Posts

Showing posts from March, 2019

ಮೊಸಳೆ ಕಣ್ಣೀರು

ಮೊಸಳೆ ಕಣ್ಣೀರು ಹಾಕೋರಿಗೆ ಸೆಗಣಿ ನೀರು ಕುಡಿಸಿ ನಿಜ ಕಣ್ಣೀರು ಸುರಿಸೋರಿಗೆ ಕಣ್ಣ ನೀರ ಒರೆಸಿ ಕಪಟ ಕಣ್ಣೀರು ಸುರಿಸೋರಿಗೆ ಚರಂಡಿ ನೀರು ಕುಡಿಸಿ ಸತ್ಯ ತುಂಬಿದ ಕಣ್ಣೀರ ಹನಿಗೆ ಬೆಲೆಕೊಟ್ಟು ಜಯಕೊಡಿಸಿ        -ಮಾಧವ ಅಂಜಾರು

ಪಕ್ಷದ ಅನುಯಾಯಿಗಳು

ಪಕ್ಷದ  ಅನುಯಾಯಿಗಳು ಅಕ್ಷರಸ್ತರಾಗಿದ್ದರೂ ವಿವೇಚನಾಶಕ್ತಿ ಹೊಂದಿರದಿದ್ದರೆ ..! ಪಕ್ಷ ತಪ್ಪು ಮಾಡಿದ್ದರೂ ...! ಸರಿಯೆಂದೇ ವಾದಿಸುತ್ತಾರೆ ಅಂತವರು  ದೇಶಕ್ಕೆ ಕೆಡುಕು ..! ಕಣ್ಣಿದ್ದೂ ಕುರುಡರಂತೆ ನಟಿಸಿ ಬಾಳುವವರು ಕಿವಿಯಿದ್ದೂ ಕಿವುಡರಂತೆ ವರ್ತಿಸುವವರು ..! ಊರನ್ನು ಆಳಿದರೆ ನಿಮ್ಮ ಪಂಚೇಂದ್ರಿಯವನ್ನು ಮುಚ್ಚಿಬಿಡುತ್ತಾರೆ ..! ಜಾಗ್ರತೆ .              -ಮಾಧವ ಅಂಜಾರು

ಅವಿವೇಕಿಗಳು

ಅವಿವೇಕಿಗಳು ರಾಜಕೀಯಕ್ಕೆ  ಸೇರಿ ಅಧಿಕಾರ ಪಡೆದರೆ  ಊರು ತುಂಬಾ ಅವಿವೇಕಿಗಳನ್ನು ಪೋಷಿಸುತ್ತಾರೆ ...! ವಿವೇಕಿಗಳು ರಾಜಕೀಯದಲ್ಲಿ ಅಧಿಕಾರ ಪಡೆದರೆ ಪ್ರಪಂಚದಲ್ಲೆಲ್ಲಾ ದೇಶಭಕ್ತರನ್ನು ಹೆಚ್ಚಿಸುತ್ತಾರೆ ..!             - ಮಾಧವ ಅಂಜಾರು  

ಹುಚ್ಚಾಗಬೇಡಿ

ಹುಚ್ಚಾಗಬೇಡಿ ಪಕ್ಷಗಳ ದೊಂಬರಾಟಕೆ ಸಹನೆ ಕಳೆದುಕೊಳ್ಳಬೇಡಿ ಪಕ್ಷಗಳ ಅವಿವೇಕತೆಗೆ ..! ಬೇಕು ನಮಗೆ ದೇಶ ಒಳ್ಳೆಯ  ನಾಯಕ  ನಮಗೆ ಮುಖ್ಯ ಪಕ್ಷದ ಬಗ್ಗೆ ಒಲವು ಬಿಡಿ ಮೊದಲು ದೇಶವೆಂಬ ಛಲ ಹಿಡಿ ರಾಜನೊಬ್ಬ ಚೆನ್ನಾಗಿದ್ದರೆ ..! ಪ್ರಜೆಗಳೆಲ್ಲಾ ಚಿಂತೆ ಬಿಡಿ ನಿಮ್ಮ ಒಂದು ಮತದ  ಬೆಲೆ ಚಿತ್ರಣವೇ ಬದಲಿಸಬಹುದು ನೋಡಿ ..! ಈ ಸಲದ ಮತದಾನಕ್ಕೆ ಯೋಚನೆ ಮಾಡೊದನು ಬಿಡಿ ದೇಶಾಭಿಮಾನಿಗಳೆಲ್ಲಾ ಒಂದಾಗಿ ದೇಶದ್ರೋಹಿಗಳನ್ನು ಕಿತ್ತು ಹಾಕಿ ..!                      -ಮಾಧವ ಅಂಜಾರು

ತಿಂಗಳ ಬೆಳಕನು

ತಿಂಗಳ ಬೆಳಕನು ನೋಡಲು ಅದೆಷ್ಟು ಆತುರ ಆ ಚಂದಿರನ ಕಂಡಾಗಲೇ ಮನಸೆಲ್ಲಾ  ಹಗುರ , ತಂಬಿಗೆ ನೀರನು ಕುಡಿಯಲು ಅದೆಷ್ಟು ಆತುರ ಹೊಟ್ಟೆತುಂಬಾ ಕುಡಿದಾಗ ದಣಿವಾರಿತು ಬೇಗ. ಇಂದಿನ ದಿನಗಳೆಲ್ಲಾ ಮೊಬೈಲುಗಳೇ ಚಂದಿರ ಹೊಟ್ಟೆ ಚುರುಗುಟ್ಟಿದರೂ ಬೇಡವೇ ಬೇಡ , ಆಹಾರ, ಬರ ಬರುತ್ತಲೇ ಹಾಳಾಗುತ್ತಿದೆ ಸಂಸಾರ ಕೆಲವೇ ವರುಷದಲ್ಲಿ ಇಲ್ಲವಾದೀತು ಸಂಸ್ಕಾರ ...!          - Madhavanjar ...👍

ಏನೂ ಇಲ್ಲದವನ ಕೈಲಿ

ಏನೂ ಇಲ್ಲದವನ ಕೈಲಿ ಬಂದು ಕೂಡಿತು ಕೋಟಿ ಕೋಟಿ ಹಣ ಅದಕ್ಕೆ ಕಾರಣ ದರಿದ್ರ ರಾಜಕಾರಣ...! ಏನೂ ಇಲ್ಲದವನ ಕೈಗೆ ಸಿಕ್ಕಿಯೇ ಬಿಟ್ಟಿತು ಮೂರು ಕೋಟಿ ಹಣ ಅದಕ್ಕೆ ಕಾರಣ ಒಲಿದ ಲಾಟರಿಯ ಹಣ ..!          - Madhavanjar ...👍            

ಯಾರಾದರೂ ನಿಮ್ಮಲ್ಲಿ

ಯಾರಾದರೂ ನಿಮ್ಮಲ್ಲಿ ದೇಶದ ಪ್ರಧಾನಿ ಯಾರಾಗಬೇಕೆಂದು ಕೇಳಿದರೆ ? ಯಾರಾದರೂ ಆಗಲಿ ನಮಗೇನು ಹೇಳಬೇಡಿ ....! ಒಂದು ವೇಳೆ ಅಪ್ಪಿ ತಪ್ಪಿ ಉಪಯೋಗಕ್ಕೆ ಬಾರದವರು ನಮ್ಮ ದೇಶದ ಪ್ರಧಾನಿಯಾದರೆ ..! ನಮ್ಮ ದೇಶವಂತೂ ಉದ್ಧಾರವೇ ಆಗೋದಿಲ್ಲ ಅಂತ ಹೇಳಲೇಬೇಡಿ ..!        - Madhavanjar ...👍       

ಸಿಕ್ಕ ಸಿಕ್ಕವರಿಗೆ

ಸಿಕ್ಕ ಸಿಕ್ಕವರಿಗೆ ಪಂಗನಾಮ ಹಾಕಿ ಕೂಡಿಟ್ಟ ಆಸ್ತಿ ....! ಅಕ್ಕ ಪಕ್ಕದವರಿಗೆ   ಕರೆದು ತೋರಿಸಿದ ಇದೆಲ್ಲಾ  ನನ್ನ ಆಸ್ತಿ ...! ವಂಚನೆ ಮಾಡುತ್ತಲೇ ... ಇನ್ನಷ್ಟು ಕೂಡಿಟ್ಟ .. ಆಸ್ತಿಯನ್ನು ಜಾಸ್ತಿ ..! ಆಸ್ತಿ ಜಾಸ್ತಿಯಾಯಿತು ಆದರೇನು ಬಂತು ಅವನು ಬದುಕಲಿಲ್ಲ ಜಾಸ್ತಿ ...!              -ಮಾಧವ ಅಂಜಾರು

ಸುಳ್ಳು ಹೇಳಿಯೇ

ಸುಳ್ಳು ಹೇಳಿಯೇ ಸಂಪಾದನೆ ಅವನದು ಮನೆ ತುಂಬಾ ಚಿನ್ನ ಬೆಳ್ಳಿಯದೇ ಖಜಾನೆ ಅವನದು , ಬೆಲ್ಲ ಮಾತಲೇ ಸಂಪಾದನೆ ಅವನದು ಮನೆತುಂಬಾ ಮೃಷ್ಟಾನ್ನ ಭೋಜನದ ಬೀಡು ಅವನದು ಸುಂದರ ಉಡುಗೆ ತೊಟ್ಟು ಸಂಪಾದನೆ ಅವನದು ಮನೆತುಂಬಾ ಸೌಂದರ್ಯ ಲೋಕವೇ ಇದ್ದಂತಿಹುದು ಅವನದು ಅಂತೂ ಸುಳ್ಳೇ ,,,, ಜೀವನವಾಯಿತು ಅವನದು ಮನೆತುಂಬಾ ಸುಳ್ಳಿನ ಗಿಡ ಬೆಳೆಸೋ ಕೆಲಸವೇ ಅವನದು ....           - ಮಾಧವ ಅಂಜಾರು

ಮನೆಯ ಮುಂದೆ

ಮನೆಯ ಮುಂದೆ ನಿಂತಿತ್ತು ಎರಡು ಕಾರು ದಣಿವಾಗಿ ಕಂಡೆ ಅವರ ಸೂರು ಸಿಗಲಿಲ್ಲ ಒಂದು ಲೋಟ ನೀರು ....! ಮನೆಯ ಮುಂದೆ ಬೆಳೆದಿತ್ತು ಹೂವ ತೋಟ ಕೇಳಿದೆ ಹೂವ ಹೆಸರು ಏದುಸಿರು ಬಿಟ್ಟರು ಜೋರು ...! ಮನೆಯ ಮುಂದೆ ಕಾಯೋಕೆ ಎರಡು ನಾಯಿ ಮನೆಯಂಗಳಕೆ ಕಾಲಿಟ್ಟರು ಮನೆಯೊಡೆಯ ತೆರೆಯಲಿಲ್ಲ ಬಾಯಿ ..! ವರುಷ ಕಳೆಯಿತು ಸುಮಾರು ಕಾಣಲಿಲ್ಲ ,ಕಾರು ಇರಲಿಲ್ಲ ಹೂವ ತೋಟ ಮನೇಲಿ ಕಾಣಸಿಗಲಿಲ್ಲ ಯಾರೂ ..!          -ಮಾಧವ ಅಂಜಾರು

ಕಳ್ಳನಾಗಲು

ಕಳ್ಳನಾಗಲು  ಪ್ರಯತ್ನಿಸಿದೆ ಕಳ್ಳನ ಒಳಗುಟ್ಟು ತಿಳಿಯಲು ಸುಳ್ಳನಾಗಲು  ಪ್ರಯತ್ನಿಸಿದೆ ಸುಳ್ಳನ ಸುಳಿ ಮಾತು ತಿಳಿಯಲು ಅಲ್ಪ ಸಮಯಕೆ ಕಳ್ಳನಾದರೂ , ಸುಳ್ಳನಾದರೂ ತಿಳಿಯಲೇ ಇಲ್ಲ ಅವರ ತಿರುಳು , ಅರ್ಥವಾಯಿತು ಕೊನೆಗೆ ಕಳ್ಳ , ಸುಳ್ಳನ- ಕಲೆ ಅವರ ಹುಟ್ಟುಗುಣದ ಕಲೆ .              -ಮಾಧವ ಅಂಜಾರು

ತಂದೆಯಾದವನ ಆಸೆ,

ತಂದೆಯಾದವನ ಆಸೆ, ಮಗ ದೊಡ್ಡವನಾಗಿ ನಮ್ಮನ್ನು ಸಾಕಲಿ ನಡೆಯಲಾಗದಿದ್ದರೆ ಕೈ ಹಿಡಿದು ನಡೆಸಲಿ , ವಿದ್ಯಾವಂತನಾಗಿ ಕೀರ್ತಿಯನು ಗಳಿಸಲಿ ಧೈರ್ಯದಲಿ  ಮುನ್ನಡೆಯೊ ಸಜ್ಜನನಾಗಿ ಬಾಳಲಿ ಮುಪ್ಪಿನ ಸಮಯದಲಿ ತುತ್ತು ಅನ್ನ ಉಣಿಸಲಿ ದೃಷ್ಟಿ ಹೀನವಾಗಿ ಪರದಾಟ ಮಾಡಿದರೆ ಪ್ರೀತಿಯಲಿ ಮಾತಾಡಲಿ ಕೋಲು ಹಿಡಿದು ನಡೆಯುವಾಗ ಹೆಗಲ ಕೊಟ್ಟು ನಡೆಸಲಿ ಪ್ರಾಣ ಪಕ್ಷಿ ಹಾರಿ ಹೋದರೆ ಕಣ್ಣೀರ ಸುರಿಸದಿರಲಿ ,,,, !                 -ಮಾಧವ ಅಂಜಾರು

ಅವಳಿಗೆ

ಅವಳಿಗೆ , ತನ್ನ ಗಂಡನ ತಲೆಗೂದಲು ಉದುರುತ್ತಿದೆ ಅನ್ನೋ ಚಿಂತೆ , ಗಂಡ - ಇನ್ನೇನು ? ಮದುವೆಯಾಗಿ ಎರಡು ಮಕ್ಕಳಾದ್ಮೇಲೆ ಇನ್ಯಾಕೆ ಚಿಂತೆ ಅಯ್ಯೋ ನನ್ನ ಗಂಡನ ಗಡ್ಡವು ಬಿಳಿ ಬಣ್ಣಕೆ ತಿರುಗುತಿರೊ ಚಿಂತೆ , ಗಂಡ -ಇನ್ನೇನು ಬಿಳಿಯಾದ ಮಾತ್ರಕೆ ನಾನು ಮಲ್ಯ ಆಗೋದಿಲ್ಲ ಬಿಡು ಚಿಂತೆ ,,                 -ಮಾಧವ ಅಂಜಾರು

ನಿಮ್ಮ ಓಟು

ನಿಮ್ಮ ಓಟು ನಾಯಕತ್ವ ಇರೋರಿಗೆ  ಹಾಕಿ ಬನ್ನಿ ಬರೀ ಕುರ್ಚಿಗಾಗಿ ಒದ್ದಾಡೋ ನಾಲಯಕರಿಗೆ ಕ್ಯಾಕರಿದು ಉಗಿದುಬನ್ನಿ ನಿಮ್ಮ ಓಟು ಸರಿಯಾದ ನಾಯಕನಿಗೆ ಹಾಕಿ ಬನ್ನಿ ಸಾವಿರದ  ನೋಟು ನಿಮ್ಮ ಕೈಲಿ ಕೊಡೋರು ಇದ್ದರೆ ಆ ದುಡ್ಡು ನಿನ್ನ ಅಪ್ಪನದೇ ಅನ್ನಿ ? ನಿಮ್ಮ ಓಟು ನಾಲಯಕನಿಗೆ ಹಾಕಿ ಬನ್ನಿ ಮತ್ತೆ ದಿನಾಲು ಹೆಕ್ಕಿ ತಿನ್ನಿ ನಿಮ್ಮ ಓಟು ನಿಮಗಾಗಿ ಹಾಕಿಬನ್ನಿ ಫಲಿತಾಂಶ ಬಂದಮೇಲೆ ನನ್ನದೇ ಪಕ್ಷವೆನ್ನಿ , ನಿಮ್ಮ ಓಟು ಸುಭದ್ರ ದೇಶಕ್ಕಾಗಿ ಹಾಕಿಬನ್ನಿ, ನಿಮ್ಮ ನಾಯಕ ಜಯಗಳಿಸಲೆಂದು ನಿಮ್ಮವರ ಓಟು ಹಾಕಿಸಿ ಬನ್ನಿ ......!               -ಮಾಧವ ಅಂಜಾರು