ಅವಿವೇಕಿಗಳು ರಾಜಕೀಯಕ್ಕೆ ಸೇರಿ ಅಧಿಕಾರ ಪಡೆದರೆ ಊರು ತುಂಬಾ ಅವಿವೇಕಿಗಳನ್ನು ಪೋಷಿಸುತ್ತಾರೆ ...! ವಿವೇಕಿಗಳು ರಾಜಕೀಯದಲ್ಲಿ ಅಧಿಕಾರ ಪಡೆದರೆ ಪ್ರಪಂಚದಲ್ಲೆಲ್ಲಾ ದೇಶಭಕ್ತರನ್ನು ಹೆಚ್ಚಿಸುತ್ತಾರೆ ..! - ಮಾಧವ ಅಂಜಾರು
ಹುಚ್ಚಾಗಬೇಡಿ ಪಕ್ಷಗಳ ದೊಂಬರಾಟಕೆ ಸಹನೆ ಕಳೆದುಕೊಳ್ಳಬೇಡಿ ಪಕ್ಷಗಳ ಅವಿವೇಕತೆಗೆ ..! ಬೇಕು ನಮಗೆ ದೇಶ ಒಳ್ಳೆಯ ನಾಯಕ ನಮಗೆ ಮುಖ್ಯ ಪಕ್ಷದ ಬಗ್ಗೆ ಒಲವು ಬಿಡಿ ಮೊದಲು ದೇಶವೆಂಬ ಛಲ ಹಿಡಿ ರಾಜನೊಬ್ಬ ಚೆನ್ನಾಗಿದ್ದರೆ ..! ಪ್ರಜೆಗಳೆಲ್ಲಾ ಚಿಂತೆ ಬಿಡಿ ನಿಮ್ಮ ಒಂದು ಮತದ ಬೆಲೆ ಚಿತ್ರಣವೇ ಬದಲಿಸಬಹುದು ನೋಡಿ ..! ಈ ಸಲದ ಮತದಾನಕ್ಕೆ ಯೋಚನೆ ಮಾಡೊದನು ಬಿಡಿ ದೇಶಾಭಿಮಾನಿಗಳೆಲ್ಲಾ ಒಂದಾಗಿ ದೇಶದ್ರೋಹಿಗಳನ್ನು ಕಿತ್ತು ಹಾಕಿ ..! -ಮಾಧವ ಅಂಜಾರು
ಏನೂ ಇಲ್ಲದವನ ಕೈಲಿ ಬಂದು ಕೂಡಿತು ಕೋಟಿ ಕೋಟಿ ಹಣ ಅದಕ್ಕೆ ಕಾರಣ ದರಿದ್ರ ರಾಜಕಾರಣ...! ಏನೂ ಇಲ್ಲದವನ ಕೈಗೆ ಸಿಕ್ಕಿಯೇ ಬಿಟ್ಟಿತು ಮೂರು ಕೋಟಿ ಹಣ ಅದಕ್ಕೆ ಕಾರಣ ಒಲಿದ ಲಾಟರಿಯ ಹಣ ..! - Madhavanjar ...👍
ಯಾರಾದರೂ ನಿಮ್ಮಲ್ಲಿ ದೇಶದ ಪ್ರಧಾನಿ ಯಾರಾಗಬೇಕೆಂದು ಕೇಳಿದರೆ ? ಯಾರಾದರೂ ಆಗಲಿ ನಮಗೇನು ಹೇಳಬೇಡಿ ....! ಒಂದು ವೇಳೆ ಅಪ್ಪಿ ತಪ್ಪಿ ಉಪಯೋಗಕ್ಕೆ ಬಾರದವರು ನಮ್ಮ ದೇಶದ ಪ್ರಧಾನಿಯಾದರೆ ..! ನಮ್ಮ ದೇಶವಂತೂ ಉದ್ಧಾರವೇ ಆಗೋದಿಲ್ಲ ಅಂತ ಹೇಳಲೇಬೇಡಿ ..! - Madhavanjar ...👍