(ಲೇಖನ -99)ಭಾರತದ ಕೃಷಿ ಪದ್ಧತಿ ಹವಾಗುಣಗಳಿಗೆ ಅನುಸಾರವಾಗಿ ಮಾತ್ರ ಕೃಷಿ ಬೆಳೆಯುವುದನ್ನು ಹೆಚ್ಚಾಗಿ ಅವಲಂಬಿತವಾಗಿದೆ


✍️Madhav. K. Anjar 

 (ಲೇಖನ - 99) ಭಾರತದ ಕೃಷಿ ಪದ್ಧತಿ ಹವಾಗುಣಗಳಿಗೆ ಅನುಸಾರವಾಗಿ ಮಾತ್ರ ಕೃಷಿ ಬೆಳೆಯುವುದನ್ನು  ಹೆಚ್ಚಾಗಿ ಅವಲಂಬಿತವಾಗಿದೆ. ಭಾರತದ ಕೃಷಿ ಮತ್ತು ಜಪಾನ್ ದೇಶದ  ಕೃಷಿ ಪದ್ಧತಿಗೆ  ಹೋಲಿಕೆಯನ್ನು ಮಾಡಿದಾಗ  ಮಾನವ ಅವಲಂಬಿತ  ಕೃಷಿ ಪದ್ಧತಿ ಭಾರತ ದೇಶದಲ್ಲಿ ಹೆಚ್ಚಾಗಿದೆ. ಇದರಿಂದ ರೈತರಿಗೆ ತನ್ನ  ಬೆಳೆಯನ್ನು ಉತ್ತಮ ಲಾಭದಲ್ಲಿ  ಪಡೆದುಕೊಳ್ಳಲು  ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕಾಲಾವಸ್ಥೆಗೆ ತಕ್ಕಂತೆ ಬೆಳೆಯುವ ಬೆಳೆಗಳಲ್ಲಿ  ಹವಾಮಾನದ  ವೈಪರಿತ್ಯ  ಮತ್ತು ಪ್ರಕೃತಿ  ವಿಕೋಪಗಳಿಂದ  ಉಂಟಾಗುವ ಅಡಚಣೆಗಳಿಂದ ರೈತರು ತಾನು ಬೆಳೆದ  ಬೆಳೆಯನ್ನು ಕಟಾವಿಗಿಂತ ಮುಂಚೆ  ಕಳೆದುಕೊಳ್ಳುತ್ತಾರೆ. ಇಂದಿಗೂ ಸಣ್ಣ ರೈತರುಗಳ ಕಷ್ಟಗಳು  ಹೇಳತೀರದು. ಸಣ್ಣ ರೈತರು ವರ್ಷಕ್ಕೆರಡು ಬಾರಿ ಕೃಷಿ ಮಾಡುವ ಸಂದರ್ಭಗಳು ಕೂಡ  ವಿರಳವಾಗುತ್ತಿದೆ. ಸರ್ಕಾರ  ಬೇಕಾದಷ್ಟು ಉಪಕರಣಗಳನ್ನು ತಂದಿದ್ದರೂ  ಇನ್ನೂ ಎಲ್ಲಾ ರೈತರಿಗೆ  ತಲುಪಿಸುವಲ್ಲಿ  ವಿಫಲವಾಗಿದೆ ಎಂದು ಕಾಣುತ್ತಿದೆ. ರೈತರ ಮನೆಗೆ ಸರ್ಕಾರದ ಸವಲತ್ತು,  ಅಥವಾ ವಿವಿಧ ರೂಪದ  ಕೃಷಿ ಪದ್ಧತಿಯ ವಿಧಾನಗಳನ್ನು ಹೇಳಿಕೊಡುವುದು  ಇಲ್ಲವಾಗಿದೆ. ಮಾಹಿತಿಗಳು ಬಂದಿದ್ದರೂ ಕೂಡ  ಕೆಲವೇ ಕೆಲವು ಜನರಿಗೆ  ಸರ್ಕಾರದ ಸವಲತ್ತು, ಕೃಷಿ ಉಪಕರಣಗಳು, ಮಾಹಿತಿಗಳು  ರವಾನಿಯಾಗುತ್ತದೆ. ಇಂದಿನ ಜನಾಂಗಕ್ಕೆ  ಕೃಷಿ ಎಂಬ ಪದವನ್ನು ಕೇಳುವಾಗಲೇ  ಕಷ್ಟವೆನಿಸಿಕೊಳ್ಳುತ್ತದೆ. ಹಣವನ್ನು ಬೇರೆ ಬೇರೆ ರೂಪದಲ್ಲಿ  ಪಡೆಬಹುದೆಂಬ  ಅರಿವಾದಾಗ  ಕೃಷಿಯ ಅವಲಂಬಿತ  ಜನರು ತುಂಬಾ ಕಡಿಮೆಯಾಗಿದ್ದಾರೆ.

         ಒಂದು ಭಾಗದಲ್ಲಿ, ಕೃಷಿ ಸಂಬಂಧಿತ ಜಾಗಗಳನ್ನು  ರೈತರಿಗೆ ಮೋಸ ಮಾಡಿ  ಬಿಲ್ಡರ್ ಗಳು  ಕಂದಾಯ ಇಲಾಖೆಯ ಸಹಾಯದಿಂದ  ತನ್ನ ತೆಕ್ಕೆಗೆ  ಹಾಕಿಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು  ತುಂಬಾ ಜಾಣತನದಿಂದ  ಬರಡು ಭೂಮಿಯಾಗಿ ಮಾರ್ಪಡಿಸಿ  ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಿಸಿ  ಸಂಪೂರ್ಣವಾಗಿ  ಕೃಷಿಯನ್ನು ನಾಶ ಮಾಡುವಲ್ಲಿ  ಪರೋಕ್ಷವಾಗಿ ಕೆಲವು ಅಧಿಕಾರಿಗಳು ಮಾಡುತ್ತಿದ್ದಾರೆ. ಅಲ್ಲಲ್ಲಿ  ಸರ್ಕಾರಿ ಜಾಗಗಳು ವಿವಿಧ ಕಾರಣಗಳಿಂದ  ನಾಶಗೊಳ್ಳುತ್ತಿದೆ, ಕಾಡು,  ನೀರಿನ ಅಭಾವಗಳಿಂದ  ಈಗಾಗಲೇ  ಪರಿತಪಿಸುವ ಕಾಲ  ಬಂದೊಗಿದೆ. ಭ್ರಷ್ಟ  ಅಧಿಕಾರಿಗಳು  ತನ್ನ ಸೇವೆಯನ್ನು  ಇದೇ ರೀತಿ ಮುಂದುವರಿಸಿದಲ್ಲಿ  ಮುಂದಿನ ದಿನಗಳಲ್ಲಿ ಪಕ್ಕದ ದೇಶದ ದೇಶಕ್ಕೆ ಹೋಗಿ ಕೈ ಚಾಚುವ ಸಂದರ್ಭ ಬರಬಹುದು. ಕೃಷಿ ಪದ್ಧತಿಯನ್ನು  ಆಧುನಿಕರಣ ಗೊಳಿಸಿದರು  ಅದರ ಸಂಪೂರ್ಣ ಬಳಕೆಯಾಗುತ್ತಿಲ್ಲ. ಹಾಗಾಗಿ ಕೃಷಿಕರ ಸಂಖ್ಯೆಯು  ಕಡಿಮೆಯಾಗುತ್ತಾ ಬಂದಿದೆ. ದೊಡ್ಡ ಕೃಷಿ ಉಪಕರಣಗಳನ್ನು  ಬಳಸುವ ಕೃಷಿ ಪ್ರದೇಶವಿಲ್ಲದ ಕೃಷಿಕರರಿಗೆ ಸಣ್ಣ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಸರಿಯಾದ ಪರಿಕರ ಮತ್ತು ತರಬೇತಿ ಪ್ರತಿಯೊಬ್ಬ ಕೃಷಿಕನಿಗೆ ತಲುಪುವಂತೆ ಮಾಡಬೇಕು. ಅತೀ ಕೆಳಗಿನ ಮಟ್ಟದ ರಾಜಕೀಯ ವ್ಯಕ್ತಿಗಳು ಸಮಾನತೆಯ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷಗಳ ಪರವಾಗಿ ಕೆಲಸ ಮಾಡುವ ರಾಜಕೀಯತೆಯ ಬೇಧ ಭಾವ ಅಸಹಾಯಕ ಜನರಿಗೆ ಮುಳುವಾಗಬಹುದು. ಸರ್ಕಾರಿ ಸವಲತ್ತನ್ನು ನ್ಯಾಯಯುತವಾಗಿ ಎಲ್ಲಾ ರೈತರಿಗೆ ಕೊಡಬೇಕು.

ಈ ಮಾತನ್ನು ಹೇಳಲು ಕಾರಣವಿದೆ, ನಮ್ಮ ಊರಿನಲ್ಲಿಯೇ ನಡೆದ ಘಟನೆ. ಅದೊಂದು ಪಕ್ಷದ ಗ್ರಾಮಧ್ಯಕ್ಷ, ಸರ್ವೇ ಸಾಮಾನ್ಯ ಮನೆ ನೀರಾವರಿ ವ್ಯವಸ್ಥೆಗೆ ಅರ್ಜಿಯನ್ನು ಹಾಕಿದ ವ್ಯಕ್ತಿಗೆ ಪಕ್ಷ ಬೇಧದಿಂದ ಮನೆಗೆ ನಳ್ಳಿನೀರನ್ನು ಕೊಡಲು ಆಕ್ಷೇಪ ಮಾಡಿ ನೀರನ್ನು ಸರಬರಾಜು ಮಾಡದೇ ತೊಂದರೆ ಕೊಟ್ಟ ಪ್ರಸಂಗ, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು  ಮಾಡುವ ಒಂದು ಉದ್ದಟತನದಿಂದ ಇಂತಹ ಅನೇಕ ಜನರು ಕಷ್ಟಗಳನ್ನು ಅನುಭವಿಸುತ್ತಾರೆ, ಅಧಿಕಾರ ಸಿಕ್ಕಿದ ಕೂಡಲೇ ತನ್ನ ದ್ವೇಷ ತೀರಿಸಲು ಅಥವಾ ಅಧಿಕಾರ ದರ್ಪ ತೋರಿಸಲು ಉಪಯೋಗಿಸಿಕೊಳ್ಳುವ ಜನರು ಕೂಡ ಅಲ್ಲಲ್ಲಿ ಇರಬಹುದು.  ಇಂತವರಿಗೆ ಹೆಚ್ಚಾಗಿ ಜನರು ಆಯ್ಕೆ ಮಾಡುತ್ತಾರೆ, ಮತ್ತೆ ಅನುಭವಿಸುತ್ತಾರೆ.

       ಕೃಷಿಕ ದೇಶದ ಬೆನ್ನೆಲುಬು ಎಂಬೆಲ್ಲ ಮಾತನ್ನು ಭಾಷಣದಲ್ಲಿ ಕೇಳುತಿದ್ದೆವು ಮತ್ತು ಕೊನೆಯ ಪಕ್ಷ ಪಾಠ ದಲ್ಲಿ ಓದಿದ ನೆನಪುಗಳು ಇದ್ದಾವೆ, ಆದರೆ ಇಂದಿನ ದಿನಗಳಲ್ಲಿ ಕೃಷಿಕನ ಬೆನ್ನಿನ ಎಲುಬು ಮುರಿಯಲು ಕೆಲವು ಭ್ರಷ್ಟ ಜನರು ಹೋರಾಡುತ್ತಲೇ ಇರುತ್ತಾರೆ. ನಮ್ಮ ಊರಿನ, ದೇಶದ ಕೃಷಿಕನಿಗೆ ತೊಂದರೆಗಳು ಆಗದಿರಲಿ, ನಮ್ಮ ಊರಿನ ಗದ್ದೆ, ಕಾಡು, ಬೆಟ್ಟ ಗುಡ್ಡಗಳು, ನದಿಗಳು ಉಳಿಯಲಿ. ಹಚ್ಚ ಹಸಿರಿನ ಸೌಂದರ್ಯ ನಮ್ಮ ಸುತ್ತಲೂ ಇರಲಿ. ಕೃಷಿಕನೊಬ್ಬನಿದ್ದರೆ ನಿಮ್ಮ ವಾತಾವರಣ ಸುಂದರವಾಗಿ ಇರುತ್ತದೆ, ನೀರು, ಗಾಳಿ, ಮಳೆ, ಎಲ್ಲವೂ ಸರಿಯಾಗಿ ಸಿಗುತ್ತದೆ, ಇಲ್ಲವಾದಲ್ಲಿ ಎಲ್ಲವೂ ಮಾಯವಾಗುತ್ತದೆ.

        ✍️ಮಾಧವ. ಕೆ. ಅಂಜಾರು 


         

        









Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.