Posts

Showing posts from November, 2013

ವ್ಯರ್ಥ ಮನುಜರಿಹರು ಭೂಮಿಯಲಿ

ಸತ್ಯ ಧರ್ಮದ ಶಕ್ತಿಯನರಿಯದೆ , ಕತ್ತಿ ಎತ್ತಿ ಕತ್ತನು ಕೊಯ್ವರು ಹುಂಬರು    ನಿತ್ಯ ಬದುಕಿನ ಹೋರಾಟದಲಿ , ನ್ಯಾಯವನ್ನೇ ಮರೆವರು ಜನರು   ಇನ್ಯಾರೋ ಮಾಡಿದ ಆಸ್ತಿಯನು , ತನ್ನದೆಂದು ಬೊಗಳುವರು ಧೈರ್ಯದಲಿ ಕಂಡ ಕಂಡವರಿಗೆಲ್ಲಾ ಡಂಗುರವ ಸಾರುವರು , ಬೆಂಡಾಗಿ ಹೋದರು ಜೀವದಲಿ.....!      ರಕ್ತ ಸಂಬಂಧದ ಅರ್ಥವನರಿಯದೆ ವ್ಯರ್ಥ ಮನುಜರಿಹರು ಭೂಮಿಯಲಿ ಅರ್ಥವಾದರೂ  ದುಷ್ಕೃತ್ಯವ ಮಾಡುವರು ಒಂದಿಷ್ಟೂ ನೋವನರಿಯದೆ ಸಂಬಂಧದಲಿ ಒಟ್ಟಾಗಿ ಬರುವರು ಕೆಟ್ಟದಾಗಿ ಹೇಳುವರು , ನಾ ನೇರ ನಿನ್ನ ಚಟ್ಟ ಕಟ್ಟುವೆ ಎಂದು     ಸಿಟ್ಟಾಗಿ ದೇವನು ಕಷ್ಟ ಕೊಟ್ಟರೂ , ತನ್ನಿಷ್ಟದಂತೆ ನಡೆವರು ಲೋಕದಲಿ ಕಟ್ಟು ಕಟ್ಟಿನ ನೋಟನು  ಹೊಯ್ವರು ಕೆಟ್ಟು ಹೋದರು ಮಾನವು ಕೆಟ್ಟ ಕೆಲಸವ ಮಾಡಿ ದುಷ್ಟರಾಗಿ ಬಂದು ಕಷ್ಟ ಕೊಡುವರು ಜನರು    ಸದಾ ಭಕ್ತಿಯನು ಮಾಡುತಿಹೆ , ಶಕ್ತಿಯನು ನೀಡು ಎನಗೆ ನಿರಂತರ ಯುಕ್ತಿಯಲಿ  ನನ್ನ ನಿಯುಕ್ತಿ ಮಾಡು ಕೆಟ್ಟ  ಜನರ  ಜುಟ್ಟನು ಎತ್ತಿ ಹಿಡಿಯಲು                                           - ಅಂಜಾರು ಮಾಧವ ನಾಯ್ಕ್

...ಈ ಜಗದಲಿ

ತತ್ತರಿಸಿ ಹೋಗಿರುವೆನು ಈ ಜಗದ ನಾಟಕವ ಕಂಡು ಕತ್ತರಿಸಿ ಬಿಡುತಿಹುದು ಚಿತ್ತವ ಸುತ್ತಮುತ್ತಲ ಪಾಪಿ ಹಿಂಡು                                                      ...ಈ ಜಗದಲಿ       ಸತ್ಯದಲಿ ಇರುತಿಹೆನು ಪ್ರತಿನಿತ್ಯದ ಬದುಕಿನಾಟದಲಿ ಕುತ್ತಾಗಿ ಬರುತಿಹುದು ಸತ್ಯಕ್ಕೆ ಬೆಲೆ ಇಲ್ಲದೇ ಎತ್ತಲೂ                                                      ...ಈ ಜಗದಲಿ   ಹಂಗಿನಾಟವ  ಆಡುವರು ನಿನ್ನ ಕಣ್ಣ ಮುಂದೆ ಬಣ್ಣದಿಂದಲಿ ಪುಂಗಿ ಊದುವರು  ಹಲವು ಭಂಗಿಗಳ ತೋರಿಸುವರು                                                     ...ಈ ಜಗದಲಿ ಮಂಗನಾಗುವೆ ಹಲವು ಬಾರಿ ದಂಗುಬಡಿದಂತಾಗುವೆ ನಿಮಿಷದಲಿ ಚೊಂಗನಂತೆ ಬಂದು ನುಂಗಿ ಬಿಡಲು ನೋಡುವ...

ಅಮ್ಮ

ನೆನಪುಗಳು ಕಾಡುತ್ತಿದೆ ಅಮ್ಮ ನಿನ್ನ ನೋಡಲು ಸ್ವಪ್ನಗಳು ಬೀಳುತ್ತಿದೆ ನಿನ್ನಾಸರೆ ಪಡೆಯಲು ನಿನ್ನ ಪ್ರೀತಿಯ ಮಾತುಗಳು, ಕೇಳುತ್ತಿದೆ ನಿದ್ದೆಯಲಿ ನಾನೆದ್ದು ನೋಡಿದರೆ ಸ್ತಬ್ದನಾಗುವೆ ಹಾಸಿಗೆಯಲಿ ಹಣೆಯ ಮೇಲೆ ಕೈಯ ಸವರಿ, ಕಿವಿಯಲ್ಲಿ ಪಿಸುಗುಟ್ಟುತ್ತಿದ್ದೆ ಕಂದಾ ಎದ್ದೇಳು ಬೆಳಗಾಯಿತು, ನೇಸರ ನಗುತಿಹನು ಕೇಳಿಯೂ ಕೇಳದಂತೆ ನಾ ತಿರುಗಿ ಮಲಗುತ್ತಿದ್ದೆ ಚಾಪೆಯಲಿ ಸದ್ದು ಮಾಡದೇ ಮಲಗಬಿಟ್ಟಳು , ಕೆಲಹೊತ್ತು ಸಂತಸದಲಿ ತಿಂಡಿ ತಿನಸುಗಳ ಗಮಗಮ ಪರಿಮಳ ಬಡಿಯುತ್ತಿರಲು ಮೂಗಿಗೆ ಅಮ್ಮಾ ನಾ ಎದ್ದೆ , ಎಂದು ತಬ್ಬಿಕೊಂಡೆನು ಪ್ರೀತಿಯಲಿ ಸಂತಸದಿಂದ ಅಮ್ಮನೆಂದಳು , ನೀ ಎನ್ನ ಮುದ್ದು ಬಂಗಾರ ಹರುಷದಲಿ ನಾ ಕುಣಿದೆ ಅಮ್ಮನಾ ಆಸೆಯನು ಕಂಡು                                             -ಅಂಜಾರು ಮಾಧವ ನಾಯ್ಕ್

ಪುಟ್ಟ ಕವಿಯ ಆಶಯ

ನಾ ಕವಿಯಲ್ಲ ,ನಾ ಕವಿಯಲ್ಲ ಗೀಚಿಹೆನು ಬರಬಲ್ಲ ಬರಹ ತಿಳಿಯದು ನನಗೆ ರಾಗ ಸುರಾಗವು, ನುಡಿಸುತಿರೆ ವೀಣೆ ತಂಬೂರಿಯ ಇಂಪಾಗಿ ಇರದು  ನುಡಿಸುವ ತಾಳ ತಂಬೂರಿಯು ಪ್ರೀತಿಯಲಿ ಸ್ವಾಗತಿಸುವೆ ತಂಬೂರಿ ನಾದಗಳ ಕೇಳಲು ಇಚ್ಚಿಸದಿರಬಹುದು ನೀ , ಪುಟ್ಟ ಹೃದಯದ ಮಿಡಿತ ಹಿಡಿತದಲಿಲ್ಲ ಏರಿಳಿತದ ನೂರೊಂದು ಸ್ವಪ್ನಗಳ ಬಡಿತ ಕೊಳದ ತಾವರೆಯಂತೆ ಹಾಯಾಗಿ ತೇಲುತಿರುವೆ ಮನದಲಿ ವಿಶ್ವಾಸದ ಮೊಗ್ಗು ಮೂಡುತಿಹುದು ಪುಟ್ಟ ಕವಿಯಾಗಲು ಮನಬಿಚ್ಚಿ ನುಡಿಸುವೆ  ತಂಬೂರಿಯ , ಕಂಠದಲಿ ಹಾಡುವೆ ರಾಗ ಲಯಗಳ ಓ ನನ್ನ ಗೆಳೆಯ ನೀ ಯಾಗಿರು ಆಸರೆ ಈ ಪುಟ್ಟ ಕವಿಯು  ಬೆಳೆಯಲು                                         -ಅಂಜಾರು ಮಾಧವ ನಾಯ್ಕ್

ತಿರುಗಿನೋಡೊಮ್ಮೆ ಓ ಮನುಜ

        ತಿರುಗಿನೋಡೊಮ್ಮೆ ಓ ಮನುಜ ಜೀವನದ ಪಗಡೆಯಾಟವ   ಅದೆಷ್ಟು ತಪ್ಪುಗಳ ಮಾಡಿರುವೆಯೋ ,ತಿಳಿದು - ತಿಳಿಯದೆ ನಿನ್ನಾಟದಲಿ  ಮಾಡಿದ ತಪ್ಪಿಗೆ ತಲೆಬಾಗಿ ನೀನಿದ್ದರೇ , ಚೆಲುವಾಗಿ ಇರಬಹುದು ನಿನ್ನ ಪಯಣ   ತಪ್ಪೆಂದು ತಿಳಿದು ಅಹಂಕಾರಿಯಾದರೆ , ಕರಗಿ ಹೋಗುವುದು ನಿನ್ನ ಜೀವನ          ನೀಡುತ್ತಿರು ನೊಂದ ಜೀವಕೆ , ಪ್ರೀತಿಯ ಔತಣವ ಚೆಂದದಲಿ           ಅದರಿಂದ ನಿನಗಾಗುವುದು ಆನಂದದ ನಿರಂತರ ಅನುಭವ             ಪಾಪಿ , ನೀನೆಷ್ಟು ಜನರ ಮನದಲಿ ಚೆಲ್ಲಾಟವಾಡಿರುವೆ          ಆ ಮನದ ಶಾಪವು ನಿನ್ನ ಬಿಡಲಾರದು ತಿನ್ನದೇ ಎಂದಿಗೂ          ನೀನೆಂದುಕೊಂಡಂತೆ , ಇರಬಹುದು ನಿನ್ನಲ್ಲಿ ಹಣ ಜನ ಬಲ                ದೇವರು ಮುನಿದರೆ ಪಡುತ್ತಿಯಾ ಪಾಪದ ಫಲ          ಅತಿಯಾಸೆಗೆ ಬಲಿಯಾಗಿ , ಬಲಿತೆಗೆದುಕೊಳ್ಳಬೆಡ ಬಡವರನು       ಅಹಂಕಾರವ ದೂರವಿಟ್ಟು ,ಹರುಷದಿಂದಲಿ ಆಡು ಪಗಡೆಯಾಟವ                              ...

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ

                ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನುವರು, ಈ ಜಗದಲಿ             ಕತ್ತೆ ಇರದಿದ್ದರೇ ನಾನಿಂದು ಸತ್ತೆ ಎನುವನು ಭಾರವ ಹೊರುವವನು  ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಅನ್ನುವರು, ಈ ಜಗದಲಿ  ಮಾತು ಮಾತಿಗೂ ಜಗಳವನು ಕಾಯುತ , ನಾ ನಿನ್ನ ಬಿಡಲಾರೆ ಅನ್ನುವರು ದ್ವೇಷದಲಿ       ತಂದೆ ತಾಯಿಯೇ ದೇವರು, ಮೊದಲ ಪಾಠ ಅನ್ನುವರು, ಈ ಜಗದಲಿ ಪ್ರತಿದಿನವೂ ಹೀಯಾಳಿಸುವರು ಹೆತ್ತುಸಲಹಿದ ತಂದೆ ತಾಯಿಯ ಕೆಲ ಮನುಜರು     ಕಾಯಕವೇ ಕೈಲಾಸ -ಕೈ ಕೆಸರಾದರೆ ಬಾಯಿ ಮೊಸರೆನ್ನುವರು, ಈ ಜಗದಲಿ        ದಿನಕ್ಕೊಂದು ತುತ್ತು ಅನ್ನವ ಕೊಡದೇ ದುಡಿಸಿಕೊಳ್ಳುವರು ಈ ದಿನದಲಿ                 ಮಾತು ಬೆಳ್ಳಿ ಮೌನ ಬಂಗಾರ ಎನುವರು , ಈ ಜಗದಲಿ     ಮಾತಾಡದಿದ್ದರೂ...  ಮಾನ ತೆಗೆದು ಮೌನವಾಗಿಸಿ ಬಿಡುವರು,ಈ ಲೋಕದಲಿ                                                        - ಅಂಜಾರು ಮಾಧವ ನಾಯ್ಕ್...

ಹಿಂಡು ಪಾಪಿಗಳ ಕಂಡು ತುಂಡಷ್ಟೂ ಬೆರಗಾಗದಿರು

ಹಿಂಡು ಪಾಪಿಗಳ ಕಂಡು, ತುಂಡಷ್ಟೂ  ಬೆರಗಾಗದಿರು ಚೆಂಡಿನಾಟವ ಆಡು  ಜಗದ ಈ ಡೊಂಬರಾಟದಲಿ ಸಜ್ಜಾಗಿರು ನಿನ್ನಾಟಕೆ  ಹೆಜ್ಜೆಯನು ಕೊಡುತ ಗೆಜ್ಜೆ ನಾದವ ಹೊಮ್ಮಲಿ ನೀನಿಡುವ ಹೆಜ್ಜೆಯಲಿ ಆಗಮಿಸಲಿ ಪ್ರತಿಕ್ಷಣದ ಸವಾಲಿನ ಆಟವು ಹೆಮ್ಮೆಯಿಂದ ಹೇಳು , ನಾ ಬರುವೆ ಜಯಶಾಲಿಯಾಗಿ ಬಿಡಬೇಡ ಮೈದಾನದ ಪರಿಧಿಯನು , ಎಂದಿಗೂ ಜನ ನಿನ್ನಾಟವ ಕಂಡು , ಚೆಂಡನು ತುಂಡು ಮಾಡದಿರಲೆಂದು ಅನುಭವಿಸುವೆ ನೀನು ಆಟ ಚೆಲ್ಲಾಟಗಳ ನಿರಂತರ ಗಳಿಸುವೆ ಬಹು-  ಬಹುಮಾನಗಳ  ,ಆಡುತಲಿ ಎಂದೂ ಪ್ರೇಕ್ಷಕನಾಗಿಹನು ಜೀವನದಾಟದಲಿ, ಆ ಸೃಷ್ಟಿಕರ್ತನು ಮೋಸವ ಮಾಡದಿರು ನಿನ್ನಾಟ ಜಯಗಳಿಸುವತನಕ                                 - ಅಂಜಾರು ಮಾಧವ ನಾಯ್ಕ್

ನನ್ನ ಚಿನ್ನ

Image
ನಾ ಎದ್ದೇಳುವ ಮುನ್ನ ಮೆಲ್ಲನೆ ಎದ್ದಳು ನನ್ನ ಚಿನ್ನ ಕೊಟ್ಟಳು ಹಣೆಗೆ ಸಿಹಿಯಾದ ತುಟಿಯಲಿ ಅಂತರಂಗದ  ಮುತ್ತನು  ಅದೇನೋ ತುಂಬಿದಂತಾಯಿತು ಪ್ರೀತಿಯ ಕೊಡಪಾನ  ಬತ್ತಿ ತುಳುಕದಿರಲಿ ದಿನನಿತ್ಯದ ಬದುಕ ಬವಣೆಯಲಿ  ಮೋಹದಲಿ ನೀಡಿದಳು ತಿಂಡಿ ತಿನಸುಗಳ ಸವಿಯಲು  ನಾನನುಭವಿಸಿದೆ ಊಟೋಪಚಾರಗಳ ಸರಮಾಲೆಯನು  ಮನದುಂಬಿ ಹೇಳಬಯಸಿದೆ ನೀ ನನ್ನ ಬಂಗಾರ  ಹೇಳುವ ಮುನ್ನ , ನಾ ಕಂಡೆ ಅವಳ ಮುಖದಲಿ ಚಿತ್ತಾರ  ಇರಲಿ ಎಂದೆಂದಿಗೂ ಸಹಬಾಳ್ವೆಯ ರಥದ ಚಲನೆಯ  ಜೀವನ ಸಾಗಲಿ ಅಡೆತಡೆಯ ಎದುರಿಸಿ ಮುನ್ನುಗ್ಗಲು  ದಿನಬಿಡದೆ ಬಯಸುವೆ ಓ ನನ್ನ ಚಿನ್ನ , ನೀ ಎನ್ನ  ಬಿಡಲಾರೆ ಎಂದಿಗೂ ಪ್ರತಿಕ್ಷಣದ ಹೆಜ್ಜೆಯಲಿ  ನಿನ್ನ ಕೈಗೆ ನನ್ನ ಕೈಯ ಜೋಡಿಸಿರುವೆ ಒಂದಾಗಿರಲು  ಸುಖವಾಗಿ ಚಿನ್ನದಂತೇ ಹೊಳೆಯಲಿ  ನಮ್ಮ ಬದುಕು                           -ಅಂಜಾರು ಮಾಧವ ನಾಯ್ಕ್ 

ಓ ಕಲಿಯುಗದ ಮನುಜ .......

ಹೆತ್ತು ಸಲಹಿದವರ ಮರೆತ  ಕರುಳಕುಡಿಯ , ನೀನೆಷ್ಟು ಗಳಿಸಿದರೇನು ಫಲ, ತುತ್ತು ಅನ್ನವ ನೀಡದೆ ಇದ್ದರೆ ಚರ್ಮದ ಹೊದಿಕೆಯ ಮೇಲೆ ,ಸೂಟು ಬೂಟುಗಳ ಧರಿಸಿ ಮಲ್ಲಿಗೆ ಪರಿಮಳ ಸಿಂಪಡಿಸಿ ,ಲೋಕವೆಲ್ಲ ನಾನೇ ಚೆಲುವ ಎಂದರೆ ...!!! ಒಂದಿಷ್ಟು ಸೌಜನ್ಯತೆ ಇರದೆ , ಮತ್ತೋರ್ವರ  ಹೀಯಾಳಿಸಿ ಬುದ್ದಿಯ ಹೇಳಹೊರಟ ನೀನೆಷ್ಟು ಯೋಗ್ಯನಯ್ಯ ....!!!! ಕಷ್ಟ ಸುಖಗಳ ಅರಿಯದೆ , ತೋರುಬೆರಳ ಎತ್ತುವ ನೀನ್ಯಾಕೆ ತೆಗಳುತ್ತೀಯ  , ಅವನ ಅವಸ್ಥೆಯ ಕಂಡು ಪರರು ಹೇಳುತಿಹರು , ಅವನ ಜೀವನ ಪಾಡುಗಳ ನಿನಗೇನು ಗೊತ್ತು ಪರರು ನಿನ್ನ ನೋಡುವ ರೀತಿ ಅವಲೋಕಿಸುತ್ತಿರು ನಿನ್ನನು , ಪ್ರಶ್ನಿಸಿಸುತ್ತಿರು ತನ್ನನು ಅಹಂಕಾರಿಯೇ ಆಸೆಬುರುಕನೇ ,ವಿಶ್ವಾಸಿಯೇ ಲೋಕದಿ ಕಹಿಯಾಗದೆ ,ಸಿಹಿಯಾದ ಬಾಳನ್ನು ಬಾಳಿ ಮಾದರಿಯಾಗಿ ಬದುಕಲು ಕಲಿ, ಓ  ಹುಲು  ಮನುಜ                       - ಅಂಜಾರು ಮಾಧವ ನಾಯ್ಕ್

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗೆ ......

Image
ಪಡಬೇಡ ಅನ್ಯರ ಸ್ವತ್ತುಗಳನ್ನು ಕಂಡು ; ಹೊಟ್ಟೆಕಿಚ್ಚು ಅನ್ನೋದು ನಿನ್ನ ಹಿಂಡೋದು  ತರತರ,ನಿರಂತರ ನೀನ್ಯಾಕೆ ಶ್ರಮಿಸದಿರುವೆ , ಶಿಖರವೆರಲು ಪ್ರತಿನಿತ್ಯ ಅಂಕುಶ ಹಾಕಬೇಡ , ಏರಿ ನಿಲ್ಲಲು ಬಯಸುವ ಮನುಜಗೆ ನಿನ್ನ ಒಳಗಿನ ಸದ್ಗುಣಗಳ ಬಾಗಿಲ ತೆರೆ ಜಗಕೆ ಖುಷಿಯ ಕ್ಷಣಗಳ ತುಂಬಿಕೊಳ್ಳು ನಿನ್ನ  ಮನಕೆ ಸುಮ್ಮಗೆ  ನುಡಿಯದಿರವಗೆ ಕೆಲಸವಿಲ್ಲ ಎಂದು  , ಬರಬಹುದದು ತಿರುಗು ಬಾಣವಾಗಿ ಮುಂದೂ ಪ್ರೀತಿಯಿಂದ ಸ್ವಾಗತಿಸು , ಕಷ್ಟಗಳನು ಎಂದಿಗೂ ಸುಖ ಬಂದಾಗ ಮರೆಯಬೇಡ ನಡೆದು ಬಂದ ಪಯಣವ ನಿನಗಾದಲ್ಲಿ ಸಹಾಯ ಹಸ್ತವ ನೀಡು ಪರರಿಗೆ ಮರೆಯಬೇಡ ಕರಮುಗಿದು ಪ್ರಾರ್ಥಿಸಲು ಸರ್ವಶಕ್ತಗೆ                          - ಅಂಜಾರು ಮಾಧವ ನಾಯ್ಕ್

ನೇಸರ ಮೂಡುತಲಿ

ನೇಸರ ಮೂಡುತಲಿ ತವಕದಿಂದೆದ್ದೆ ನಗು ಮೊಗವ ನೋಡಲು ಮಿಂಚಿನ ಸಂಚಲನ ಮನದಲಿ ದೀಪ ಉರಿಸಿ ಬೇಡಲು ಗೀರಿದೆ ವಿಶ್ವಾಸದ ಕಡ್ಡಿಯ, ಪ್ರಾರಂಬಿಸಲು ಧೈರ್ಯದಲಿ ಬೆಳಗಿತು  ಮುತ್ತಿನಂತಹ  ದಿನ ಹರುಷದಲಿ ಆಸೆಗಳ ಸರಮಾಲೆಯ ಪಟ್ಟಿಯ ನಿನ್ನ ಮುಂದಿಟ್ಟೆ ನಿರಂತರ ನೀಡುವೆಯ  ಆತ್ಮಸ್ಥೈರ್ಯದ ಬೆಳ್ಳಿತಟ್ಟೆ ನೀನಿರಲು ನನಗೇಕೆ ಭಯ, ಕಾಡದು ಇನ್ನಾವುದೇ ಅಪಜಯ ಬಲಪಡಿಸು ನನ್ನ ಇನ್ನಷ್ಟು , ದುಷ್ಟಶಕ್ತಿಗಳ ಎದುರಿಸಲು ತಲೆಬಾಗಿರುವೆ ನಿನ್ನ ಚರಣಕೆ ವಿನಂತಿಯನು ಮಾಡುತ ಕೈ ಬಿಡದಿರು ಎಂದೆಂದಿಗೂ ಸಡಗರವನ್ನು ನೀಡುತ ನಗುಮೊಗದಿಂದ ಬಾಳ ಬಯಸುವೆ ,ಪಾದ ಸೇವೆ ಮಾಡುತಲಿ ನೀಡುತ್ತಿರು ಹರುಷದ ಹೊಳೆಯನು ಸದಾ ಎನ್ನ ಬಾಳಲಿ                                                 - ಅಂಜಾರು ಮಾಧವ ನಾಯ್ಕ್

ಬದುಕೆಂಬ ನೌಕೆ

ಬದುಕೆಂಬ ನೌಕೆಯಲಿ ಸಾಗುತಿಹೆನು ದಡವ ಸೇರಲು ಸೇರಿ ನಲಿಯಲು ಹವಣಿಸುತಿದೆ ದಣಿದ ಪಯಣವು  ಕಂಡೆ ದೂರ ತೀರದಲಿ ನಸುನಗೆಯ ಹೊಂಗಿರಣ ಸಮೀಪಿಸಿದೆ ಆಲಂಗಿಸಲು ಕ್ಷಣ ಕ್ಷಣದ ಸಿಂಚನ ಖುಷಿಯಾಯಿತು ಮಿಲನ , ಸ್ಪರ್ಶಿಸಿದೆ ಅಂತಕರಣ  ಒಡೆಯದಿರಲಿ ಮನವೆಂಬ ಕನ್ನಡಿಯು ; ಪ್ರತಿಬಿಂಬಿಸಲಿ ಸದ್ಗುಣಗಳ ಸರಮಾಲೆ ನೀಡುತಿರಲಿ ರಹದಾರಿ ಮನದುಂಬಿ ನೀಡುವೆನು   ಹೂವನು ಸ್ನೇಹದಲಿ ತೆಗೆದುಕೋ ನಾ ತಂದ ಸಿಹಿಯನ್ನು ಪ್ರೀತಿಯಲಿ ಹರಸು ನೀ ಈ ನಾವಿಕನ ಪಯಣವು ದಡ ಮುಟ್ಟಲಿ                         - ಅಂಜಾರು ಮಾಧವ ನಾಯ್ಕ್

ಆಶೀರ್ವಾದ

ಅಮ್ಮನ ಆಸರೆಯಲಿ , ಕಳೆದು ಹೋದ ಆ ದಿನಗಳು ಬಯಸುತ್ತಿದೆ ಇಂದು ,ಮರುಕಳಿಸಲಿ ಸಂತೋಷದ ಕ್ಷಣಗಳು ಎದೆತುಂಬಿ ನಗುತ್ತಿದ್ದೆ, ಅಮ್ಮನ ಮೋಹವನು ಕಂಡು ಕಾಡುತ್ತಿದೆ ಇಂದು ,ಬಾಲ್ಯದಾಟದ ಹುಲ್ಲಿನ ಚೆಂಡು ತಾಳಲಾರದ ಹಸಿವಿನ ನಡುವೆಯೂ ಇರುತ್ತಿತ್ತು ಹುಮ್ಮಸ್ಸು ಆದರಿಂದು ನನಗಾಗುತ್ತಿದೆ ಮನದಾಳದ ವಿಪತ್ತು ಹಲವು ಕನಸುಗಳ ಕಂಡೆ , ನಮ್ಮವರ ಮುಂದೆ ಅದ ತಿಳಿದು ನೆನೆಸಿಕೊಂಡರು ,ಇವನಿಗಿಲ್ಲ ಹಿಂದೆ ಮುಂದೆ ನಾ ಕಳೆಯಲಿಲ್ಲ ಹೃದಯದ ಬಲವನ್ನು , ಅಷ್ಟು ಸುಲಭವಾಗಿ ಸಿಗಲಿಲ್ಲ ಪ್ರೋತ್ಸಾಹದ ಹರಿವು , ಎನ ಬಾಳಲಿ ನಿರಂತರವಾಗಿ ವಿಶ್ವಾಸವು ಕೊಂಡೊಯ್ಯುತ್ತಿದೆ, ನನ್ನೀ ಬಾಳಿನ ದೋಣಿಯನು ಭರವಸೆಯು ನೀಡುತ್ತಿದೆ , ಪ್ರತಿಕ್ಷಣದ ಚಲನೆಯನು ನನಗಿರಲಿ ಆತ್ಮ ಸ್ಥೈರ್ಯದ ಬತ್ತಳಿಕೆಯು ಮುಂದೂ ನಾನಾಗಿರುವೆ ಬಹುಬಾಣಗಳ ಸರದಾರ ಎಂದೂ ಲೊಕದೆತ್ತರಕೆ ಬೆಳಗಿಸಲಿ ನನ್ನ , ನಾ ಸಾಯುವ ಮುನ್ನ . ನನಗಿದೆ  ತಂದೆ ತಾಯಿಯ ಆಶೀರ್ವಾದವು                - ಅಂಜಾರು ಮಾಧವ ನಾಯ್ಕ್

ನಾಯಿ (ತುಳು )

ಈ ನಾಯಿ, ಮೂಜಿ  ಕಾಸ್ ದಾಯೆ ಪನ್ಪೆರ್ ಜನಕುಲು ಆ ನಾಯಿಗ್ ಗೊತ್ತುಂಡ ಈ ನಾಯಿದ ಕೈ ಬಾಯಿ ತೋಜಾವೆರ್ ಮಲ ಮಲ್ಲ ಮೆಂಚುನ ರೈಸುನ ಸಾಮನ್ ಎನ್ನ ಮಲ್ಲ ಎನ್ನ ಮಲ್ಲ ಪಂಡೆರ್ ,ಒಂಜಿ ರಡ್ಡ್ ನಿಮಿಷ ಬೊಕ್ಕ ಗೊತ್ತಾಂಡ್ , ಅವ್ ದಾಲ ಮಲ್ಲ ಅತ್ತ್  ಪಂಡ್ ದ್ ಈ ಲೊಕೊಡ್ ಬಾರಿಮಲ್ಲ ಬೇವು ಬೆಲ್ಲ ಸಸಾರ ಮಲ್ಪಡೆ ಈ ನಾಯಿಗ್ , ಅವೊಂಜಿ ದಿನ ಬರು ರಡ್ಡ್ ನಾಯಿಲ ಒಂಜಿ ಬಟ್ಟಲ್ಡ್ ಗಂಜಿ ತಿನ್ಪಿನ ದಿನ .                  -ಅಂಜಾರು ಮಾಧವ ನಾಯ್ಕ್                  

ತಂಗಾಳಿ

ತಂಗಾಳಿ ಬೀಸುತಲಿ ,ನೀ ನನ್ನ ಹೃದಯದಲಿ ನಾನಿರುವೆ ಸಂತೋಷದ ಹೊನಲಿನಲಿ ಇಂದು ಮುಂದು ಎಂದೆಂದಿಗೂ ಬಯಕೆ ಬಣ್ಣಗಳಿಗೆ ಮರುಳಾಗದೆ, ಇರುವೆ ನಿನ್ನೀ ಪ್ರೀತಿಯ ನಸುನಗೆಯ ಸವಿಯಲು ಮರೆಯಲಾಗದ ಕಂಬನಿ ನೀಡುತ್ತಿದೆ ಇಬ್ಬನಿ ಎಲ್ಲೊ ಇರುವ ಮನಸ್ಸಿನ ,ಉಯ್ಯಾಲೆಯ ನೀ ತಂದು ತೂಗುತ್ತಿರುವೆ , ಹಾಯಾಗಿ ನಿನ್ನುಸಿರು ಸೇರುತಿದೆ ನನ್ನುಸಿರ ಪಾಲಿನಲಿ ತಪ್ಪು ಒಪ್ಪುಗಳಿಗೆ ಸರಿಸಾಟಿಯಾಗಿ , ಈ ಜೀವನ ಸಾಗುತ್ತಿದೆ ಕಲ್ಲು ಮುಳ್ಳುಗಳ ಕಾಡು ಮೇಡಿನಲಿ ತಂಗಾಳಿ ಬೀಸಲಿ ನೋವು ನಲಿವಿನಲಿ , ತಂಗಾಳಿ ಬೀಸಲಿ ನೋವು ನಲಿವಿನಲಿ                             -ಅಂಜಾರು ಮಾಧವ ನಾಯ್ಕ್

ಆರ್ಥಿಕ ಸಹಾಯಕ್ಕಾಗಿ ಮನವಿ ಪತ್ರ

Image
PLEASE READ AND HELP THEM AS MUCH AS POSSIBLE , AND SHARE TO YOUR FRIENDS , SOCIAL WORKERS WHOM YOU KNOW TO GIVE FINANCIAL AND MORAL SUPPORT TO THIS POOR FAMILY. ಆರ್ಥಿಕ ಸಹಾಯಕ್ಕಾಗಿ ಮನವಿ ಪತ್ರ  ಮಾನ್ಯರೇ ,  ನಾನು ಸದಾನಂದ ನಾಯ್ಕ ಪ್ರಾಯ (45 ವರ್ಷ ), ... ನನ್ನ ಇಬ್ಬರು ಮಕ್ಕಳು ಸಚಿನ್ - ಪ್ರಾಯ (21 ವರ್ಷ ), ಸುಶ್ಮಿತಾ -ಪ್ರಾಯ (18 ವರ್ಷ ), ಹೆಂಡತಿ ಸುಜಾತ ಈ ಮೇಲಿನ ವಿಳಾಸ ದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದೇನೆ . ಎಲ್ಲಾ ಹೃದಯವಂತರಲ್ಲಿ ನನ್ನ ಅಳಲನ್ನು ಹೇಳುತ್ತಿದ್ದೇನೆ , ಅವಿದ್ಯಾವಂತನಾದ ನಾನು ಬಡತನದಿಂದ ಬಳಲುತ್ತಿದ್ದು ನನ್ನ ಮಕ್ಕಳ ಜೀವನವಾದರೂ ಸುಖಮಯವಾಗಿರಲಿ ಎಂದು ಕೂಲಿ ಮಾಡಿ ದುಡಿದು ಜೀವನ ಮಾಡುತ್ತಿರುವಾಗಲೇ ತಾಳಲಾರದ ಕಷ್ಟ ಕಾರ್ಪಣ್ಯಗಳು ಒಂದರ ಹಿಂದೆ ಒಂದು ಎರಗಿ ಬರುತ್ತಿದ್ದು ನನ್ನಿಂದ ನನ್ನ ಕುಟುಂಬ ನಡೆಸಲು ತುಂಬಾ ಕಷ್ಟ ಆಗುತ್ತಿದೆ. ದಿನಕೂಲಿಯಿಂದ ಪಡೆದ ಹಣದಿಂದ ಇಬ್ಬರು ಮಕ್ಕಳ ಶಾಲೆ ಕಾಲೇಜು ಖರ್ಚು ವೆಚ್ಚ ನಡೆಯುತ್ತಿತ್ತು , ಕೆಲಸಮಯದ ಹಿಂದೆ ಸರ್ಕಾರದ ನಬಾರ್ಡ್ ನ ಹೊಸ ರಸ್ತೆ ಯೋಜನೆಯಿಂದಾಗಿ ನನ್ನ ಫಲವತ್ತಾದ ೫೦ ಸೆಂಟ್ಸ್ ಕೃಷಿ ಜಾಗವನ್ನು ಯಾವುದೇ ಪರಿಹಾರ ಇಲ್ಲದೆ ಕಳೆದುಕೊಂಡಿದ್ದೇನೆ. ಎರಡು ವರ್ಷಗಳ ಹಿಂದೆ ಕೆಲಸ ಮಾಡುತ್ತಿರುವಾಗ , ಬಲಕಣ್ಣಿಗೆ ಕಲ್ಲಿನ ಬಲವಾದ ಏಟು ಬಿದ್ದು ಆ...