ಶ್ರೀ ರಾಮಚಂದ್ರ

ಉಳಿಸುವುದು ನೀನೇ 
ಅಳಿಸುವುದು ನೀನೇ 
ಮೂಳೆ ಮಾಂಸದ ದೇಹಕೆ 
ಉಸಿರಾಗಿರುವುದೇ ನೀನೇ 
ಹರೇ ಕೃಷ್ಣ ಹರೇ ರಾಮ 
ಸಕಲ ಜೀವ ಸಂಕುಲದ 
ಪಾಲಕನೇ ನೀನೇ 

ಸೋಲಿಸುವುದು ನೀನೇ
ಗೆಲುವ ನೀಡುವುದು ನೀನೇ 
ಹೊಸ ಕನಸುಗಳ ಕೊಡುತ್ತಾ 
ಬೆಳೆಸುವುದು ನೀನೇ 
ಓಂ ಶಿವ, ಜಗದೊಡೆಯನೇ 
ಪ್ರತೀ ಕ್ಷಣವೂ 
ನಿನ್ನ ಭಜಿಸುವೆ ದೇವನೇ 


ಸುಖವೂ ನೀನೇ 
ದುಃಖವೂ ನೀನೇ 
ನನ್ನ ಬದುಕಿನ ತರಗತಿಗೆ 
ಗುರುವೇ ನೀನೇ 
ಜಯ ಜಯ ಜಯ ಜಯ 
ಶ್ರೀ ರಾಮಚಂದ್ರ 
ಜಯ ಜಯ ಜಯ ಜಯ 
ಶ್ರೀ ಕೃಷ್ಣ ದೇವ 
  ✍️ಮಾಧವ. ಕೆ ಅಂಜಾರು 






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ