(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ"  ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರು ಕನಸಾಗಿ ತೆಗೆದುಕೊಂಡರೆ ಇನ್ನು ಕೆಲವರು ಹವ್ಯಾಸವಾಗಿ ತೆಗೆದುಕೊಂಡು ಬರ ಬರುತ್ತಾ ಬಹಳಷ್ಟು ಎತ್ತರಕ್ಕೆ ಬೆಳೆದು ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಒಂದು ಕಡೆಯಲ್ಲಿ ಆತ್ಮ ತೃಪ್ತಿ,ಒಂದು ಕಡೆಯಲ್ಲಿ ಸಾಧನೆಯ ಮೆಟ್ಟಿಲು ಹತ್ತುವ ಖುಷಿ. ಇವೆರಡನ್ನು ಗಳಿಸಲು ಪ್ರತಿಯೊಬ್ಬ ಕಲಾಸಕ್ತಿಯ ವ್ಯಕ್ತಿ ತನ್ನ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಅನ್ನುವುದನ್ನು ಯೋಚಿಸಲು ಸಾಧ್ಯವಿಲ್ಲ. ನಿಮಗೆ ಸಮಯ ಎಲ್ಲಿ ಸಿಗುತ್ತದೆ? ನೀವು ಇದನ್ನೆಲ್ಲಾ ಹೇಗೆ ಮಾಡುತ್ತೀರಿ ಎಂದು ಕೇಳುವ ಕೆಲವು ಜನರು ಪ್ರತ್ಯಕ್ಷ ಮತ್ತು ಪ್ರೋತ್ಸಾಹ ಕೊಟ್ಟು ಕಲೆಯನ್ನು ಮತ್ತು ಕಲಾಗಾರರನ್ನು ಬೆಳೆಸುತ್ತಾರೆ ಮತ್ತು ಉಳಿಸುತ್ತಾರೆ.



        ಕುವೈಟ್ ಎಂಬ ಮರುಭೂಮಿಯಲ್ಲಿ, ಕೇವಲ ಕೆಲವೇ ಪಟ್ಟಣ, ಅದರೊಳಗೆ ಹುದುಗಿರುವ ಕಲೆಗಾಗಾರರು, ಹಲವಾರು ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಡುವ ಖುಷಿ ಬಹಳಷ್ಟು ಇದೆ. ಕಥೆ, ನಿರೂಪಣೆ, ಬರಹ, ನೃತ್ಯ, ನಟನೆ, ಚಿತ್ರ, ಇಂತಹ ಅನೇಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ನೆಮ್ಮದಿಗೆ ಕಾರಣರಾಗುವ ಈ ಪ್ರತೀ ಕಲಾವಿದರಿಗೆ ನಾವು ತಲೆ ಬಾಗಲೇಬೇಕು. ನಾವುಗಳು ನೋಡುವ ಪ್ರತಿಯೊಂದು ದೃಶ್ಯದ ಹಿಂದೆ ಪ್ರತೀ ಕಲಾವಿದನ ಶ್ರಮ ಕೆಲವು ಪ್ರೇಕ್ಷಕರಿಗೆ ಅರ್ಥವಾದರೆ ಇನ್ನು ಕೆಲವರಿಗೆ ಅರ್ಥವಾಗದು. ಸಾಮಾನ್ಯವಾಗಿ ಇಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕಲಾಗಾರನ ಕೊಡುಗೆ ಅತೀ ದೊಡ್ಡದು.

           ಹೌದು, ಒಂದು ವ್ಯಕ್ತಿ ಸಾವಿರಾರು ಜನರನ್ನು ನಕ್ಕು ನಗಿಸಬೇಕಿದ್ದರೆ ಅವರು ಯಾವ ರೀತಿಯಲ್ಲಿ ತಯಾರಾಗಿರುತ್ತಾರೆ? ಅಥವಾ ಒಬ್ಬ ನಿರ್ದೇಶಕ, ಕಲಾ ಪ್ರಾಧ್ಯಾಪಕ ನೀಡುವ ಮತ್ತು ಶ್ರಮಿಸುವ ಕೆಲಸಗಳೇನು? ಎಷ್ಟೇ ಕಷ್ಟದಲ್ಲಿದ್ದರು ಕಲೆಯನ್ನು ಜೀವ ಮತ್ತು ಜೀವನವನ್ನಾಗಿಸಿ ಬದುಕುವ ಕಲೆಗಾರರ ನಡುವೆ ಕೆಲಸದ ನಡುವೆ ತನ್ನನ್ನು ತಾನು ಒಂದಲ್ಲ ಒಂದು ರೀತಿಯ ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುವ ಬಹಳಷ್ಟು ಜನ ಕುವೈಟ್ನಲ್ಲಿದ್ದಾರೆ, ಊರಿನ ಪ್ರತೀ ಹಬ್ಬ ಪಂಚಮಿಗಳನ್ನು ನೆನೆಸುತ್ತ ಸಂಘಟನೆಗಳು ಮಾಡುವ ಕಾರ್ಯಕ್ರಮದಲ್ಲಿ ಸಿಗುವ ಅವಕಾಶಗಳಿಂದ ತೃಪ್ತಿಪಡುವ ಅನೇಕ ಕಲಾವಿದರಿಗೆ ನಮ್ಮ ನಿಮ್ಮೆಲ್ಲರ ಸಹಾಯ ಇರಲೇಬೇಕು. ನಮಗಾಗಿ ಅವರು ಕೊಡುವ ಪ್ರತೀ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ ಮತ್ತು ನಮ್ಮೆಲ್ಲರ ಮುಖದಲ್ಲಿ ಸಾವಿರಾರು ನೋವನ್ನು ಮರೆಸುತ್ತದೆ.

        ಪ್ರತ್ಯೇಕವಾಗಿ, ಮಹಿಳೆಯರ ಪಾತ್ರ ತುಂಬಾನೇ ಕಷ್ಟಕರ, ನಾಟಕ, ಸಿನೆಮಾ ರಂಗದಲ್ಲಿ ನಟನೆ ಮಾಡುವ ನಟಿ ಅಥವಾ ನಟ ಪ್ರೇಕ್ಷಕರಿಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತಾರೆ. ಒಂದು ರಂಗ ಮಂಟಪದಲ್ಲಿ ಉತ್ತಮವಾದ ಪ್ರದರ್ಶನ ಅಥವಾ ನಟನೆಯನ್ನು ಮಾಡಲು ಹಗಲಿರುಳು ಶ್ರಮಪಡುತ್ತಾರೆ. ಆರೋಗ್ಯ, ಸಮಯದ ಅಭಾವ, ಗಂಡ, ಮಕ್ಕಳ ಸೇವೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತ ಕಲೆಗಾಗಿ ತನ್ನ ಪ್ರಾಣವನ್ನೇ ಕೊಡುತ್ತಾರೆ. ಶ್ರೀಮತಿ ಲೂಸಿ ಲೋಬೊ ಅರನ್ಹ, ಇವರೊಂದಿಗಿನ ನನ್ನ ಮಾತುಕತೆಯಿಂದ ಮತ್ತು ನಾವುಗಳು ನೋಡುತ್ತಿರುವ ಪರದೆಯ ಹಿಂದಿನ ನೋವು ನಲಿವು ಈ ರೀತಿಯಾಗಿದೆ. ಕೇವಲ ಒಂದೆರಡು ತಿಂಗಳ ಅಂತರ ಅಥವಾ ಅದಕ್ಕಿಂತಲೂ ಕಡಿಮೆ ಸಮಯದಲ್ಲಿ ಪ್ರದರ್ಶನಗಳನ್ನು ಮಾಡಲು ಅಣಿಯಾಗುವ ಕಲಾವಿದರು, ಒಂದು ಕರೆಗೆ ಓ ಗೊಟ್ಟು ತನ್ನ  ಚಿಕ್ಕ ಪುಟ್ಟ ಸಂಬಳ, ಮತ್ತು ಅತಿಯಾದ ಸಮಸ್ಯೆಗಳನ್ನು ಅನುಭವಿಸುತ್ತ ನಾಟಕದ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಕಲಾವಿದರು ತನ್ನ ಅಮೂಲ್ಯ ಸಮಯವನ್ನು ಮುಡಿಪಾಗಿಡುತ್ತಾರೆ. ಇನ್ನೇನು ಕೇವಲ 30 ನಿಮಿಷದಲ್ಲಿ ಕಾರ್ಯಕ್ರಮ ನಡೆಯಬೇಕು ಅನ್ನುವಷ್ಟರಲ್ಲಿ ಆಪ್ತರನ್ನು ಕಳೆದುಕೊಂಡ ದುಃಖದ ನಡುವೆ ಪ್ರೇಕ್ಷಕರನ್ನು ನಕ್ಕು ನಗಿಸಿರುವ ಅನೇಕ ಕಲಾವಿದರು ಇದ್ದಾರೆ. ತನ್ನ ಜೀವ ನಿನ್ನೆಯವರೆಗೆ ಸರಿಯಾಗಿ ಇತ್ತು ಇವತ್ತು ಹುಷಾರಿಲ್ಲ ಇಂದು ಸಂಜೆ ಕಾರ್ಯಕ್ರಮವಿದೆ ನಾನು ಚೆನ್ನಾಗಿ ನನ್ನ ನಟನೆ ಮಾಡಬೇಕು ಸರಿಯಾಗಿ ನಿಲ್ಲಲು ಕುಳಿತುಕೊಳ್ಳಲು ಆಗದಿದ್ದರೂ ನಾನು ಮಾಡಿಯೇ ಮಾಡುತ್ತೇನೆ ಎಂಬ ಆತ್ಮ ಸ್ಥೈರ್ಯದಿಂದ ಅದೆಷ್ಟು ಕಲಾವಿದರು ಪ್ರದರ್ಶನ ಮಾಡಿದ್ದಾರೆ. ಆಫೀಸಿನಲ್ಲಿ ಅದೆಷ್ಟು ದೊಡ್ಡ ಸ್ಥಾನದಲ್ಲಿ ಇದ್ದರೂ ಅದೆಷ್ಟು ಸಿರಿವಂತ, ಡಾಕ್ಟರ್, ಇಂಜಿನಿಯರ್, ಕಂಪನಿಯ ಮಾಲೀಕನಾಗಿದ್ರು ಕಲಾಸಕ್ತಿ ಹೊಂದಿದ್ದರೆ ಹುದ್ದೆಯನ್ನೂ ನೋಡದೆ ತನ್ನ ಸೇವೆಯನ್ನು ಮಾಡುವ ಅನೇಕ ಸಿರಿಮನಸ್ಸಿನ ಜನರು. ಇವೆಲ್ಲವೂ ನೋಡುವಾಗ ಈ ಕಲೆಗೆ ಅದೆಷ್ಟು ಸಾಮರ್ಥ್ಯ ಇರಬಹುದು ಅಲ್ಲವೇ?

          ಮನದೊಳಗೆ ಅಳುತಿದ್ದರೂ, ಪ್ರೇಕ್ಷಕರನ್ನು ನಗಿಸುವ, ಮನ ಪರಿವರ್ತನೆ , ಹೊಸ ಹೊಸ ವಿಚಾರ, ಸಂಧರ್ಭ, ಜೀವನ ಪಾಠ, ಹೇಳಿಕೊಡುವ ಶಕ್ತಿ ಈ ಪ್ರತಿಯೊಬ್ಬ ಕಲಾವಿದರಿಗೆ ಇರುತ್ತದೆ. ಕಲಾವಿದರು ನಿಜವಾದ ಭಾಗ್ಯವಂತರು, ಶ್ರೀಮಂತರು, ಗುಣವಂತರು, ಮತ್ತು ಅವರೇ ನಿಜವಾದ ವಿಶಾಲ ಹೃದಯದವರು. ನಿನ್ನನ್ನು ನಗಿಸುವ ಸಾಮರ್ಥ್ಯ ಅವರಲ್ಲಿದೆ, ನಿನ್ನಲ್ಲಿ ಕಣ್ಣೀರು ಬರಿಸುವ ಶಕ್ತಿ ಅವರಲ್ಲಿದೆ, ನಿನ್ನನ್ನು ಬದಲಾಯಿಸುವ ಶಕ್ತಿ ಅವರಲ್ಲಿದೆ, ನಿನ್ನನು ಬೆಳೆಸುವ, ಉಳಿಸುವ ಶಕ್ತಿಯನ್ನು ಕೂಡ ಅವರಲ್ಲಿದೆ. ನಿನ್ನ ಜೀವನದ ಪ್ರತಿಯೊಂದು ಘಟನೆಯನ್ನು ವಿವಿಧ ರೂಪದಲ್ಲಿ ಪ್ರದರ್ಶನ ಮಾಡುವ ತಾಕತ್ತು ಕಲಾಗಾರನಲ್ಲಿದೆ. ಕಲೆಯನ್ನು ಪ್ರೋತ್ಸಾಹಿಸಿ, ಎಲ್ಲಿ ಸಿಕ್ಕಿದರೂ ಅವರು ಮಾಡುವ ಪ್ರತಿಯೊಂದು ನಟನೆಯ ಬಗ್ಗೆ ಒಂದೆರಡು ಮಾತನ್ನು ಹೇಳಿ, ತಪ್ಪುಗಳು ಇದ್ದಲ್ಲಿ ತಿದ್ದುವಂತೆ ಹೇಳಿ. ತಪ್ಪುಗಳು ಆದಲ್ಲಿ ಕ್ಷಮಿಸಿ, ಇನ್ನೂ ಉತ್ತಮವಾದ ಪ್ರದರ್ಶನ ಮಾಡಲು ಅವಕಾಶಗಳನ್ನು ಮಾಡಿ. ನಾವುಗಳು ಪ್ರೇಕ್ಷಕರು ಕಲಾವಿದರ ರಕ್ಷಕರಾಗಬೇಕು, ಕಲೆಯನ್ನು ಜೀವನವನ್ನಾಗಿಸಿ ಬದುಕುವ ಕಲಾವಿದರಿಗೆ ಸರ್ಕಾರದ ಅಲ್ಪ ಸಹಾಯ ಸಿಗುತ್ತಿರಲಿ. ಇನ್ನೂ ಮುಂದಿನ ದಿನಗಳಲ್ಲಿ ಭವಿಷ್ಯದ ಹೊಸ ಕಲಾವಿದರನ್ನು ಸೃಷ್ಟಿಸಿ ನಮ್ಮ ನಿಮ್ಮೆಲ್ಲರ ನೆಮ್ಮದಿಯನ್ನು ಇನ್ನಷ್ಟು ಹೆಚ್ಚಿಸಲಿ.

       ಕುವೈಟ್ ದೇಶದಲ್ಲಿರುವ ಮತ್ತು ನಮ್ಮ ಊರು, ದೇಶದಲ್ಲಿರುವ ಪ್ರತಿಯೊಬ್ಬ ಕಲಾವಿದರಿಗೆ ಅದೆಷ್ಟು ನಮನ ಸಲ್ಲಿಸಿದರೂ ಕಡಿಮೆ. ಹೆಸರನ್ನು ಹೇಳಲು ಹೋದರೆ ನನ್ನ ಪುಟಗಳು ಸಾಲದು, ಪ್ರತಿಯೊಬ್ಬ ಕಲಾವಿದನಿಗೆ ಸುಖ ಶಾಂತಿ ನೆಮ್ಮದಿ ಶ್ರೀ ದೇವರು ಕರುಣಿಸಲಿ 🙏🏿

        ✍️ಮಾಧವ. ಕೆ. ಅಂಜಾರು 

        















Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ