ಆಪತ್ತಿಗೂ ಇರಲಾರ (ಕವನ 6)
ತನ್ನ ಬೆನ್ನು ತಟ್ಟಿಕೊಳ್ಳುವವ
ಇನ್ನೊಬ್ಬರ ಬೆನ್ನು ತಟ್ಟಲಾರ
ಅನ್ಯರಿಗೆ ನೋವುಣಿಸುವವ
ಹಸಿವೆಂದರೆ ನೀಗಿಸಲಾರ,
ಹುಸಿ ಮಾತನಾಡುವವ
ಸಹಾಯವಂತೂ ಮಾಡಲಾರ
ದಿನಾ ನಶೆಯಲ್ಲಿರುವವನು
ನಾಳೆಯ ದಿನಕೆ ಯೋಚಿಸಲಾರ,
ತನ್ನ ಸಂಪತ್ತು ತೋರಿಸುವವ
ಆಪತ್ತಿಗೂ ಇರಲಾರ
ಬಾಹ್ಯ ಸೌಂದರ್ಯ ಹೊಗಳುವವ
ಅಂತರಾಳ ಕರುಣೆ ತಿಳಿಯಲಾರ
ಅಧಿಕಾರದಾಸೆ ಹೊಂದಿರುವವ
ಸಜ್ಜನಿಕೆಯ ಪಾಠ ಕಲಿಯಲಾರ
ವಿದ್ಯಾವಂತನೆಂದು ಹೇಳಿಕೊಳ್ಳುವವ
ವಿದ್ಯೆಯ ಅರ್ಥ ಅರಿಯಲಾರ,
✍️ಮಾಧವ ಅಂಜಾರು 🙏🌹
Comments
Post a Comment