೋದಲ್ಲೆಲ್ಲ ಬದಲಾಯಿಸುವಂತೆ ನಿಮ್ಮ ಜೀವನದಲ್ಲೂ ಇಂತಹ ಕೆಲವರನ್ನು ನೋಡಿರಬಹುದು. ಅಂತಹ ವ್ಯಕ್ತಿತ್...

( ಲೇಖನ 97 ), ಹೇಗಾದರೂ ಮಾಡಿ ಹಣ ಮಾಡಬೇಕು, ಹಣವಂತರಾಗಿ ಬಿಟ್ಟರೆ ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಹೇಳುತ್ತಾ, ದಿನ ಕಳೆದಂತೆ ದುರಾಲೋಚನೆಯ ಹಾದಿ ಹಿಡಿದು ಅತೀ ಹೆಚ್ಚಿನ ಜನರು

✍️Madhav. K. Anjar ( ಲೇಖನ 97 ),  ಹೇಗಾದರೂ ಮಾಡಿ ಹಣ ಮಾಡಬೇಕು, ಹಣವಂತರಾಗಿ ಬಿಟ್ಟರೆ ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಹೇಳುತ್ತಾ, ದಿನ ಕಳೆದಂತೆ ದುರಾಲೋಚನೆಯ ಹಾದಿ ಹಿಡಿದು ಅತೀ ಹೆಚ್ಚಿನ ಜನರು ಮಾಡಬಾರದ ಕೆಲಸಕ್ಕೆ ಕೈ ಹಾಕಿ ಕೆಲವರು ಗೆದ್ದಂತೆ ತೋರಿದರೂ ಇನ್ನು ಕೆಲವರು ಅದಕ್ಕೆ ತಕ್ಕಂತೆ ಶಿಕ್ಷೆಯನ್ನೂ ಅನುಭವಿಸುತ್ತಾರೆ. ಈ ಹಣವೆಂಬುವುದು ಮಾನ, ಮರ್ಯಾದೆ, ಸಂಬಂಧ, ಗೌರವ, ನಾಚಿಕೆ ಎಲ್ಲವನ್ನೂ ಮೀರಿಸುವ ಶಕ್ತಿಯನ್ನು ಹೊಂದಿದೆ. ಬರೇ ಹಣದ ಆಸೆಗೆ ಒಳಗಾಗುವ ಜನರು ಯಾವ ಹೀನ ಕೃತ್ಯವನ್ನು ಮಾಡುವುದಕ್ಕೂ ತಯಾರಾಗಿರುತ್ತಾರೆ. ಹಣವಿದ್ದರೆ ಯಾರಿಗೆ ಬೇಕು ಮಾನ ಮರ್ಯಾದೆ? ಅದನಿಟ್ಟುಕೊಂಡು ನಮಗೇನಾಗಬೇಕು? ಎಲ್ಲದಕ್ಕೂ ಹಣ ಮುಖ್ಯ, ಸಮಾಜ ನಮಗೇನು ಕೊಡುತ್ತದೆ? ಮೊದಲು ಹಣ ಮಾಡಬೇಕು ಆಮೇಲೆ ಎಲ್ಲವೂ ಸಿಗುತ್ತದೆ ಅನ್ನುವವರೂ ಇರುತ್ತಾರೆ. ಹಣ ಜೀವನಕ್ಕಾಗಿ ಬಹಳಷ್ಟು ಅಗತ್ಯ, ನ್ಯಾಯಯುತ ಸಂಪಾದನೆಯಲ್ಲಿ ಹಣವಂತರಾಗುವುದು ಸಜ್ಜನರು ಬಯಸಿದರೆ, ಅನ್ಯಾಯಯುತ ಸಂಪಾದನೆ ದುರ್ಜನರು ಮಾಡುತ್ತಾರೆ!  ಇಲ್ಲಿ ಯೋಚನೆಗಳಿಗೆ ಅನುಸಾರವಾಗಿ ಹಣವೆಂಬ ಮಾಯಕ್ಕೆ ಬಲಿಯಾಗುತ್ತಾರೆ.          ಎಲ್ಲರೂ ಒಳ್ಳೆಯವರಾದರೆ ಸಾಧ್ಯವಿದೆಯೇ? ಎಲ್ಲರೂ ಕೆಟ್ಟವರಾದರೂ ಬದುಕಲು ಸಾಧ್ಯವಿದೆಯೇ? ಬಹಳಷ್ಟು ಕಷ್ಟ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಬಹಳ ವಿರಳವಾಗುತ್ತಿದೆ, ...

(ಲೇಖನ -95) ನಿನ್ನ ಮಾತು ಕೊನೆಯ ಮಾತಾಗಬಹುದು, ನಿನ್ನ ಹೆಜ್ಜೆ ಕಟ್ಟ ಕಡೆಯ ಹೆಜ್ಜೆಯಾಗಬಹುದು, ನಿನ್ನ ನಗು ಕೊನೆಯ ನಗುವಾಗಬಹುದು,

 (ಲೇಖನ -95) ನಿನ್ನ ಮಾತು ಕೊನೆಯ ಮಾತಾಗಬಹುದು,  ನಿನ್ನ ಹೆಜ್ಜೆ ಕಟ್ಟ ಕಡೆಯ ಹೆಜ್ಜೆಯಾಗಬಹುದು, ನಿನ್ನ ನಗು  ಕೊನೆಯ ನಗುವಾಗಬಹುದು,  ನಿನ್ನ ಕನಸು ಕೊನೆಯ ಕನಸಾಗಬಹುದು, ನಿನ್ನ ನೋಟ  ಕೊನೆಯ ನೋಟವಾಗಬಹುದು, ಬದುಕಿನ ಬಂಡಿ  ಓಡುತ್ತಿರುವಾಗಲೇ  ನಿಂತು ಬಿಡಬಹುದು. ಯಾರಿಗೂ  ಏನನ್ನೂ ಮಾಡಲು ಸಾಧ್ಯವಿಲ್ಲ. ನಿನ್ನಲ್ಲಿರುವ  ಅಧಿಕಾರಗಳು  ಪ್ರಯೋಜನಕ್ಕೆ ಬರದು, ನಿನ್ನಲಿರುವ  ಹಣ ಐಶ್ವರ್ಯಗಳು  ಉಪಯೋಗಕ್ಕೆ ಬರದು, ನಿನ್ನಲ್ಲಿರುವ  ಎಲ್ಲಾ ಸಂಬಂಧಗಳು  ಕೈ ಚೆಲ್ಲಿ ಕುಳಿತುಕೊಳ್ಳಲುಬಹುದು. ಜೊತೆಯಲ್ಲಿದ್ದ  ಎಲ್ಲವೂ  ನಿಂತು ಹೋಗಬಹುದು. ನಾನು ನನ್ನದು, ನಮ್ಮವರು, ಎಲ್ಲವೂ  ಶೂನ್ಯವಾಗಬಹುದು. ಬದುಕೆಂಬ  ದೋಣಿಯು ಬೀರುಗಾಳಿಗೆ ಸಿಕ್ಕಿ ದಡ ಸೇರುವ ಮುನ್ನವೇ  ಮುಳುಗಬಹುದು. ಭರವಸೆಯ ಜೀವನ  ನಿನ್ನದಾಗಿರಲಿ, ಪ್ರಾಮಾಣಿಕ ಜೀವನ  ನಿನ್ನದಾಗಿರಲಿ,  ಅನ್ಯರ ಜೀವಕ್ಕೆ  ಬೆಲೆ ಕೊಡುವ ಜೀವನ  ನಿನ್ನದಾಗಿರಲಿ, ಅತಿಯಾಸೆಗೆ ಬೀಳದೆ  ನೆಮ್ಮದಿಯ ಬದುಕು  ಸಾಗಿಸುವ  ದಾರಿ   ನಿನ್ನದಾಗಿರಲಿ. ಸತ್ಯದ ಹೆಜ್ಜೆ  ನಿನ್ನ ಹೆಜ್ಜೆಯಾಗಲಿ,  ಗೌರವದ ಬದುಕು ನಿನ್ನದಾಗಿರಲಿ, ಮಾನವನಾಗಿ ಬಾಳುವ  ಧೈರ್ಯ ನಿನಗಿರಲಿ. ಅವರಿವರ ಮನೆಗೆ ಕನ್ನ ಹಾಕಬೇಡ, ಅವರಿವರ ಮನಸಿಗೆ...

ನಿನಗಾಗಿ ನಾನಿರುವೆ

ಮುದ್ದಾದ ಮೊಗದಲಿ ಮುಗುಳುನಗೆ ಕಂಡಾಗ ಸದ್ದುಮಾಡದೇ ಬಂದು ಮುತ್ತಿನ ಸುರಿಮಳೆಯನ್ನೀಯುವೆ ನಿದ್ದೆಯಲು ನಿನ್ನ ಜೊತೆ ಕನಸಾಗಿ ನಾ ಬರುವೆ, ಕದ್ದು ಮುಚ್ಚಿ ನಿನ್ನಯ ಸೌಂದರ್ಯವ  ಸವಿಯುವೆ ಚಂದಿರನಾಗಿ ನಾ ಬಂದು  ನಿನ್ನ ಮೊಗವ ಝಳಪಿಸುವೆ ಜೀವನದ ಪ್ರತೀ ಕ್ಷಣವೂ ನಿನಗಾಗಿ ನಾನಿರುವೆ        ✍️ಮಾಧವ. ಕೆ. ಅಂಜಾರು 

(ಲೇಖನ -96)ನನ್ನ ಪ್ರೀತಿಯ ಅಣ್ಣನಿಗೆ ಪ್ರೀತಿಯ ನಮಸ್ಕಾರಗಳು, ನೀನು ಕ್ಷೇಮವಾಗಿದ್ದೀ ಎಂದು ಭಾವಿಸುತ್ತೇನೆ. ಮನೆಯಲ್ಲಿ ನಾವೆಲ್ಲರೂ ಸೌಖ್ಯವಾಗಿದ್ದೇವೆ,

✍️Madhav. K. Anjaru  (ಲೇಖನ -96)ನನ್ನ ಪ್ರೀತಿಯ ಅಣ್ಣನಿಗೆ ಪ್ರೀತಿಯ ನಮಸ್ಕಾರಗಳು, ನೀನು ಕ್ಷೇಮವಾಗಿದ್ದೀ ಎಂದು ಭಾವಿಸುತ್ತೇನೆ. ಮನೆಯಲ್ಲಿ ನಾವೆಲ್ಲರೂ ಸೌಖ್ಯವಾಗಿದ್ದೇವೆ, ನಿನಗೆ ಒಂದು ಸಂತೋಷದ ಸುದ್ದಿ ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ, ನಿನ್ನ ನೆನಪು ಸದಾ ಕಾಡುತ್ತಿರುತ್ತದೆ. ನೀನಿಲ್ಲದೆ ಇಲ್ಲಿ ನಮಗೆ  ಬಹಳ ಬೇಸರವಾಗುತ್ತದೆ. ಹಬ್ಬ ಜಾತ್ರೆ ಮತ್ತು ಯಕ್ಷಗಾನ ದೇವರ ಕೆಲಸಗಳು ಆಗುತ್ತಿರುವಾಗ ನಿನ್ನ ನೆನಪಾಗುತ್ತದೆ. ನೀನು ನಮ್ಮೊಂದಿಗೆ ಇರುವಾಗ ಅದೇನು ಧೈರ್ಯ ನಮಗೇನು ಚಿಂತೆ ಇರಲಿಲ್ಲ. ಇವಾಗ ನಮಗೆ ಸ್ವಲ್ಪ ಕಷ್ಟವಾಗುತ್ತದೆ ಆದರೂ ಪರವಾಗಿಲ್ಲ ನೀನು ನಮಗಾಗಿ ದೂರವಿದ್ದೀಯ ತುಂಬಾ ಜಾಗ್ರತೆ ಮಾಡಿಕೊಳ್ಳು ಊರಿನ ಬಗ್ಗೆ ಜಾಸ್ತಿ ಚಿಂತಿಸಬೇಡ ನಾವೆಲ್ಲರೂ ಒಟ್ಟಿಗೆ ಇದ್ದೇವೆ ನೀನು ತುಂಬಾ ಜಾಗ್ರತೆ ಮಾಡುತ್ತಿರು. ನಿನ್ನ ಹುಟ್ಟುಹಬ್ಬದಂದು ನಾವು ಮನೆಯಲ್ಲಿ ಪಾಯಸ ತಿಂಡಿ ಗಳನ್ನು ಮಾಡುತ್ತೇವೆ. ನಮ್ಮ ಪರವಾಗಿ ನೀನು ಕೂಡ ಚೆನ್ನಾಗಿ ಆಹಾರವನ್ನು ತೆಗೆದುಕೊಳ್ಳುತ್ತಿರು. ಹಾಗೆಯೇ ಪತ್ರ ಬರೆಯುತ್ತ ವಿಷಯವನ್ನು ಹೇಳಲು ಮರೆತುಬಿಟ್ಟೆ ಅದೇನೆಂದರೆ ನಾನು ನನ್ನ ತರಗತಿಯಲ್ಲಿ ಫಸ್ಟ್ ಕ್ಲಾಸ್ ಪಾಸಾಗಿದ್ದೇನೆ ಇನ್ನು ಮುಂದೆ ಚೆನ್ನಾಗಿ ಓದಬೇಕೆಂಬ ಆಸೆ........         ಹೌದು ಇಂತಹ ಅನೇಕ ಪತ್ರಗಳನ್ನು ನಮ್ಮ ಬದುಕಿನಲ್ಲಿ ನೋಡಿ ಓದಿ ಸಂತೋಷ ಪಟ್ಟ ದಿನಗಳು ಇಂದು ಬರಲು ಸಾಧ್ಯವೇ ಇಲ್ಲ ಯಾಕೆಂದರ...