ಹಾಡುವೆ ನಿನಗಾಗಿ

ಹಾಡುವೆ ನಿನಗಾಗಿ
ಓಡಾಡುವೆ ನಿನಗಾಗಿ
ಪ್ರೀತಿಯ ಗೋಪುರದೊಳಗೆ
ಕಾಯುವೆ ನಿನಗಾಗಿ,

ಬರೆಯುವೆ ನಿನಗಾಗಿ
ಕುಣಿದಾಡುವೆ ನಿನಗಾಗಿ
ಹಗಲಿರುಳು ಜೊತೆಗಿರಲು
ಹಂಬಲಿಸುವೆ ನಿನಗಾಗಿ

ನಗುವೇ ನಿನಗಾಗಿ
ಜೀವನ ನಿನಗಾಗಿ
ವಿಶ್ರಾಂತಿಯಿಲ್ಲದೆ ಢವಡವಿಸುವ
ಈ ಹೃದಯವೇ ನಿನಗಾಗಿ
        ✍️ಮಾಧವ. ಕೆ. ಅಂಜಾರು 




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ