ಸ್ನೇಹದ ಬೆಸುಗೆ

ಕಾಣುವ ಕನಸುಗಳು 
ನಿಲ್ಲದಿರಲಿ 
ನನಸಾದರೂ 
ನನಸಾಗದಿದ್ದರೂ 

ಮಿಡಿಯುವ ಮನಸುಗಳು 
ಕಡಿಮೆಯಾಗದಿರಲಿ 
ಬಡವನಿದ್ದರೂ 
ಸಿರಿವಂತನಿದ್ದರೂ 

ಸ್ನೇಹದ ಬೆಸುಗೆ 
ಕರಗದಿರಲಿ 
ದೂರವಿದ್ದರೂ 
ಹತ್ತಿರವಿದ್ದರೂ 
       ✍️ಮಾಧವ. ಕೆ. ಅಂಜಾರು 




Comments