ಅಪರಿಚಿತ
ಅಪರಿಚಿತ ********* ಅಮ್ಮ... ಅಪ್ಪಾ.. ನನಗೆ ಉಡುಪಿಯವರೆಗೆ ಹೋಗ್ಲಿಕ್ಕಿದೆ ನಾನು ನನ್ನ ಮಕ್ಕಳು ಮತ್ತು ಮಡದಿಯೊಂದಿಗೆ ಹೋಗಿ ಬರುತ್ತೇನೆ, ಬರುವಾಗ ಸ್ವಲ್ಪ ತಡವಾಗಬಹುದು. ಏನಿದ್ದರೂ ನಿಮಗೆ ಕರೆ ಮಾಡುತ್ತೇನೆ ಎಂದು ಹೊರಟುಬಿಟ್ಟ ಸುಧೀರ, ತನ್ನ ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡೋಣ, ಹೂ, ಹಣ್ಣು ಕಾಯಿಯೊಂದಿಗೆ ನಡೆದರು. ವಿಷ್ಣು ಮತ್ತು ವೃದ್ಧಿ ಅಪ್ಪಾ ನನಗೆ ಬರುವಾಗ ಚೆಂದದ ಆಟೋಪಕರಣ ಬೇಕೆಂದು ಹೇಳತೊಡಗಿದರು ಮಕ್ಕಳೇ ಬನ್ನಿ ಹೋಗುವ ವಾಹನದಲ್ಲಿ ಕುಳಿತುಕೊಳ್ಳಿ ಮತ್ತೆ ಹೇಳುತ್ತೇನೆ , ನನ್ನದೊಂದು ಷರತ್ತು ನೀವು ಹೇಳಿದ ಹಾಗೆ ಕೇಳಿದರೆ ಮಾತ್ರ ನಿಮಗೆ ಬರುವಾಗ ಆಟದ ಸಾಮಾನು ಇಲ್ಲವಾದರೆ ಇಲ್ಲ, ಏನದು ಷರತ್ತು ಕೇಳಿಯೇ ಬಿಟ್ಟರು. ದೇವಸ್ಥಾನಕ್ಕೆ ಹೋಗುತ್ತೇವೆ ದೇವರಲ್ಲಿ ನೀವು ಕಣ್ಣುಮುಚ್ಚಿ ಧ್ಯಾನ ಮಾಡುತ್ತ ಈ ವರೆಗೂ ಸಿಗದ ವಸ್ತು ನನಗೆ ಕೊಡಿಸು ಎಂದು ದೇವರಲ್ಲಿ ಕೇಳಿಕೊಳ್ಳುವಂತೆ ಹೇಳಿಬಿಟ್ಟ ಸುಧೀರ. ಹಾಗೆಯೇ ಮಾಡುತ್ತೇವೆ ಹೇಳಿರುವ ಮಕ್ಕಳು ದೇವಸ್ಥಾನಕ್ಕೆ ಬಂದಂತೆ ಕೈ ಕಾಲು ತೊಳೆದು ಹಣ್ಣುಕಾಯಿಯನ್ನು ಶುಭ್ರವಾಗಿಸಿ ದೇವರೇ ನಮ್ಮನ್ನು ಕಾಪಾಡು, ಹೇಳುತ್ತಾ ಮೆಟ್ಟಿಲನ್ನು ಏರಿ ದೇವಸ್ಥಾನದ ಒಳಗೆ ಹೋಗುತ್ತಲೇ ತಲೆ ಬಾಗಿ ನಮಸ್ಕರಿಸಿ ಗುಡಿಯಲ್ಲಿ ಕೇಳಿ ಬರುತಿದ್ದ ಘಂಟಾ ನಾದ, ಮತ್ತು ಶ್ರೀ ...