ಬದುಕೊಂದು ಕವನ,
ಬದುಕೊಂದು ಕವನ
ಅಲ್ಲಿಯ ಏರಿಳಿತಗಳೇ ಜೀವನ.
ಇಂದು-ನಾಳೆಯ ಹೊಸ ಕನಸಿನ ಪುಟಗಳು,
ತೆರೆಯುವ ಕ್ಷಣದಲ್ಲಿ
ನನಸಾಗುವದೇ ಜೀವನ.
ಸಂತಸದ ಸುರಿಮಳೆಯಲಿ ನಗು ಮೂಡುತ್ತದೆ,
ದುಃಖದ ನೆರಳಲ್ಲಿ ಮನಸ್ಸು ಗಾಢವಾಗುತ್ತದೆ.
ಪ್ರತಿ ಹೆಜ್ಜೆಯಲ್ಲೂ ಪಾಠವೊಂದು ಬಿಟ್ಟು,
ಕಾಲವು ನಮ್ಮನ್ನು ರೂಪಿಸುತ್ತಿದೆ.
ಆಸೆಯ ದೀಪಗಳು ದಾರಿಯನ್ನು ತೋರಿಸಿ,
ನಂಬಿಕೆಯ ಬೆಳಕು ಹೃದಯ ತುಂಬಿ,
ಬಿದ್ದಾಗಲೂ ಮತ್ತೆ ಎದ್ದೇಳುವ ಶಕ್ತಿ—
ಅದೇ ಬದುಕಿನ ಸತ್ಯ.
ಕ್ಷಣ ಕ್ಷಣವೂ ಕಥೆಯಾಗುತ್ತಾ,
ನಮ್ಮ ಹೆಜ್ಜೆಗಳು ಗುರುತು ಬಿಡುತ್ತಾ,
ಅಂತಿಮವಾಗಿ ನೆನಪಾಗುವುದು
ನಾವು ನಡೆದ ಪಯಣವೇ ಜೀವನ.
✍🏻ಮಾಧವ ಕೆ ಅಂಜಾರು
Comments
Post a Comment