Posts

ಏಳು ಸಾಗರದಾಚೆಗೆ

ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ ನೂರಾರು ಆಸೆಗಳಿಗು ನಾ ನಡೆದು ಬಂದ ನಡೆಗೂ ಸಿಗೋದಿಲ್ಲವೇ ಕೊನೆಗೂ ಎನ ಪ್ರೀತಿ ಮಾತಿಗು ಬೆಲೆಯು ಓ ಗೆಳತಿ , ಮರೆಯಬೇಡ ಎನ್ನ ತುಂಬಾ ಪ್ರೀತಿಸುವೆ ನಿನ್ನ ಬಿಸಿಲಲ್ಲೂ ಮರಳಲ್ಲೂ ಅನಿವಾರ್ಯತೆಯ   ಪಯಣ ಆವರಿಸಿತು ಹೃದಯವು ದುಗುಡದ ಭಯವು ಅಲುಗಾಡದೆ ಇರಬಯಸಿದೆ ಪ್ರೀತಿ ಅಕ್ಕರೆಯ ನೆನೆದು ಸವಿಸಕ್ಕರೆಯ ನೀಡಲು ದಿನವೆಲ್ಲಾ ದುಡಿದು ಸಾವಿರ ಕನಸಿನ , ಒಂದು ಅರಮನೆಯ ಕಟ್ಟಲೆಂದು ಇನ್ನಿರುವ ಬದುಕು ಸಂತೋಷವಾಗಿರಲೆಂದು ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ ಓಡೋಡಿ ಬರಲು ಬಯಕೆ , ತಬ್ಬಿ ಕುಣಿಯುವ ಹರುಷಕೆ ಕಾಡು ನೋಡುತ್ತಿರುವೆ ಆ ದಿನವನು ಬೇಗ ನಡೆಯಲಿ ಹರಕೆ ಓ ನನ್ನ ನಲ್ಲೆ ನಾನಿರುವೆ ಇಲ್ಲೆ ನನ ಮಾತು ಕೇಳೆ ... ಮುದ್ದಾಗಿ ನಿನ್ನ ಸದ್ದಾಗದೆ ಬಂದು ಸೇರುವೆ ....  ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ                                   ...

ನಿನ್ನ ಬರುವಿಕೆ

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಕಾಲುದಾರಿಯ ಸ್ವಚ್ಚವಾಗಿಸಿ ಕಲ್ಲು ಮುಳ್ಳನು ದೂರ ಸರಿಸಿ ಸುಖ ಪಯಣ ಬಯಸುತಿಹೆ ನಿನ್ನ ಬಾಳಲಿ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಕೈ ತುಂಬಾ ಹೂ ಗುಚ್ಛ ಅಂಗಳದಿ ರಂಗೋಲಿ ಎದೆ ತುಂಬಾ ಪ್ರೀತಿ ಭರಿಸಿ ನಿನ್ನ ಸ್ವಾಗತಿಸುವೆ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಮನೆತುಂಬಾ ಸಂತೋಷದ ಕಾಲ್ಗೆಜ್ಜೆ ದನಿಯ ಪಸರಿಸಿ ಎನ್ನ ಒಡಲಲಿ ಸೇರು ಬಾ ಓ ನನ್ನ ಗೆಳತಿ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಹಾಯಾಗಿರಲಿ ನಮ್ಮ ಬದುಕು ನನಸಾಗಲಿ ಕನಸುಗಳು ಸೇರಿ ನಡೆಯೋಣ ಬಾಳರಥದ ದಾರಿಯಲಿ ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ                      - ಅಂಜಾರು ಮಾಧವ ನಾಯ್ಕ್

ಸಾವಿರ ಜನುಮ

ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ ..  ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ  ಗಲ್ಲದ ಮೇಲೆ ಕೈಯನಿಟ್ಟು  ಕೈಯ ತುಂಬಾ ಬಳೆಯ ಧರಿಸಿ  ಪಾತರಗಿತ್ತಿಯ ಚಲನೆ ನಿನ್ನಲಿ  ಹುಬ್ಬನು ಏರಿಸಿ ನೋಡುವ ರೀತಿ  ನಿನ್ನ ನೋಟಕೆ ಬಲಿಯಾದೆ ಓ ಪ್ರಿಯೇ  ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ ..  ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ  ಹಗಲಿರುಳು ನಿನ್ನದೇ ನೆನಪು  ಹೃದಯದಿ ಈ ಸ್ನೇಹ ನಮಗೂ  ಸುಖವಾಗಲಿ ನಮ್ಮಿ ಮಿಲನ  ಬಾಳೊಂದು ಸುಂದರ ಬದುಕು  ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ ..  ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ                        - ಅಂಜಾರು ಮಾಧವ ನಾಯ್ಕ್ 

ಹೇ ದೇವನೇ ....

ವಜ್ರ ವೈಡುರ್ಯವಿಲ್ಲ ,ನನ್ನಲಿ ನಿನಗೆ ಕಿರೀಟ ಧಾರಣೆ ಮಾಡಲು ಘಂಟೆ ತಂಬೂರಿ ಇಲ್ಲ , ನನ್ನಲಿ ನಿನ್ನ ಪೂಜೆ ಮಾಡಲು ಹೂ ಸಿಂಗಾರಗಳಿಲ್ಲ , ನನ್ನಲಿ ನಿನ್ನ ಸಿಂಗಾರ ಮಾಡಲು ಜೇನು ತುಪ್ಪದ ಹನಿ ಇಲ್ಲ, ನನ್ನಲಿ ನಿನಗೆ ಭೋಗ ನೀಡಲು ಪಲ್ಲಕಿ ತೋರಣ ಇಲ್ಲ , ನನ್ನಲಿ ನಿನ್ನ ಹೊತ್ತು ನಡೆಯಲು                     - ಅಂಜಾರು ಮಾಧವ ನಾಯ್ಕ್

ನಾಚಿಕೆ ದಾಯೆ..?

ಮಲ್ಲಿಗೆ ಪೂವೇ... ಈಯೇ ನಿಕ್ಕ್ ಈತ್ ನಾಚಿಕೆ ದಾಯೆ .. ಏತೊಂಜಿ ನಿನ್ನ ಮಾಯೇ ... ಎನ್ನ ತೆಲಿಕೆ ಪೂರ ಈಯೆ ..! ಪೊರ್ಲು, ಕೇದಗೆ ಪೂವೇ ಈಯೆ .. ನಿನ್ನ ಮೋಕೆ ಪರಿಮಳದ  ಮಾಯೆ ತೂವಂದೆ ಪೋಪ ಈಯೆ ನಿಕ್ಕ್ ಈತ್ ನಾಚಿಕೆ ದಾಯೆ .. ಮಲ್ಲಿಗೆ ಪೂವೇ... ಈಯೇ ನಿಕ್ಕ್ ಈತ್ ನಾಚಿಕೆ ದಾಯೆ .. ಏತೊಂಜಿ ನಿನ್ನ ಮಾಯೇ ... ಎನ್ನ ತೆಲಿಕೆ ಪೂರ ಈಯೆ ..! ನಿನ್ನ ಮಿತ್ತೆಂಕ್ ಮೋಕೆ ದಾಯೆ ಎನ ಉಡಲ್ ಪೂರ ಈಯೆ .. ಒರ ತೂದ್ ಪೋಲ ಈಯೆ ನಿಕ್ಕ್ ಈತ್ ನಾಚಿಕೆ ದಾಯೆ .. ಮಲ್ಲಿಗೆ ಪೂವೇ... ಈಯೇ ನಿಕ್ಕ್ ಈತ್ ನಾಚಿಕೆ ದಾಯೆ .. ಏತೊಂಜಿ ನಿನ್ನ ಮಾಯೇ ... ಎನ್ನ ತೆಲಿಕೆ ಪೂರ ಈಯೆ ..!         -ಅಂಜಾರು ಮಾಧವ ನಾಯ್ಕ್

ಪುದರ್

ಮೋಕೆದುಡಲ್ ನಿಕ್ಕಾದೆ ಯಾನುಲ್ಲೆ ಪೂ ಮನಸ್ ಕಾತೊಂದುಲ್ಲೆ ನಿನ್ನ ಮೋಹ ಈ ಎನ್ನ ಬಾಳ್ ಮೋಕೆದ ಬಳ್ಳಿ ನಿನ್ನ ನೆಂಪು ತಪ್ಪಂದಿ ಪಾತೆರ ಸಂಸಾರೋದ ಕಣ್ಣ್ ಮೋಕೆದ ಸೆಲೆ

ಕಣ್ಣ ತುಂಬಾ ನಿನ್ನ ನೋಟ...

ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ನಿನ್ನೀ ತುಳುಕು ನಡೆಯು.....  ಎನ್ನ... ಹೃದಯ ಸ್ಪರ್ಶ ಮಾಡುತಿದೆ.... ನಿನ್ನ ರೆಪ್ಪೆ ನೋಟ ಅಂದ ... ಉಸಿರ ಚಲನೆ ಆಗುತಿದೆ .. ಕಣ್ಣ ತುಂಬಾ ನಿನ್ನ ನೋಟ... ರಾತ್ರಿ ಹಗಲೆಲ್ಲಾ ಕಾಡುತಿದೆ .. ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ತಬ್ಬಿಕೋ ಬಾ...  ಮುದ್ದಿಸೂ ನನ್ನ ...  ಈ ಜೀವ ನಿನಗಾಗಿ ಕಾಯುತಿದೆ.....  ಒಪ್ಪಿಕೋ ಗೆಳತೀ ... ನನ್ನೀ ಪ್ರೀತಿಯ ...  ಅಪ್ಪಿಕೋ ಗೆಳತೀ ... ಈ ಪ್ರೇಮಿಯ ..  ಮನ ನೋಯುವುದು  .. ನೀ ಒಲ್ಲೆ ಅಂದರೇ ......  ತಿಳಿದು ಸೇರಿಕೋ ... ಎನ ಬಂಗಾರ ...  ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ಪುಟ್ಟ  ಹೃದಯ...  ತಡೆಯಲಾರದು... ಸ್ವಚ್ಛ ಮನಸು .... ತಾಳಲಾರದು .. ನಿನ್ನ ಮುದ್ದು ಮಾಡೋ ... ಆಸೆ ಎನಗೆ .. ಮುತ್ತಾಗಿ ಬಾ ... ಏಳು ಜನುಮಕೂ .. ನಿನ್ನ ಬಿಡದೇ ... ಸುತ್ತಿ ಕಟ್ಟಿ... ಮುದ್ದಾಡಿ ಪಾಲಿಸುವೆ ... ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿ...