Posts

ನಮ್ಮದಾಗಲಿ ಸೌಭಾಗ್ಯ (ಕವನ -40)

ಅಂತೂ ಬಂತು ಹೊಸವರುಷ ಕಳೆದು ಹೋದ ದಿನಗಳ ನೆನೆಸಿದರಂತು  ಈ ವರುಷ ಬದುಕಿದ್ದೆ ಒಂದು ಭಾಗ್ಯ ಸಾವಿರಾರು ಸಾವು, ನೋವು ದುರ್ಘಟನೆಗಳ ಸರಮಾಲೆ ನಮ್ಮದಾಯ್ತು ದೌರ್ಭಾಗ್ಯ ನಮ್ಮದಾಗಲಿ ಸೌಭಾಗ್ಯ ಹರುಷ ತರಲಿ ದಿನನಿತ್ಯ ಹೊಸವರುಷ ನಮ್ಮೆಲ್ಲರ ಭಾಗ್ಯ ಮನ್ನಿಸೆನ್ನ ತಪ್ಪುಗಳ ಲಾಲಿಸೆನ್ನ ಸಿಹಿ ಮಾತುಗಳ ಎನ್ನ ಕಣ್ಣಾಗು ನೀ ಮುಂದಿನ ದಿನಗಳಲಿ ನಿಮಗೂ ನಿಮ್ಮವರಿಗೂ ಹೊಸ ವರುಷದ ಶುಭಾಶಯಗಳು ಪ್ರೀತಿಯೊಂದಿಗೆ               ✍️ಮಾಧವ ನಾಯ್ಕ್ ಅಂಜಾರು 🌷

ನಿನಗಾಗಿ ಕವನ (ಕವನ -41)

ನಿನ್ನ ನಗುವಿಗೆ ನೀನೆ ಕಾರಣ ನಿನ್ನ ನಗುವೇ ನಿನಗೆ ಭೂಷಣ   ನಗಬೇಕಾದರೆ ಬೇಕು ಕಾರಣ ನಗು ನಗುತಾ ಸಾಗಲಿ ಜೀವನ ನಿನ್ನ ನಗುವಲಿ ನನ್ನ ಚಾರಣ ನಿನ್ನ ಮೊಗದಲಿ ಸಾವಿರ ಗುಣ ನಿನ್ನೊಂದಿಗೆ ಇರುವ ಕಾರಣ ಎನ್ನ ಬದುಕು ಹಸಿರು ತೋರಣ ನಿನಗಾಗಿಯೇ ನನ್ನ ಈ ಪ್ರಾಣ ಸಣ್ಣ ಸಣ್ಣ ಜಗಳ ಬಣ್ಣ ಹೊನ್ನಂತೆ ನಿನ್ನ ಈ ಕವನ ಬೆಳಗುತಲಿರಲಿ ಜೀವನ ಕವನ       ✍️ಮಾಧವ ನಾಯ್ಕ್ ಅಂಜಾರು 🌷          

ತಿಳುವಳಿಕೆ (ಕವನ -42)

ಸಂಸ್ಕಾರ ಇಲ್ಲದವಳು ಹಸೆಮಣೆ ಏರಬಾರದು ಜವಾಬ್ದಾರಿ ಇಲ್ಲದವರು ಸಂಸಾರ ಮಾಡಬಾರದು ಸಹನೆ ಇಲ್ಲದವಳು ಮಕ್ಕಳನ್ನು ಹೇರಬಾರದು ಪ್ರೀತಿಯೇ ಇಲ್ಲದವನು ಗಂಡನಾಗಿ ಇರಬಾರದು ನ್ಯಾಯ ಅರಿಯದವನು ನ್ಯಾಯವಾದಿ ಆಗಬಾರದು ಸತ್ಯವಿಮರ್ಶೆ ತಿಳಿಯದವನು  ನ್ಯಾಯಾಧೀಶ ಆಗಬಾರದು       ✍️ಮಾಧವ ನಾಯ್ಕ್ ಅಂಜಾರು 🌷

ಆಸೆಗಳು (ಕವನ -43)

ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾಬಿಟ್ಟಿ ಬಿಟ್ಟು ಹೋಗದು ಇಷ್ಟಪಟ್ಟು ಮಾಡುವ ದುಡಿಮೆ ಕಷ್ಟವೆಂದು ಅನಿಸಿಕೊಳ್ಳದು ಬೆಟ್ಟದಂತಿರುವ ಆಸೆಗಳಿಗೆ ಸಂಪಾದನೆ ಸಾಕಾಗದು ಕೆಟ್ಟದಾಗಿ ಮಾಡಿದ ಸಂಪಾದನೆ ಹೆಚ್ಚು ಹೊತ್ತು ನಿಲ್ಲದು ಬಿಟ್ಟಿಯಾಗಿ ಸಿಗುವ  ಹಣ ಎಷ್ಟಿದ್ದರೂ ಸಾಕಾಗದು ಸಿಟ್ಟುಗೊಂಡು ಗಳಿಸಿದ ಹಣ ಚಟ್ಟ ಏರಿಸದಿರದು!    ✍️ಮಾಧವ ನಾಯ್ಕ್ ಅಂಜಾರು 🌷

ನನ್ನ ಪ್ರಪಂಚ ನೀನು (ಕವನ -44)

ನಿನ್ನ ಕಣ್ಣ ನೋಟಕೆ ಹೃದಯ ಬಡಿತ ಏರಿಕೆ ಸಣ್ಣ ಹೆಜ್ಜೆಯನಿಡುತ ನಡೆವ ನಿನ್ನ ಸೌಂದರ್ಯವೇ ಶೀಲಾ ಬಾಲಿಕೆ, ಮೈ ಮುಚ್ಚುವ ಸೀರೆಯುಡುತ  ರಂಗು ರಂಗಿನ ಬಳೆ ತೊಟ್ಟು ಹಣೆಗೊಂದು ತಿಲಕವಿಟ್ಟು ಮಲ್ಲಿಗೆ ಮುಡಿದ ಜಡೆಯೊಂದಿಗೆ ಕಾಲ್ಗೆಜ್ಜೆ ಸದ್ದಿನೊಳು ಓಡಾಡುವ ಪರಿ ಕಾಣುತ ಮೈ ಮರೆತು ಸ್ತಬ್ದನಾದೆ, ನನಗೊಲಿದ ಲಕ್ಷ್ಮಿ ನೀನು ನಿನ್ನಲಿರೋ ಶಕ್ತಿಯೇನು ಕ್ಷಣ ಕ್ಷಣಕೂ ನೀ ನುಡಿವ ಮಾತುಗಳೇ ಸವಿ ಜೇನು ನಿನಗಾಗಿ ಎದ್ದೇಳುವ ಪ್ರೀತಿಯ ನಲ್ಲ  ನಾನು ನನ್ನ ಪ್ರಪಂಚವೇ ನೀನು        ✍️ಮಾಧವ ಅಂಜಾರು 🌷

ನಾಚಿಕೆ ತರದಿರಲಿ (ಕವನ -45)

ನಾನಾಡುವ ಮಾತು ನಿನಗೆ ನೋಯಿಸದಿರಲಿ ನಾ ಕೇಳುವ ಪ್ರಶ್ನೆ ನಿನಗೆ ಕಹಿಯಾಗದಿರಲಿ ನಾನುಡುವ ಬಟ್ಟೆ ನಿನಗೆ ಕೀಳಾಗದಿರಲಿ ನಾ ಹಾಕುವ  ಪಾದರಕ್ಷೆ  ನಿನಗೆ ನಾಚಿಕೆ ತರದಿರಲಿ ನಾನಿರುವ ಮನೆ ಅಂತಸ್ತಿಗೆ ಧಕ್ಕೆ ತರದಿರಲಿ  ನಾನಿರುವ ಮಣ್ಣು ಕಳೆಗುಂದದಿರಲಿ ನಾನಿರುವ ಊರು ನಿನಗೆ ದೂರವಾಗದಿರಲಿ ನನ್ನಲಿರೋ ಮನ ನಿನ್ನ ಜೊತೆ ಬಿಡದಿರಲಿ       ✍️ಮಾಧವ ಅಂಜಾರು 🌷

ನಿಮ್ಮ ಜುಟ್ಟು (ಕವನ -46)

ಯಾರೇನೇ ಹೇಳಿದರೂ ಯಾರೇನೇ ಮಾಡಿದರೂ ನಿಮ್ಮ ಸದ್ಗುಣಗಳನು ಬದಲಿಸಬೇಡಿ, ಯಾರೇನೇ ಹೀಯಾಳಿಸಿದರೂ ಯಾರೇನೇ ಮುನಿದರೂ ನಿಮ್ಮ ಜುಟ್ಟನು ಮಾತ್ರ ಅವರ ಕೈಲಿ ಕೊಡಬೇಡಿ ಯಾರಾದರು ಪ್ರೀತಿಸಿದರೆ ಯಾರಾದರೂ ಗೌರವಿಸಿದರೆ ನಿಮ್ಮ ಪ್ರತಿಕ್ರಿಯೆ ಮಾತ್ರ ಸರಿಯಾಗಿ ಇದ್ದಿರಲಿ         ✍️ಮಾಧವ ಅಂಜಾರು 🌷