ಜಯನಿನ್ನದೇ

ಆಡುವ ಮಾತಿನೊಳಗೆ 
ಕೊಡುವ ತುತ್ತಿನೊಳಗೆ 
ನಿನ್ನ ಮುತ್ತಿನೊಳಗೆ 
ಇರದಿರಲಿ ಸಂಶಯ 

ಕಾಣುವ ಕನಸಿನೊಳಗೆ 
ಇರುವ ಗುರಿಯೊಳಗೆ 
ಮಾಡುವ ದಾನದೊಳಗೆ 
ಬಾರದಿರಲಿ ಸಂಶಯ 

ಇಂದಿಗೂ ನಾಳೆಗೂ 
ಭರವಸೆಯ ಹೆಜ್ಜೆಯೊಳು 
ನಡೆಯುತ್ತಿರು ಎಂದಿಗೂ 
ಜಯನಿನ್ನದೇ ನಿಶ್ಚಯ 
       ✍️ಮಾಧವ. ಕೆ ಅಂಜಾರು 

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ