( ಲೇಖನ 97 ), ಹೇಗಾದರೂ ಮಾಡಿ ಹಣ ಮಾಡಬೇಕು, ಹಣವಂತರಾಗಿ ಬಿಟ್ಟರೆ ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಹೇಳುತ್ತಾ, ದಿನ ಕಳೆದಂತೆ ದುರಾಲೋಚನೆಯ ಹಾದಿ ಹಿಡಿದು ಅತೀ ಹೆಚ್ಚಿನ ಜನರು

✍️Madhav. K. Anjar

( ಲೇಖನ 97 ),  ಹೇಗಾದರೂ ಮಾಡಿ ಹಣ ಮಾಡಬೇಕು, ಹಣವಂತರಾಗಿ ಬಿಟ್ಟರೆ ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಹೇಳುತ್ತಾ, ದಿನ ಕಳೆದಂತೆ ದುರಾಲೋಚನೆಯ ಹಾದಿ ಹಿಡಿದು ಅತೀ ಹೆಚ್ಚಿನ ಜನರು ಮಾಡಬಾರದ ಕೆಲಸಕ್ಕೆ ಕೈ ಹಾಕಿ ಕೆಲವರು ಗೆದ್ದಂತೆ ತೋರಿದರೂ ಇನ್ನು ಕೆಲವರು ಅದಕ್ಕೆ ತಕ್ಕಂತೆ ಶಿಕ್ಷೆಯನ್ನೂ ಅನುಭವಿಸುತ್ತಾರೆ. ಈ ಹಣವೆಂಬುವುದು ಮಾನ, ಮರ್ಯಾದೆ, ಸಂಬಂಧ, ಗೌರವ, ನಾಚಿಕೆ ಎಲ್ಲವನ್ನೂ ಮೀರಿಸುವ ಶಕ್ತಿಯನ್ನು ಹೊಂದಿದೆ. ಬರೇ ಹಣದ ಆಸೆಗೆ ಒಳಗಾಗುವ ಜನರು ಯಾವ ಹೀನ ಕೃತ್ಯವನ್ನು ಮಾಡುವುದಕ್ಕೂ ತಯಾರಾಗಿರುತ್ತಾರೆ. ಹಣವಿದ್ದರೆ ಯಾರಿಗೆ ಬೇಕು ಮಾನ ಮರ್ಯಾದೆ? ಅದನಿಟ್ಟುಕೊಂಡು ನಮಗೇನಾಗಬೇಕು? ಎಲ್ಲದಕ್ಕೂ ಹಣ ಮುಖ್ಯ, ಸಮಾಜ ನಮಗೇನು ಕೊಡುತ್ತದೆ? ಮೊದಲು ಹಣ ಮಾಡಬೇಕು ಆಮೇಲೆ ಎಲ್ಲವೂ ಸಿಗುತ್ತದೆ ಅನ್ನುವವರೂ ಇರುತ್ತಾರೆ. ಹಣ ಜೀವನಕ್ಕಾಗಿ ಬಹಳಷ್ಟು ಅಗತ್ಯ, ನ್ಯಾಯಯುತ ಸಂಪಾದನೆಯಲ್ಲಿ ಹಣವಂತರಾಗುವುದು ಸಜ್ಜನರು ಬಯಸಿದರೆ, ಅನ್ಯಾಯಯುತ ಸಂಪಾದನೆ ದುರ್ಜನರು ಮಾಡುತ್ತಾರೆ!  ಇಲ್ಲಿ ಯೋಚನೆಗಳಿಗೆ ಅನುಸಾರವಾಗಿ ಹಣವೆಂಬ ಮಾಯಕ್ಕೆ ಬಲಿಯಾಗುತ್ತಾರೆ.

         ಎಲ್ಲರೂ ಒಳ್ಳೆಯವರಾದರೆ ಸಾಧ್ಯವಿದೆಯೇ? ಎಲ್ಲರೂ ಕೆಟ್ಟವರಾದರೂ ಬದುಕಲು ಸಾಧ್ಯವಿದೆಯೇ? ಬಹಳಷ್ಟು ಕಷ್ಟ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಬಹಳ ವಿರಳವಾಗುತ್ತಿದೆ, ನಂಬಿಕೆಗಳು ಇಲ್ಲವಾಗುತ್ತಿವೆ, ಬಾಂಧವ್ಯ, ವಿಶ್ವಾಸ, ಎಲ್ಲವೂ ನಾಟಕೀಯವಾಗುತ್ತಿದೆ. ಯಾರನ್ನೂ ನಂಬದ ಸ್ಥಿತಿಗೆ ಈ ಸಮಾಜ ತಲುಪಿದೆ. ಇದಕ್ಕೆಲ್ಲ ಕಾರಣ ಹಣ, ಹಣ ಹಣ. ಈ ಹಣದ ವ್ಯವಹಾರಗಳಿಂದ ನಿಜವಾದ ಸಮಸ್ಯೆಗೆ ಒಳಗಾದ ಜನರು ಮಾತ್ರ ಕಷ್ಟ ಪಡುತ್ತಾರೆ. ಕೊಟ್ಟ ಹಣ ಹಿಂತಿರುಗಿಸದೆ ಒಂದಷ್ಟು ಕಾರಣಗಳನ್ನು ಮುಂದಿಡುತ್ತ ದಿನಕಳೆಯವ ಜನರು, ನಾಚಿಗೆ ಮರ್ಯಾದೆ ಇಲ್ಲದೇ ತನ್ನ ಶೋಕಿ ಜೀವನಕ್ಕಾಗಿ ಇನ್ನೊಬ್ಬರ ಕೈ ಚಾಚಿ ಬದುಕುವ ಜನರನ್ನು ಅಲ್ಲಲ್ಲಿ ಕಾಣಬಹುದು. ಹಣದ ಕೊರತೆ ಜೀವನದಲ್ಲಿ ಒಂದಲ್ಲ ಒಂದು ಸಂಧರ್ಭದಲ್ಲಿ ಎಲ್ಲರಿಗೂ ಬರಬಹುದು, ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚಿ ಬದುಕುವ ಜನರು ಇಲ್ಲವಾಗುತ್ತಿದ್ದಾರೆ! ಕಾರಣ ಹಣದ ಬೆಲೆ ತಿಳಿಯದ ಜನರು ಅನ್ಯರನ್ನು ವಿವಿಧ ರೂಪದಲ್ಲಿ ಮೋಸ ಮಾಡಲು ಪ್ರಯತ್ನ ಮಾಡುತ್ತಾರೆ.

        ಕೆಲವರು ಅನಿವಾರ್ಯವಾಗಿ ಮೈ ಮಾರಿ ಸಂಪಾದನೆ ಮಾಡಿದರೆ, ಕೆಲವರು ಐಷರಾಮಿ ಜೀವನಕ್ಕಾಗಿ ಮೈ ಮಾರಿಕೊಳ್ಳುತ್ತಾರೆ, ಚಟಾವಿರುವವನು ಹಣವನ್ನು ಎಲ್ಲಿಂದರಾದರು ತರುತ್ತಾನೆ. ಮಾನವನಿಗೆ ಅತಿಯಾದ ದುಷ್ಟಚಟ ಹೀನ ಕೆಲಸಕ್ಕೆ ಕೈ ಹಾಕುವಂತೆ ಮಾಡುತ್ತದೆ. ಈ ದುಷ್ಟ ಚಟಕ್ಕೆ ಬಲಿಯಾಗುವ ಯುವ ಪೀಳಿಗೆ ಒಂದೊಂದೇ ತಪ್ಪುಗಳನ್ನು ಮಾಡುತ್ತ ಜೀವನದಲ್ಲಿ ನರಕಯಾತನೆ ಮಾಡುವ ಉದಾಹರಣೆಗಳು ಇರುತ್ತಾವೆ. ಸುಳ್ಳು ಹೇಳಿ ಹಣ ಮಾಡುವುದು, ಮೋಸ ಮಾಡಿ ಹಣ ಗಳಿಸುವುದು, ಇನ್ನಿತರ ಕಾರಣಗಳನ್ನು ಹೇಳಿ ಹಣ ಗಳಿಸುವುದು, ಡಿಲಿಂಗ್, ಡ್ರಗ್ಸ್, ತನ್ನ ಉದ್ಯೋಗದಲ್ಲಿ ಲಂಚ, ತನ್ನ ವ್ಯವಹಾರಗಳಲ್ಲಿ ಅತೀ ಹೆಚ್ಚಿನ ಮೋಸಗಳನ್ನು ಮಾಡಿ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುವ ಜನರನ್ನು ಕೂಡ ಕಾಣಬಹುದು. ಹಣದಾಸೆಗೆ ಬೀಳುವವನು ವೃತ್ತಿಯಲ್ಲಿ, ತನ್ನ ಸಂಬಂಧ, ಗೆಳೆಯ, ಗೆಳತಿ, ಅಣ್ಣ ತಮ್ಮ ಏನನ್ನೂ ಕೂಡ ನೋಡಲಾರ.

   ಹಣಕ್ಕಾಗಿ ಮಕ್ಕಳನ್ನು ಮಾರುವರಿದ್ದಾರೆ, ಹಣಕ್ಕಾಗಿ ಹೆಂಡತಿಯನ್ನು ಬಲಿ ಕೊಡುವವರು ಇದ್ದಾರೆ, ಹಣಕ್ಕಾಗಿ ವಿವಿಧ ವೇಶವನ್ನು ಹಾಕುವವರು ಇದ್ದಾರೆ, ಹಣಕ್ಕಾಗಿ ಸಾವಿರ ಸುಳ್ಳು ಹೇಳುವವರು ಇದ್ದಾರೆ, ಹಣಕ್ಕಾಗಿ ಕಳ್ಳತನ ಮಾಡುವವರು ಇದ್ದಾರೆ, ಹಣಕ್ಕಾಗಿ ಲಂಚ ಪಡೆಯುವವರು ಇದ್ದಾರೆ. ಹಣಕ್ಕಾಗಿ ಸುಳ್ಳಿನ ಪರವಾಗಿ ನಿಲ್ಲುವವರು ಇದ್ದಾರೆ. ಹಣಕ್ಕಾಗಿ ಕೊಲೆ ಮಾಡುವವರು ಇದ್ದಾರೆ, ಹಣಕ್ಕಾಗಿ ಬೇಡುವವರು ಇದ್ದಾರೆ. ಇದರಲ್ಲಿ ಹಣದ ಅತಿಯಾಸೆ ಇರುರುವವರ ಸಂಖ್ಯೆ ಎಲ್ಲದಕ್ಕೂ ಕೈ ಹಾಕುತ್ತಾರೆ. ಹೀಗೆ ಮಾಡುತ್ತ ಕೆಲವರು ಅತಿಯಾದ ಹಣ ಗಳಿಸುತ್ತಾರೆ ಗಳಿಸಿದ ಹಣ ಕೆಲವರು ಅನುಭವಿಸಿ ಸತ್ತರೆ ಇನ್ನು ಕೆಲವರು ಆ ಹಣದಿಂದಲೇ ಬಲಿಯಾಗುತ್ತಾರೆ.

       ಮತ್ತೊಬ್ಬ ಮಾಡಿದ ಸಂಪಾದನೆಗೆ ಕನ್ನ ಹಾಕುವ, ಬೆಲೆ ಇಲ್ಲದ ಜನರು ಈ ಲೋಕದಲ್ಲಿ ಅದೆಷ್ಟು ಹಣ ಗಳಿಸಿದರು ನ್ಯಾಯ ಯುತ ಮಾಡಿದ ಸಂಪಾದನೆಗೆ ಸಮಾನರಲ್ಲ. ಕೆಟ್ಟ ದಾರಿಯಲ್ಲಿ ಮಾಡಿರುವ ಹಣ ಹೇಗೆ ಬರುತ್ತದೆಯೋ ಅದೇ ರೀತಿಯಲ್ಲಿ ಕಳೆದುಕೊಂಡ ಉದಾಹರಣೆ ಬಹಳಷ್ಟು ಇದೆ. ಕೆಟ್ಟ ದಾರಿಯಲ್ಲಿ ಸಂಪಾದನೆ ಮಾಡಿದ ಅದೆಷ್ಟು ಜನರು ತಿನ್ನದೇ ಸತ್ತಿದ್ದಾರೆ, ಒಂದು ವೇಳೆ ಅವರು ತಿಂದರೂ ಮಕ್ಕಳು ಅದರ ಪಾಪದ ಕೊಡವನ್ನು ಹೊರುವ ಕೆಲಸವನ್ನು ಮಾಡಿದ ಉದಾಹರಣೆಗಳು ಕೂಡ ಇದೆ.

         ಹಣವೆಷ್ಟು ಮುಖ್ಯವೋ ಅಷ್ಟೇ ನಮ್ಮಲ್ಲಿ ಪ್ರಾಮಾಣಿಕತೆ, ಸೌಜನ್ಯ, ವಿನಯತೆ, ಗೌರವ, ಸತ್ಯ ಧರ್ಮವೂ ಮುಖ್ಯ. ಹಣದ ಅತಿಯಾಸೆಗೆ ಬಿದ್ದು ಇರುವ ಜೀವನವನ್ನು ಕಳೆದುಕೊಂಡು ಪಶ್ಚಾತಾಪ ಮಾಡುವ ಸ್ಥಿತಿಗೆ ತಲುಪದಂತೆ ಜಾಗ್ರತೆ ವಹಿಸಿ, ನಮ್ಮ ಮುಂದಿನ ಪೀಳಿಗೆಗೆ ಹಣವೇ ಜೀವನವಲ್ಲ ಎಂಬ ಮಾತನ್ನು ಮನವರಿಕೆ ಮಾಡಬೇಕಾಗಿದೆ.

         ✍️ಮಾಧವ. ಕೆ. ಅಂಜಾರು 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.