ಪ್ರತಿಫಲ
ನಿನ್ನೊಳಿತಿನ ಕೆಲಸಕೆ
ಸಿಗುವುದು ಪ್ರತಿಫಲ
ಇಂದಲ್ಲ ನಾಳೆಯಾದರೂ
ಅದುವೇ ನಿನ್ನ ಕರ್ಮ ಫಲ
ನಿನ್ನೊಳಗಿನ ಪಾಪಕೆ
ಸಿಗುವುದು ಪ್ರತಿಫಲ
ಇಂದಲ್ಲ ನಾಳೆಯಾದರೂ
ಅದುವೇ ನಿನ್ನ ಅಧರ್ಮ ಫಲ
ಹುಟ್ಟಿರುವ ಮಾತ್ರಕೆ
ಸಿಗದು ನಿನಗೆ ಪುಣ್ಯಫಲ
ನೀನಿಟ್ಟಿರುವ ಹೆಜ್ಜೆ ಹೆಜ್ಜೆಗೂ
ಕಟ್ಟಿಕೊಳ್ಳುವೆ ಪ್ರತಿಫಲ.
✍️ಮಾಧವ. ಕೆ ಅಂಜಾರು
Comments
Post a Comment