ಚೆಂದುಳ್ಳಿ ನೀನು (ಕವನ -8)
ಚೆಂದದ ಚೆಂದುಳ್ಳಿ ನೀನು
ಅಂದದ ಮಿಂಚುಳ್ಳಿ ನೀನು
ಬಿಂಕದ ಹೆಜ್ಜೆಯ ಹಾಕುತ
ಎನ್ನ ಹೃದಯ ಸೇರಿದೆ ನೀನು
ಹೂಬಳ್ಳಿ ನಿನಗಾಗಿ ನಾನು
ಎನ್ನ ಸುತ್ತಿ ಮಲಗು ನೀನು
ಸುಗಂಧ ಪರಿಮಳವೇ ನೀನು
ಮಕರಂದ ಹೀರೋ ದುಂಬಿ ನಾನು
ಹಾಯಾಗಿ ಜೊತೆಗಿರು ನೀನು
ನಿನ್ನ ಕಾಯುತ್ತಾ ಕೂರುವೆ ನಾನು
ಪ್ರೀತಿಯ ಜೀವ ನೀನು
ನಿನಗಾಗಿ ಉಸಿರಾಡುತಲಿರುವೆನು
✍️ಮಾಧವ ಅಂಜಾರು 🌷
Comments
Post a Comment