ಜೊತೆಗಿರಬೇಕು

ತಾಯಿಯಾದವಳಿಗೂ  
ತಾಯಿಯ ಮಮತೆ ಬೇಕು
ದುಃಖವಿರುವಾಗ 
ಸಂತೋಷವಿರುವಾಗ 
ತಾಯಿ ಜೊತೆಗಿರಬೇಕು,

ತಂದೆಯಾದವನಿಗೂ 
ತಂದೆಯ ಮಮತೆ ಬೇಕು 
ಸವಾಲೆದುರಾದಾಗ 
ಜಗವ ಗೆಲ್ಲಬೇಕಾದಾಗ 
ತಂದೆ ಜೊತೆಗಿರಬೇಕು 

ತಂಗಿಯಾದವಳಿಗೂ 
ಅಣ್ಣನ ಮಮತೆ ಬೇಕು 
ತಂದೆ ತಾಯಿಯಂತೆ 
ಪ್ರೀತಿ ನೀಡಬೇಕಾದಾಗ 
ಭಯವಿಲ್ಲದೆ ಬದುಕಬೇಕಾದಾಗ 
     ✍🏻ಮಾಧವ ಕೆ ಅಂಜಾರು 








Comments