ಅಪರಿಚಿತ
ಅಪರಿಚಿತ
*********
ಅಮ್ಮ... ಅಪ್ಪಾ.. ನನಗೆ ಉಡುಪಿಯವರೆಗೆ ಹೋಗ್ಲಿಕ್ಕಿದೆ ನಾನು ನನ್ನ ಮಕ್ಕಳು ಮತ್ತು ಮಡದಿಯೊಂದಿಗೆ ಹೋಗಿ ಬರುತ್ತೇನೆ, ಬರುವಾಗ ಸ್ವಲ್ಪ ತಡವಾಗಬಹುದು. ಏನಿದ್ದರೂ ನಿಮಗೆ ಕರೆ ಮಾಡುತ್ತೇನೆ ಎಂದು ಹೊರಟುಬಿಟ್ಟ ಸುಧೀರ, ತನ್ನ ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡೋಣ, ಹೂ, ಹಣ್ಣು ಕಾಯಿಯೊಂದಿಗೆ ನಡೆದರು. ವಿಷ್ಣು ಮತ್ತು ವೃದ್ಧಿ ಅಪ್ಪಾ ನನಗೆ ಬರುವಾಗ ಚೆಂದದ ಆಟೋಪಕರಣ ಬೇಕೆಂದು ಹೇಳತೊಡಗಿದರು ಮಕ್ಕಳೇ ಬನ್ನಿ ಹೋಗುವ ವಾಹನದಲ್ಲಿ ಕುಳಿತುಕೊಳ್ಳಿ ಮತ್ತೆ ಹೇಳುತ್ತೇನೆ , ನನ್ನದೊಂದು ಷರತ್ತು ನೀವು ಹೇಳಿದ ಹಾಗೆ ಕೇಳಿದರೆ ಮಾತ್ರ ನಿಮಗೆ ಬರುವಾಗ ಆಟದ ಸಾಮಾನು ಇಲ್ಲವಾದರೆ ಇಲ್ಲ, ಏನದು ಷರತ್ತು ಕೇಳಿಯೇ ಬಿಟ್ಟರು. ದೇವಸ್ಥಾನಕ್ಕೆ ಹೋಗುತ್ತೇವೆ ದೇವರಲ್ಲಿ ನೀವು ಕಣ್ಣುಮುಚ್ಚಿ ಧ್ಯಾನ ಮಾಡುತ್ತ ಈ ವರೆಗೂ ಸಿಗದ ವಸ್ತು ನನಗೆ ಕೊಡಿಸು ಎಂದು ದೇವರಲ್ಲಿ ಕೇಳಿಕೊಳ್ಳುವಂತೆ ಹೇಳಿಬಿಟ್ಟ ಸುಧೀರ.
ಹಾಗೆಯೇ ಮಾಡುತ್ತೇವೆ ಹೇಳಿರುವ ಮಕ್ಕಳು ದೇವಸ್ಥಾನಕ್ಕೆ ಬಂದಂತೆ ಕೈ ಕಾಲು ತೊಳೆದು ಹಣ್ಣುಕಾಯಿಯನ್ನು ಶುಭ್ರವಾಗಿಸಿ ದೇವರೇ ನಮ್ಮನ್ನು ಕಾಪಾಡು, ಹೇಳುತ್ತಾ ಮೆಟ್ಟಿಲನ್ನು ಏರಿ ದೇವಸ್ಥಾನದ ಒಳಗೆ ಹೋಗುತ್ತಲೇ ತಲೆ ಬಾಗಿ ನಮಸ್ಕರಿಸಿ ಗುಡಿಯಲ್ಲಿ ಕೇಳಿ ಬರುತಿದ್ದ ಘಂಟಾ ನಾದ, ಮತ್ತು ಶ್ರೀ ದೇವರ ನಾಮ ಶ್ರುತಿ ಭಕ್ತಿ ಪರವಶರಾದ ಸುಧೀರನ ಸಂಸಾರ. ಪ್ರಾರ್ಥನೆ ಮಾಡಿ ಅಡಬಿದ್ದು ನಮ್ಮ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿ ನಿನ್ನ ಕೈಲಿ ಕಾಪಾಡು, ಹೇಳುತ್ತಾ ದೇವಸ್ಥಾನದ ಹೊರಗೆ ನಡೆದು ಮುಂದಿನ ಪಯಣಕ್ಕೆ ತಯಾರಾದರು. ದೇವರಲ್ಲಿ ಏನನ್ನ ಕೇಳಿದಿರಿ ಪ್ರಾರ್ಥನೆ ಮಾಡಿದೆ ನನಗೆ ಏನು ಕೇಳಬೇಕು ಎಂದು ಗೊತ್ತಾಗಲಿಲ್ಲ ಎಂದ ಮಕ್ಕಳ ಮಾತಿಗೆ ಸುಧಿರನ ನಗು, ಹಾಗಾದರೆ ನಾವು ಎಲ್ಲರೂ ಸೇರಿ ಶ್ರೀ ದೇವರ ನಾಮವನ್ನು ಹೇಳೋಣ ಮತ್ತೆ ನೋಡೋಣ ಅಂದ ಮಾತ್ರಕೆ ಓಂ ನಮಃ ಹೇಳಿಯೇ ಬಿಟ್ಟರು. ತನ್ನ ಪಯಣದಲ್ಲಿ ಖುಷಿಯಾಗಿ ಉಡುಪಿಗೆ ತಲುಪಿದ ಸುಧೀರ, ಇರುವ ಕೆಲಸಗಳನ್ನು ಮಾಡುತ್ತ ಕೊನೆಗೆ ಸುಧೀರನ ಮಡದಿ ಸುಮಿತ್ರಾ ನೋಡಿ ನನಗೆ ಇವತ್ತು ಸ್ವಲ್ಪ ಆರಾಮಾಗಿ ಕುಳಿತುಕೊಳ್ಳಬೇಕೆಂದು ಹೇಳಿದ್ದಕ್ಕೆ ಹತ್ತಿರದ ಉದ್ಯಾನಕ್ಕೆ ಹೊರಟರು.
ತಂಪಾದ ಗಾಳಿ, ಶಾಂತ ವಾತಾವರಣ, ಮಕ್ಕಳು ತನ್ನ ಆಟಗಳಲ್ಲಿ ತಲ್ಲಿನರಾದಂತೆ ಸುಧೀರ ಮತ್ತು ಸುಮಿತ್ರಾ ತಮ್ಮ ಜೀವನದ ಆಗು ಹೋಗುಗಳ ಬಗ್ಗೆ ನೆನಪಿಸುತ್ತ ಇನ್ನು ಜೋಕಾಲಿ ಆಡೋಣವೆಂದು ಹೇಳುವ ಹೊತ್ತಿಗೆ, ದೂರದಲ್ಲೇ ನೋಡುತಿದ್ದ ಅಪರಿಚಿತ ವ್ಯಕ್ತಿ, ಸಾಧಾರಣ ಉಡುಗೆ ತೊಡುಗೆ, ಕೈಯಲೊಂದು ಚೀಲ ಮತ್ತು ಹೆಗಲ ಮೇಲೆ ಶಾಲು ಹಾಕಿದ್ದು, ಮುಖದಲ್ಲಿ ಹೊಳಪನ್ನು ಹೊಂದಿರುವ ಆ ವ್ಯಕ್ತಿಯನ್ನು ನೋಡಿದಂತೆ ಅದೇನೂ ಶಕ್ತಿ ನಮ್ಮ ಮುಂದಿದೆ ಅನ್ನುವ ಭಾವನೆ ಸುಧೀರನಿಗೆ ಮತ್ತು ಸುಮಿತ್ರಾ ಳಿಗೆ, ಇನ್ನೇನು ನಾವು ಹೋಗೋಣ ಎಂದು ಹೇಳುವಾಗಲೇ ಹತ್ತಿರಕ್ಕೆ ಬಂದ ಅಪರಿಚಿತ ನಿಮ್ಮಲ್ಲಿ ಬಹಳಷ್ಟು ಕೆಲಸವಾಗಬೇಕಿದೆ ಈ ದೇಶಕ್ಕೆ, ಮುಂದಿನ ದಿನಗಳಲ್ಲಿ ನಿಮ್ಮಂತಹ ಜನರು ಹೆಚ್ಚಾಗಿ ಜನಿಸಬೇಕು, ನೀನು ಮಾಡುವ ಕೆಲಸಕ್ಕೆ ಒಳಿತಾಗಲಿ ಎಂದು ಹೇಳಿದ ಅಪರಿಚಿತನ ಮಾತಿಗೆ ಆಯ್ತು ಹೇಳಿದಂತೆ ಆಗಲಿ, ಆದರೆ ನೀವ್ಯಾರು ಎಂದು ಕೇಳಿದ ಪ್ರಶ್ನೆಗೆ, ನಿನಗೆ ಬೇಕಾಗಿಲ್ಲ ನಾನ್ಯಾರೆಂದು ನಿನಗೆ ಮುಂದಿನ ದಿನದಲ್ಲಿ ತಿಳಿಯುತ್ತದೆ ಎಂದು ಹೇಳಿದ ಅಪರಿಚಿತ ಆ ಕಡೆ ನಡೆದು ಬಿಟ್ಟರು .
ಮನದಲ್ಲಿ ಸಾವಿರಾರು ಪ್ರಶ್ನೆ ಹೆಚ್ಚಿಸಿದ ಅಪರಿಚಿತನನ್ನು ನೆನಪಿಸುತ್ತ ಹಿಂತಿರುಗಿದ ಸುಧೀರ. ಸಿಕ್ಕಿದ ವ್ಯಕ್ತಿ ಆ ದೇವರೇ ಬಲ್ಲ, ಬದುಕಿನ ಎಲ್ಲಾ ಸಮಯ ಸಂಧರ್ಭ ನಿನ್ನದೇ ಭಗವಂತ ನಿನ್ನ ಕರುಣೆ ಇಲ್ಲದೇ ನಾವೇನು ಮಾಡಲು ಸಾಧ್ಯವಿಲ್ಲ ಕೊಡುವ ಪ್ರತೀ ನೋವು ನಲಿವು ನಿನ್ನದೇ ಎನ್ನುತ್ತಾ ನಿಟ್ಟುಸಿರು ಬಿಟ್ಟ.
✍️ಮಾಧವ ಕೆ ಅಂಜಾರು
Comments
Post a Comment