Posts

(ಲೇಖನ -52)ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ

Image
ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ.ಹೌದು ಈ ಮಾತು ಕೇಳಿದಾಗ ಹೃದಯ ದಂಗಾಗುತ್ತದೆ, ಮನಸು ಕುಗ್ಗಿಬಿಡುತ್ತದೆ, ಮಕ್ಕಳೇ ಬೇಡವೆನಿಸುತ್ತದೆ. ಈ ಲೋಕದಲ್ಲಿ ಇಂತಹ ಘಟನೆಗಳನ್ನು ಅದೆಷ್ಟು  ತಂದೆಯಂದಿರು ಅನುಭವಿಸುತ್ತಿದ್ದಾರೆ ಅಲ್ಲವೇ!           ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ, ತಾನು ತಿನ್ನದೆ ತನ್ನ ಮಕ್ಕಳಿಗಾಗಿ, ಸಂಸಾರಕ್ಕಾಗಿ ಜೀವನ ಮಾಡುವ ಜೀವ ಎಂದರೆ ಅಪ್ಪ, ಅಪ್ಪನೆಂದರೆ ಶಕ್ತಿ, ಅಪ್ಪನೆಂದರೆ ಹುಮ್ಮಸ್ಸು, ಅಪ್ಪನೆಂದರೆ ಧೈರ್ಯ, ಅಪ್ಪನೆಂದರೆ ಮೌಲ್ಯ, ಅಪ್ಪನೆಂದರೆ ಪ್ರಪಂಚ, ಅಪ್ಪನೆಂದರೆ ಸರ್ವಸ್ವ. ಹುಟ್ಟಿರುವ ಮಕ್ಕಳಿಗೆ ಅಪ್ಪನಿಲ್ಲದೇ ಇದ್ದರೆ ಅವರ ಜೀವನ ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಕಷ್ಟಪಟ್ಟು ಬದುಕಿರುತ್ತಾರೆ. ಅಪ್ಪನಿದ್ದರೆ ಏನೆಲ್ಲಾ ಮಾಡುತಿದ್ದೆ ಎಂಬ ಕನಸನ್ನು ಕಾಣುತ್ತ ತನ್ನ ಕಣ್ಣಲ್ಲಿ ನೀರು ಸುರಿಸುವ ಮಕ್ಕಳನ್ನು ನಾವುಗಳು ನೋಡಿರಬಹುದು. ಹಾಗೆಯೇ ಮಕ್ಕಳು ದೊಡ್ಡವರಾದ ಮೇಲೆ ಅಪ್ಪನ ಮೇಲೆ ಎಗರಾಡಿ ಅಪ್ಪನ ಕಣ್ಣಲ್ಲಿ ನೀರು ಬರುವಂತೆ ಮಾಡುವ ಮಕ್ಕಳು.         ಅಪ್ಪಾಜಿ ನನಗೆ, ಸೈಕಲ್ ಬೇಕು, ಅಪ್ಪಾಜಿ ನನಗೆ ಕಾರು ಬೇಕು, ನನಗೆ ಆಟವಾಡುವ ವಸ್ತುಗಳು ಬೇಕು, ನನಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗು, ಹೆಗಲ ಮೇಲೆ ಕುಳ್ಳಿರಿಸು, ಅಪ್ಪ ನ...

(ಲೇಖನ -51)ನಿನ್ನ ಪ್ರೀತಿಸುವೆ ಸುಗುಣ, ಎನ್ನ ಬಾಳಿನೊಳು ನಿನ್ನ ಆಗಮನ ಎಂದೆಂದಿಗೂ ಕಾಪಾಡುತ್ತಿದೆ ಸುಗುಣ

Image
ನಿನ್ನ ಪ್ರೀತಿಸುವೆ ಸುಗುಣ, ಎನ್ನ ಬಾಳಿನೊಳು ನಿನ್ನ ಆಗಮನ ಎಂದೆಂದಿಗೂ ಕಾಪಾಡುತ್ತಿದೆ ಸುಗುಣ. ಯಾರೇನು ಹೇಳಿದರೂ ನನ್ನಲಿ ಸೇರಿಕೊಂಡಿರುವ ಸುಗುಣ ಕೆಲವೊಮ್ಮೆ ನನ್ನನ್ನು ಕಾಪಾಡಿಕೊಳ್ಳಲು ಶ್ರಮಿಸುತಿದ್ದರೂ ಮತ್ತೆ ಮತ್ತೆ ಬಂದು ಸಂತಸದ ದಾರಿ ತೋರಿಸಲು ಶ್ರಮಿಸುತ್ತಿರುವೆ ನೀ ಸುಗುಣ. ದುರ್ಗುಣ ಬಂದೆರಗಿದರೂ ಸುಗುಣ ಮೇಲೆದ್ದು ನಿಲ್ಲುತ್ತ , ಪ್ರಪಂಚದ ಬಣ್ಣ ಬಣ್ಣದ ಜನರೊಂದಿಗೆ ಸೇರಿ ಬದುಕಲು ನೀನೇ ಕಾರಣ ಸುಗುಣ. ಆಸೆಗಳ ಬೆನ್ನಟ್ಟುವ ಪರಿಪಾಠ, ದುರಾಸೆಗೆ ಒಳಗಾಗಿ ಅನ್ಯರಿಗೆ ತೊಂದರೆಕೊಡದೆ ಬದುಕುವ ರೀತಿ ನೀತಿಯನ್ನು ನೀನು ಕಲಿಸಿಕೊಟ್ಟಿರುವೆ ನನ್ನ ಅಂತರಾಳದ ಸುಗುಣ.        ನಿನ್ನ ಗೆಳೆಯ, ಗೆಳತಿಯ ಕಣ್ಣಂಚಲಿ ನೀರ ಹನಿ ನೋಡಿ ಮರುಗಲು ನೀನೇ ಕಾರಣ, ಅವರಿವರ ಸಮಸ್ಯೆಗಳ ಬೆನ್ನಹತ್ತಿ ಕೈ ಹಿಡಿದು ಸಹಕರಿಸಲು ಪ್ರೇರಣೆ ನೀನೇ ಸುಗುಣ. ಎನ್ನ ಮನಸು, ಹೃದಯ ನೋವಲಿ ಮುಳುಗಿಹೋಗಿದ್ದರೂ ಅದನೆಲ್ಲವ ಮೀರಿ ಜೊತೆಯಾಗಿ ಬಂದು ನಿಲ್ಲುವ ನನ್ನೊಳಗಿನ ಸುಗುಣ, ಕೋಪಗೊಂಡಾಗ ಆಡಿದ ಮಾತನ್ನೆಲ್ಲ ಮರೆತು ಮತ್ತೆ ಮಾತನಾಡಲು ಸಹಕರಿಸಿ, ಧೈರ್ಯವಾಗಿರಲು ಹೇಳುವ ನನ್ನ ಅಂತರಾಳದ ಸುಗುಣ. ಮೋಸ ಹೋದಾಗ, ಹೀಯಾಳಿಕೆಗೆ ಗುರಿಯಾದಾಗ, ಗೌರವಕ್ಕೆ ಧಕ್ಕೆಯಾದಾಗ ಮತ್ತೆ ಮತ್ತೆ ನನ್ನನ್ನು ಸರಿದಾರಿಗೆ ತರುವ ನೀನು, ನಿನ್ನನ್ನು ಹೇಗೆ ಕೊಂಡಾಡಲಿ ಹೇಳು.?       ದುರ್ಗುಣ  ಹೊಂದಿರುವ ಜನರೊಂದಿಗೆ ನಿನ್ನ ಬಾಳು ಕಷ್ಟವಾದರೂ, ನ...

ಅಲ್ಲಲ್ಲಿ ಹುಡುಕುತಿರುವೆ(ಕವನ -150)

ಅಲ್ಲಲ್ಲಿ ಹುಡುಕುತಿರುವೆ ಕಣ್ಣಿಗೆ ಕಾಣದ ದೇವರ ಎಲ್ಲೆಲ್ಲೂ ನಮಿಸುತ್ತಿರುವೆ ಕಾಣೋಕೆ ಸಿಗದ ದೇವರ, ಶಿಲೆಯಾಗಿ ನೆಲೆಯಾಗಿ ಅಳಿಯದೇ ಸ್ಥಿರವಾಗಿ ಕಾಣಸಿಗುವ ರೂಪದಲಿ ಬೇಡುತಿರುವೆ ವರ ಗತಿನೀನೆ ಈಶ್ವರ ಜೊತೆಯಾಗಿರೆಂದಿಗೂ ಎನ್ನ ಭಕ್ತಿ ನಿನಗೆ ಸ್ಥಿರ, ನಿನ್ನ ನಂಬದವರ ಬಳಿ ನನ್ನ ಬಿನ್ನಹವೇಕೆ? ನೀ ಬರೀ ಕಲ್ಲೆಂದು ದೂಷಿಸುವವರ ಬಳಿ ಎನ್ನ ಒಯ್ಯುವಿಯೇಕೆ ಹಣ್ಣಾಗಿ ಹೋಗೋ ಜೀವಕೆ ಹೊನ್ನ ಸಿರಿ ಏತಕೆ ಎನ್ನ ನಿನ್ನೊಳಾಗಿಸು ಶಿವನೇ             ✍️ಮಾಧವ ನಾಯ್ಕ್ ಅಂಜಾರು 🌹

ಬೆಂಬಲ(ಕವನ -146)

ಬೆಂಬಲ ****** ಕೊಡುವರು ಬೆಂಬಲ ಮಾಡುವ ಸತ್ಕಾರ್ಯಕೆ ಆದ್ರೆ ಲಬಿಸೊಲ್ಲ ಸಂಬಳ, ಅತಿಬುದ್ದಿವಂತರು ಕೊಡಬಹುದು ಬೆಂಬಲ ಮಾಡೋ ದುಷ್ಟಕೆಲ್ಸಕೆ ಗಳಿಸುತ್ತಿರಬಹುದು ಗಿಂಬಳ ,  ನಿಸ್ವಾರ್ಥ ಸೇವೆಯ ಬದುಕು ಆಗೋದಿಲ್ಲ ಬಿರುಕು ಸ್ವಾರ್ಥಸೇವೆಯ ಜನರ ಜೀವನವೇ ಒಡಕು ಮಾಡುವದೇ ಕೆಡುಕು, ದೇವ ಮಾನವರಿದ್ದರೂ ಹೊಡೆಯುವರು ದಿನಕೂ,         ✍️ಮಾಧವ ಅಂಜಾರು 🌹

ಬಿಂದು(ಕವನ -144)

ಹಣೆಯಲೊಂದು ಸಿಂಧೂರ ಬಿಂದು ಹುಣ್ಣಿಮೆಯ ಚಂದಿರ ನಿನ ಮೊಗವಿಂದು ಕಣ್ಣಲ್ಲಿ ಕಾಣೋ ನೂರಾರು ಬಯಕೆ ಮುಗ್ದತೆಯ ಮುನ್ನುಡಿ ಇದೆ ನಿನ್ನ ಜೊತೆಗೆ ಬಾ ಎನ್ನ ಸನಿಹಕೆ ತೋರು ನೀ ನಗೆ ಸಿಹಿ ಮಾತಾಡುತಲೇ ಮುತ್ತು ಕೊಡು ಬಗೆ, ಮೂಡಿದೆ ಮನದಲಿ ಸಾವಿರಾರು ಆಸೆ ದೂರವೇಕೆ ನಿಂತಿರುವೆ ನಿನಗಾಗಿ ಕಾದಿರುವೆ ಹೃದಯದ ಮಾತನು ಕೇಳೋ ಬಯಕೆಯೆನಗೆ ಮನಸಿನ ಪ್ರೀತಿಯನು ಹಂಚಿಬಿಡುವೆ ನಿನಗೆ ಗೆಳತಿಯೇ ಬಾ ಬೇಗ ನಿನ ದಾರಿಗೆ ಮಲ್ಲಿಗೆ ✍️ಮಾಧವ ನಾಯ್ಕ್ ಅಂಜಾರು 🌹

ಸಜ್ಜನರಿರುವರು(ಕವನ -145)

ಸಜ್ಜನರಿರುವರು ಅಲ್ಲಲ್ಲಿ ನಿಸ್ವಾರ್ಥ ಸೇವೆಯ ಮಾಡುತಿರುವರು ನಗುಮೊಗದಲಿ , ಜಾತಿ ಮರೆತು ಧರ್ಮ ಅರಿತು ಎಲ್ಲರೊಳು ಬೆರೆತು, ಸಜ್ಜನಿಕೆಯ ಜನ ಗೆಲುವ ಕಾಣುವರು ಅವರ ಜೀವನದಲಿ ಇನ್ನಷ್ಟು ಹುಟ್ಟಿಬರಲಿ ಈ ಜಗದಲಿ ನಾ ಅಜ್ಜನಾಗುವ ಮೊದಲು ತವಕ ಅವರೊಂದಿಗಿರಲು ✍️ಮಾಧವ ನಾಯ್ಕ್ ಅಂಜಾರು 🌹

ದಣಿವು(ಕವನ -143)

ದಣಿವು ತಿಳಿಯದು ಮನವು ಕೇಳದು ಹೃದಯ ಬಡಿತವೇ ಜ್ಞಾಪಿಸುತಿದೆ ಒಂದು ಕವನವಿಲ್ಲದೆ ಈ ಜೀವ ವಿಶ್ರಮಿಸದು, ಹಸಿವು ತಿಳಿಯದು ಏದುಸಿರು ಬಿಡುತಲೇ ಹೊಸ ಜೀವನ ಕವನ ಬರೆಯುವಾಸೆ ಎಂದೂ ನಿಲ್ಲದು ಎನ್ನ ಪ್ರಪಂಚವಿದು ✍️ಮಾಧವ ಅಂಜಾರು 🌹