Posts

ಆಪತ್ತಿಗೂ ಇರಲಾರ (ಕವನ 6)

ತನ್ನ ಬೆನ್ನು ತಟ್ಟಿಕೊಳ್ಳುವವ ಇನ್ನೊಬ್ಬರ ಬೆನ್ನು ತಟ್ಟಲಾರ ಅನ್ಯರಿಗೆ ನೋವುಣಿಸುವವ ಹಸಿವೆಂದರೆ ನೀಗಿಸಲಾರ, ಹುಸಿ ಮಾತನಾಡುವವ ಸಹಾಯವಂತೂ ಮಾಡಲಾರ ದಿನಾ ನಶೆಯಲ್ಲಿರುವವನು ನಾಳೆಯ ದಿನಕೆ ಯೋಚಿಸಲಾರ, ತನ್ನ ಸಂಪತ್ತು ತೋರಿಸುವವ ಆಪತ್ತಿಗೂ ಇರಲಾರ ಬಾಹ್ಯ ಸೌಂದರ್ಯ ಹೊಗಳುವವ ಅಂತರಾಳ ಕರುಣೆ ತಿಳಿಯಲಾರ ಅಧಿಕಾರದಾಸೆ ಹೊಂದಿರುವವ ಸಜ್ಜನಿಕೆಯ ಪಾಠ ಕಲಿಯಲಾರ ವಿದ್ಯಾವಂತನೆಂದು ಹೇಳಿಕೊಳ್ಳುವವ ವಿದ್ಯೆಯ ಅರ್ಥ ಅರಿಯಲಾರ,                   ✍️ಮಾಧವ ಅಂಜಾರು 🙏🌹

ಕ್ಷಣ ಸಾಕು ನಿನಗೆ (ಕವನ -7)

ಪೆದ್ದನಿಗೆ, ನಿ ಪೆದ್ದ ಹೇಳಬೇಡ ಹುಚ್ಚನಿಗೆ ನೀ ಹುಚ್ಚನೆಂದು ಹೇಳಲು  ಹೋಗಬೇಡ ಕಳ್ಳನಿಗೆ ನೀ ಕಳ್ಳನೆಂದು ಸುಳ್ಳನಿಗೆ ನೀ ಸುಳ್ಳುಗಾರನೆಂದು ಹೇಳಿ ಕೆಡಬೇಡ! ಇರುವುದೆಲ್ಲವ ಹೇಳಿ ಅವರ ಸಾಲಿಗೆ ನೀ ಸೇರಬೇಡ, ಮೂಕನ  ಹೀಯಾಳಿಸಬೇಡ ರೋಗಿಗೆ ಶಪಿಸಲೂ ಬೇಡ ಯೋಗಿಯ ಜೊತೆ ಬಿಡಬೇಡ ರಾಗಿ ತಿಂದು ಬದುಕುವವನ ನಿಂದಿಸಿ ನೀ ಕೆಡಬೇಡ ಎಲ್ಲಾ ಉಳ್ಳವನೆಂದು ಬೀಗಬೇಡ ಒಂದು ಕ್ಷಣ ಸಾಕು ನಿನಗೆ ಉಸಿರು ಉಳಿಸಲಾಗದು ಕೊನೆಗೆ!           -✍️ಮಾಧವ ಅಂಜಾರು 🌷

ಚೆಂದುಳ್ಳಿ ನೀನು (ಕವನ -8)

ಚೆಂದದ ಚೆಂದುಳ್ಳಿ ನೀನು ಅಂದದ ಮಿಂಚುಳ್ಳಿ ನೀನು ಬಿಂಕದ ಹೆಜ್ಜೆಯ  ಹಾಕುತ  ಎನ್ನ ಹೃದಯ ಸೇರಿದೆ ನೀನು ಹೂಬಳ್ಳಿ  ನಿನಗಾಗಿ ನಾನು ಎನ್ನ ಸುತ್ತಿ  ಮಲಗು ನೀನು  ಸುಗಂಧ ಪರಿಮಳವೇ ನೀನು ಮಕರಂದ ಹೀರೋ ದುಂಬಿ ನಾನು ಹಾಯಾಗಿ ಜೊತೆಗಿರು ನೀನು ನಿನ್ನ ಕಾಯುತ್ತಾ ಕೂರುವೆ ನಾನು ಪ್ರೀತಿಯ ಜೀವ ನೀನು ನಿನಗಾಗಿ ಉಸಿರಾಡುತಲಿರುವೆನು             ✍️ಮಾಧವ ಅಂಜಾರು 🌷

(ಲೇಖನ -25)ಬಾನೆತ್ತರದಲ್ಲಿ ಕಂಡ ಸ್ಮಶಾನ

Image
 ಬಾನೆತ್ತರದಲ್ಲಿ ಕಂಡ ಸ್ಮಶಾನ ಪ್ರತಿಯೊಂದು ಜೀವಿಯೂ ಹುಟ್ಟಿದಾಗ ಸಾವೆಂಬ ಬುತ್ತಿಯನ್ನು ಕಟ್ಟಿಕೊಂಡು ಬಂದಿರುತ್ತದೆ. ಆ ಸಾವಿನ ಬುತ್ತಿಯನ್ನು ಯಮರಾಜ ಯಾವಾಗ ತೆರೆದು ಬಿಡುವನು ಎಂಬುದು ಯಾರಿಗೂ ಹೇಳಿರೋದಿಲ್ಲ.   ಸಹಜವಾಗಿ ಎಂದಿನಂತೆ ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಮುಗಿಸಿ ಕಛೇರಿಗೆ ಹೊರಟ ನಾನು ಸಮಯಕ್ಕಿಂತ ಹತ್ತು ನಿಮಿಷಗಳ ಕಾಲ ಮೊದಲೇ ತಲುಪಿದ್ದೆ. ತಾಂತ್ರಿಕ ಸಂಬಂದಿಸಿದ ಕೆಲಸಗಳು ವಿವಿಧ ಸರಕಾರಿ ಕಛೇರಿ ಮತ್ತು ಖಾಸಗಿ ಸಂಸ್ಥೆ ಗಳಿಗೆ ಹೋಗಿ ಮಾಡಿ ಬರಬೇಕಾದ ಅನಿವಾರ್ಯತೆ. ಅಂದು ಬುಧವಾರ ಕುವೈಟ್ ಎಂಬ ಮಾಯಾನಗರ ಅದರ ಹೃದಯ ಭಾಗದಲ್ಲಿ ಬಾನೆತ್ತರದ ಕಟ್ಟಡಗಳು ಅದರ ಸುತ್ತ ಸುಂದರ ಸುವ್ಯವಸ್ಥಿತ ರಸ್ತೆಗಳು, ಸಾವಿರಾರು ಜನರ ಓಡಾಟ ಪ್ರಪಂಚದಲ್ಲಿ ತಯಾರಾಗುವ ಎಲ್ಲಾ ತರಹದ ಕಾರುಗಳು ಶಬ್ದ ಮಾಲಿನ್ಯ ವಿಲ್ಲದೆ ಓಡಾಟ ಮಾಡುತ್ತಿರುತ್ತದೆ . ಅದರೊಳಗೆ ಸಾಮಾನ್ಯ ಜನರಿಂದ ಸೇರಿ ಪ್ರಭಾವಿ ಜನರು ಜೀವನಕ್ಕಾಗಿ, ಸಂತೋಷಕ್ಕಾಗಿ, ಪರಿಶ್ರಮ, ಚಿಂತೆ ದುಮ್ಮಾನಗಳೊಂದಿಗೆ ದಿನವನ್ನು ಕಳೆಯುತ್ತಿರುತ್ತಾರೆ.         ಸಮಯ ಬೆಳಗ್ಗಿನ 8 ಗಂಟೆ 50 ನಿಮಿಷ  ಎಂಬತ್ತು ಮಹಡಿಯ ಬೃಹದಾಕಾರದ ಗಗನಚುಂಬಿ ಕಟ್ಟಡ, ಕೆಲಸನಿಮಿತ್ತ 78ನೇ  ಮಹಡಿ ಗೆ ನನ್ನ ಪಯಣ, ಆ ದಿನಕ್ಕಿಂತ ಮೊದಲು ಅದೆಷ್ಟೋ ಬಾರಿ ಅಲ್ಲಿಗೆ ಹೋಗಿದ್ದೆ ಆದರೆ ಈ ಬರವಣಿಗೆ ಮೂಡಿ ಬರಲು ನಾನು ಆ ದಿನ ಕಂಡ ದೃಶ್ಯ ಕಾರಣವಾಯಿತು. ಕಟ್ಟಡದ ಹೊರ ಆವರಣ...

ಜಾಣರಲ್ಲ (ಕವನ -9)

ಮುಂದಿನ ಸಾಲಲಿ ಕುಳಿತಿರೋರೆಲ್ಲ ಜಾಣರಲ್ಲ ಹಿಂದಿನ ಸಾಲಲಿ ಕೂರುವವರೆಲ್ಲ ದಡ್ಡರೂ ಅಲ್ಲ ಬಣ್ಣ ಬಣ್ಣದ ಉಡುಗೆ ತೊಡುವವರೆಲ್ಲ  ಸಿರಿವಂತರಲ್ಲ ಕಣ್ಣಿಗೆ ಕಂಡರೂ ಕಾಣದಂತಿರುವವರು ಕುರುಡರಲ್ಲ ಬುದ್ಧಿಮಾತು ಹೇಳುವವರೆಲ್ಲ ಸತ್ಯವಂತರಲ್ಲ ಸಿಟ್ಟಲ್ಲಿ ಮಾತಾಡುವವರೆಲ್ಲ ಕೆಟ್ಟವರೂ  ಅಲ್ಲ ನಿನ್ನೊಳಗಿನ ಗುಟ್ಟು ಶಿವನೇ ಬಲ್ಲ ದೇವನ ಕಣ್ಣುತಪ್ಪಿಸೋಕೆ ಸಾಧ್ಯವಂತೂ ಇಲ್ಲ     ✍️ಮಾಧವ ಅಂಜಾರು 🌷

ಬಾಳು -ಗೋಳು (ಕವನ -10)

ಬಾಳು - ಗೋಳು *********** ಮೂರು ದಿನದ ಬಾಳು ಮಾಡೋರಿರುವರು ಗೋಳು ದಿನ, ವಾರ, ತಿಂಗಳು ಹರಿಹಾಯ್ವರು  ಹಗಲಿರುಳು, ಒಂದೊತ್ತಿನ ಊಟಕೂ ಕನ್ನ ಹಾಕೋ ಜನಕೂ ಅವರಲಿರೋ ದುಷ್ಟಚಟಕೂ ಕಷ್ಟ ನಷ್ಟವು  ಸಮಾಜಕೂ, ಅಸತ್ಯ ಕೂಡಿದ ಜನರು ಅಲ್ಲಲ್ಲಿ ತುಂಬುತಿಹರು ಸತ್ಯ ಕಾಯೋ ಹಲವರು ನಶಿಸಿ ಹೋಗುತಿಹರು, ✍️ಮಾಧವ ನಾಯ್ಕ್ ಅಂಜಾರು 🌹

ದೇವರೇ ಕಣ್ಣ ತೆರೆ (ಕವನ -12)

ಕಣ್ಣ ತೆರೆ ದೇವರೇ ************ ನೀನ್ಯಾಕೆ ಕಲ್ಲಾಗಿರುವೆ ಎನ್ನ ಅಳಲು ಕೇಳಬಾರದೆಂದೇ? ನೀನ್ಯಾಕೆ ಮೌನವಾಗಿರುವೆ ಎನ್ನ ಪ್ರಾರ್ಥನೆಗೆ ಅರ್ಥವಿಲ್ಲವೆಂದೇ? ನೀನ್ಯಾಕೆ ಮರೆಯಾಗಿರುವೆ ನಿನ್ನ ಕಂಡರೆ ಬಿಡಲಾರೆನೆಂದೇ? ನೊಂದು ಬಸವಳಿದೆ ಅಂದು,  ಇಂದೂ ಭುವಿಯಲಿ ನಡೆಯೋ ಅನಾಚರವ ಕಂಡು ನಿಲ್ಲುತ್ತಿಲ್ಲ ಅಲ್ಪವೂ ಭಯವಿಲ್ಲ ಸ್ವಲ್ಪವೂ ನಿನ್ನ ನಂಬಿದೆನಗೆ ದಿನವೆಲ್ಲಾ  ಯಾಕೀ ನೋವು? ನೀನಿದ್ದರೆ ಕಣ್ಣತೆರೆ ನೀನಿದ್ದರೆ ಮೌನತೊರೆ ನೀನಿದ್ದರೆ ದೇವರೇ ಎನಗೊಳಿತು ಬರೆ ಆಲಿಸೆನ್ನ ಪ್ರೀತಿಯ ಕರೆ ಇಲ್ಲವೆಂದಾದರೆನ್ನ ನಿನ್ನ ಬಳಿ ಬೇಗ ಕರೆ 😢 ✍️ಮಾಧವ ನಾಯ್ಕ್ ಅಂಜಾರು 🌹