Posts

ಆಳ್ವಿಕೆ (ಕವನ -61)

ಸೃಷ್ಟಿಯಕುರಿತು ಎಳ್ಳಷ್ಟೂ ಅರಿಯದ ನಾವು ಬ್ರಹ್ಮಾಂಡ ಆಳುವಂತೆ ನಡೆದುಕೊಳ್ಳುತ್ತೇವೆ! ನಾಳೆಯಬಗ್ಗೆ ಏನೆಂದು ತಿಳಿಯದ ನಾವು ಪ್ರಪಂಚ ಹಿಡಿದುಕೊಂಡಂತೆ  ನಟನೆಮಾಡುತ್ತೇವೆ! ಮಾನವ ಜನ್ಮ ಶ್ರೇಷ್ಠವೆನ್ನುವ ನಾವು ಮನುಷತ್ವ ಮರೆತು ಜೀವನ ಮಾಡುತ್ತಿದ್ದೇವೆ?      ✍️ ಮಾಧವ ಅಂಜಾರು 🌷   

ಮಲ್ಲಿಗೆ ಕವನ -63)

ಆ ಹಂಸ ನಡುಗೆ ಪ್ರೀತಿಯ ಮುಗುಳ್ನಗೆ ನೀ ಹಾಕುವ ಹೆಜ್ಜೆಗೆ ಹೃದಯ ಹಾಡಿತು ಮೆಲ್ಲಗೆ ಕಣ್ಣ ನೋಟದ ಬಗೆ ಬಿಚ್ಚುಮನಸಿನ ನಾಚಿಕೆ ಸದ್ದಿಲ್ಲದೇ ಬಂದುಸೇರಿದೆ ಬಯಕೆಗಳು ಬಗೆ ಬಗೆ ಚಂದಿರನ ಮೊಗ ನಿನಗೆ ಸೂರ್ಯನ ಹೊಳಪು ಹೇಗೆ ಬಂದು ಬಿಡೆಯ ಮಲ್ಲಿಗೆ ಚೆಲುವೆ ನೀ ಎನ್ನ ಸಂಪಿಗೆ       ✍️ಮಾಧವ ಅಂಜಾರು 🌷

ವರ್ತನೆ (ಕವನ -64)

ವರ್ತನೆ ಸರಿಯಿರದಿದ್ದರೆ ಯಾವ ಸ್ಥಾನವಿದ್ದರೇನು? ನರ್ತನ ಅರಿಯದಿದ್ದರೆ ತಾಳದ ಅಗತ್ಯವೇನು? ಜವಾಬ್ದಾರಿ ತಿಳಿಯದಿದ್ದರೆ ಬದುಕಿಗೆ ಅರ್ಥವೇನು ? ಅಹಂಕಾರ ತುಂಬಿದ್ದರೆ ಕನಸಿಗೆ ಅರ್ಥವೇನು? ಮಾತು ಅರಿಯದಿದ್ದರೆ ವಿದ್ಯೆಯ ಬೆಲೆಯೇನು? ಸರಿತಪ್ಪು ತಿಳಿಯದಿದ್ದರೆ ಮಾನವಜನ್ಮ ಬೇಕೇನು?     ✍️ಮಾಧವ ಅಂಜಾರು 🌷

ಚಿಂತೆ ಚಿಂತೆ (ಕವನ -65)

ಮದುವೆಯಾದವರು ಯಾಕಪ್ಪ ಮದುವೆಯಾದೆ ಅಂತ ಗುಣುಗಬೇಡಿ ಮದುವೆಯಾಗದವರು ಮದುವೆಯಾಗಲಿಲ್ಲ ಎಂದು ಚಿಂತಿಸಬೇಡಿ! ಮಕ್ಕಳಾಗದವರು ಮಕ್ಕಲಿಲ್ಲ ಎಂಬ ಚಿಂತೆಯಲಿ ಮುಳುಗಬೇಡಿ ಮಕ್ಕಳಿದ್ದವರು ಹೆಣ್ಣು ಗಂಡೆಂದು ಆಯ್ಕೆಗೆ ತೊಡಗಬೇಡಿ ಕೈಹಿಡಿದವರು ಬಿಟ್ಟುಬಿಟ್ಟರೆಂದು ದಿನಾ ಮರುಗಬೇಡಿ! ನಿಮ್ಮ ಒಳ್ಳೆತನವ ಮತ್ತವರಿಗೆ ಮಾರಿಬಿಡಬೇಡಿ ಸತ್ಯವಂತನಾಗಿ ಬದುಕಲು ಹಿಂಜರಿಯಬೇಡಿ ನಮ್ಮನ್ನು ಕಾಯುವವನೊಬ್ಬ ಇದ್ದಾನೆ ಮರೆಯಬೇಡಿ!           ✍️ಮಾಧವ ಅಂಜಾರು 🙏

ಗೋಡೆ (ಕವನ -66)

ಬಿಳಿಯಾದ ಕೂದಲಿಗೆ ಬಣ್ಣ ಹಚ್ಚೋರು ನಾವು ಬಿಳಿಯಾಗಿರೋ ಮನಸಿಗೆ ಮಸಿಬಳಿಯೋರು ನಾವು ಕೊಳೆಯಾದ ಗೋಡೆಗೆ  ಸುಣ್ಣ ಬಳಿಯೋರು ನಾವು ಹಳೆಯದಾದ ಕಟ್ಟಡಕೆ  ಬಣ್ಣ ಹಾಕೋರು ನಾವು ನೋವಾಗಿರೋ ಮನಸಿಗೆ ಬರೆ ಎಳೆಯೋರು ನಾವು ದಣಿದಿರೋ ಜೀವಕೆ ತುಳಿಯೋರು ನಾವು ನಿಜವಾದ ಮಾನವೀಯತೆ ಮರೆತವರು ನಾವು ಮನುಜನ ಸ್ಥಾನಕೆ ಕಲ್ಮಶವೇ ನಾವು?       ✍️ಮಾಧವ ಅಂಜಾರು 🌷

ಮುಗಿಯದಷ್ಟು (ಕವನ -67)

  ಮನುಷ್ಯನ ಆಯಸ್ಸು ಕಡಿಮೆಯಾಗುತಿದ್ದಂತೆ ಆಸೆಗಳು ಸಾವಿರಾರು ವರುಷ ಬದುಕುವಂತೆ ಮುಗಿಯದಷ್ಟು! ಮನುಷ್ಯನ ಪ್ರೀತಿ ಕಡಿಮೆಯಾಗುತಿದ್ದಂತೆ ಪಾಪಗಳು ಸಾವಿರಾರು ವರುಷ ಕಳೆದರೂ ಮುಗಿಯದಷ್ಟು!    ✍️ಮಾಧವ ಅಂಜಾರು 🌷

ಪ್ರೋತ್ಸಾಹ (ಕವನ -68)

ಮೊತ್ತೊಬ್ಬರ ಬಗ್ಗೆ ಹೇಳುವುದಾದರೆ ಒಳ್ಳೆಯ ಗುಣಮಾತ್ರ ಹೇಳಿ ಮತ್ತೊಬ್ಬರ ಬಗ್ಗೆ ತೆಗಳುವುದಾದರೆ ನಿಮ್ಮ ಮನಸೊಳಗೆ ವಿಮರ್ಶಿಸಿಕೊಳ್ಳಿ! ನಿಮಗೊಬ್ಬರು ಕೆಟ್ಟದನ್ನು ಮಾಡಿದ್ದರೆ ಅವರಷ್ಟಕ್ಕೆ ಬಿಟ್ಟುಬಿಡಿ ಒಳಿತನ್ನು ಮಾಡಿದ್ದರೆ ಅವರೊಂದಿಗೆ ಇದ್ದುಬಿಡಿ ತೆಗಳುವವನಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುವವನ ಮರೆಯಲೇಬೇಡಿ!       ✍️ಮಾಧವ ಅಂಜಾರು 🌷