ಕ್ಷಣ ಸಾಕು ನಿನಗೆ (ಕವನ -7)
ಪೆದ್ದನಿಗೆ, ನಿ ಪೆದ್ದ ಹೇಳಬೇಡ
ಹುಚ್ಚನಿಗೆ ನೀ ಹುಚ್ಚನೆಂದು
ಹೇಳಲು ಹೋಗಬೇಡ
ಕಳ್ಳನಿಗೆ ನೀ ಕಳ್ಳನೆಂದು
ಸುಳ್ಳನಿಗೆ ನೀ ಸುಳ್ಳುಗಾರನೆಂದು
ಹೇಳಿ ಕೆಡಬೇಡ!
ಇರುವುದೆಲ್ಲವ ಹೇಳಿ
ಅವರ ಸಾಲಿಗೆ ನೀ ಸೇರಬೇಡ,
ಮೂಕನ ಹೀಯಾಳಿಸಬೇಡ
ರೋಗಿಗೆ ಶಪಿಸಲೂ ಬೇಡ
ಯೋಗಿಯ ಜೊತೆ ಬಿಡಬೇಡ
ರಾಗಿ ತಿಂದು ಬದುಕುವವನ
ನಿಂದಿಸಿ ನೀ ಕೆಡಬೇಡ
ಎಲ್ಲಾ ಉಳ್ಳವನೆಂದು ಬೀಗಬೇಡ
ಒಂದು ಕ್ಷಣ ಸಾಕು ನಿನಗೆ
ಉಸಿರು ಉಳಿಸಲಾಗದು ಕೊನೆಗೆ!
-✍️ಮಾಧವ ಅಂಜಾರು 🌷
Comments
Post a Comment