ಅರಮನೆ

ಒಂದಷ್ಟು ಅಮಾಯಕರನ್ನು  ಬಲಿಕೊಟ್ಟು  
ದಿನಕ್ಕೆ ಕುಡಿದ ಮೂರು ಬೀರು  
ತೆಗೆದುಕೊಂಡ ಒಂದು ದೊಡ್ಡ ಕಾರು 
ಮನೆಯೊಳಗೆ ಭಯವೇ  
ಮನೆಯ ಹೊರಗೂ ಭಯವೇ  
ಎಲ್ಲಿ ಹೋದರೂ ಅವನಿಗಿಲ್ಲ  
ನೆಮ್ಮದಿ ಒಂದು ಚೂರು  

ಸಂಪಾದಿಸಿದ ಸಂಪತ್ತೆಲ್ಲ  
ಕಣ್ಣಿಗೆ ಕಾಣದ ಶಾಪವಾಗಿ  
ನಿದ್ದೆಯನ್ನೇ ಕದಿಯುತಿದೆ  
ನಿಶ್ಶಬ್ದದ ಕೂಗು ಆಗಿ  
ನಗುವ ಮುಖದ ಹಿಂದೆ  
ಕಡಿದುಕೊಳ್ಳುವ ಪಶ್ಚಾತ್ತಾಪ  
ಮನದಾಳದ ಕತ್ತಲಿಯಲ್ಲಿ  
ಹರಿದು ಹೋಗುತಿದೆ ಅವನ ಸ್ವಭಾವ  

ಇತರರ ಕಣ್ಣೀರಿನಿಂದ  
ಕಟ್ಟಿದ ಆ ಅರಮನೆ  
ಒಂದು ದಿನ ಕುಸಿಯುತ್ತದೆ  
ಸತ್ಯದ ಭಾರ ತಡೆಯದೆ  
ಧನವೇ ದೇವರೆಂದವನು  
ಮಾನವೀಯತೆ ಮರೆತವನು  
ಕೊನೆಗೆ ಅರಿಯುವನು  
ನೆಮ್ಮದಿಯ ಬೆಲೆ ಹಣವಲ್ಲವೆಂದು  
   ✍🏻ಮಾಧವ ಕೆ ಅಂಜಾರು 

Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ