Posts

Showing posts from February, 2014

ದೀಪ - ಪ್ರದೀಪ

ದುಗುಡವೆಲ್ಲ  ಮರೆತು ನಗು ಮೊಗವ ತೆರೆದು ಸುಲಲಿತ ಸುಮಧುರ ಬೆಳಗುವ ದೀಪ ನೇರನುಡಿ , ಹಾವಭಾವದಲಿ ಇರದು ಅಂತರ ಗುರಿಮುಟ್ಟಲು ಕೆಚ್ಚೆದೆಯಿಂದ ಮುನ್ನುಗ್ಗುವ ದೀಪ ನೂರು ಆಸೆಯ ಸ್ಪುರಣ ಚೇತನ ಸುಕುವರ ಮೂಡಿ ಬರುವನು ಹಸನ್ಮುಖ ಸ್ನೇಹ ಜೀವಿ ದೀಪ ಜಾರೋ ಕಲ್ಲಲಿ ಸರಾಗ ನಡಿಗೆಯ ಮೇರು ಮನುಜ ಬೀಳೋ ಹನಿಗೆ ಬೊಗಸೆಯಾಗುವ ಪ್ರೀತಿ ದೀಪ ಬಿಸಿಗಾಳಿಗೆ ಕಡಲ ಹೃದಯ ತೆರೆವ ಭಾವಜೀವ ತಂಗಾಳಿಯಲಿ ಎದೆಯೊಡ್ಡಿ ಬಳುಕುವ ಲಾಸ್ಯ ದೀಪ ಹೂವಿಗೆ ಹೂವಂತೆ , ಮುಳ್ಳಿಗೆ ಮುಳ್ಳಂತೆ ಬೀರೋ ಪ್ರತಿಬಿಂಬ ಇಂತೀ ಚರಿತೆಯ ನಮ್ಮೆಲ್ಲರ ಪ್ರಿಯ ಗೆಳೆಯ  'ಪ್ರದೀಪ '                            - ಅಂಜಾರು ಮಾಧವ ನಾಯ್ಕ್

ಮೊಕೆದ ತುಳುನಾಡು ......

ಸಾವಿರ ಜನ್ಮದ ಪುಣ್ಯದ ಫಲ , ಬಂಗಾರ್ ಪನ್ಪಿನ ತುಳುನಾಡ ಮಣ್ಣ್ ।।೧।। ಏತೊಂಜಿ ಎಡ್ಡೆ ಮನಸ್ , ನಮ್ಮಕ್ಲೆ ಜನ್ಮ ಒಂಜಿ ಪಂಡ್ದ್ ತೋಜಾವುನು  ಈ ಮಣ್ಣ್ದ ಮರ್ಮ।।೧।। ಸತ್ಯ ಧರ್ಮೊಗ್ ತರೆ ಬಗ್ಗಾವ , ಅಸತ್ಯ ಗೊಬ್ಬುನು ಕೊಡಿ ಮುಟ್ಟಾವ।।೧।। ನಂಕಿಜ್ಜಿ ಅಹಂಕಾರ , ಕೊರ್ಪ ಸಹಕಾರ ಮೋಕೆ ಸಿಂಗಾರ ಬಾಳೊಂಜಿ ಪೊರ್ಲುದ ವರ..।।೧।। ದೇವೆರೆ ಸಾಯ ನಂಕುಂಡ್ ಎಪಲಾ ಒಂಜಾದ್ ಉಪ್ಪುಗ ತುಳು ಜೋಕುಲು ಮಾತೆರ್ಲ।।೧।।                     - ಅಂಜಾರು ಮಾಧವ ನಾಯ್ಕ್

ಹರಿ - ಈಶ = ಹರೀಶ

ಹೆಸರಲ್ಲೇನಿದೆ ! ಅನಬೇಡಿ ಯಾರಿಗೂ ... ಹೆಸರಲ್ಲೇ ಹುದುಗಿದೆ ಸಜ್ಜನತೆಯ ಸೊಬಗು ನೋಡುವ ನೋಟ ಸರಿಯಾಗಿರಲಿ ಇಲ್ಲಿ ನಿನ್ನೊಂದಿಗೆ ಬರುವುದು ಹಲನಾಮಗಳ ಬಳ್ಳಿ ನಿಸ್ವಾರ್ಥ ಸೇವೆಯ ಮನೋಭಾವದ ಜನ್ಮ ಮಾಡುವುದ ಕಂಡೆ ಮರುಭೂಮಿಲಿ ನಿಮ್ಮ ಗಳಿಕೆಗೇ ..! ಹುಟ್ಟಲ್ಲ ನಮ್ಮೆಲ್ಲ ನಡೆಯು ತಿಳಿದು ಬಾಳುತ್ತಿರುವರು ಹರಿನಾಮದ ಮರ್ಮ ಎಂದೆಂದಿಗೂ ಇರಲಿ ಈ ಸ್ನೇಹ ಭಾವ ಹರಿ - ಈಶನಂತೆ ಇರಲಿ ನಮ್ಮ ' ಹರೀಶ್  'ರ ಪ್ರಭಾವ ..!                        - ಅಂಜಾರು ಮಾಧವ ನಾಯ್ಕ್

ತುಳುಕೂಟ ..

ಪ್ರೀತಿ ಗೆಳೆಯರ ಸಂಪುಟ ಭಂಡಾರ ತುಳುವ ಜನರಿಗೆ ಸ್ವಾಗತ ಗೋಪುರ ಇಲ್ಲಿರದು ಅಂತರ ಸಜ್ಜನರ ಸಾಗರ ಸ್ನೇಹಜೀವಿಗಳ ಮಹಾಪೂರ ನಿರಂತರ ಮರುಭೂಮಿಯ ನಡುವಲಿ ಈ ನಮ್ಮ ಕೂಟ ತುಳು ಕೊಂಡಿಯ ಸೇರಿಸಲಿ ಆಡುತ ಆಟ ನಮಿಸೋಣ ನಾವು ತುಳು ಹೃದಯಸ್ಪರ್ಶಿಗಳ ಬೆಳೆಸೋಣ ಇನ್ನೂ ನಾಡಿನ ಆದರ್ಶಗಳ ನೀವೆಲ್ಲರೂ ಬನ್ನಿ ಇತರರನು  ಕರೆತನ್ನಿ ಒಂದಾಗೋಣ ಬನ್ನಿ ನಾವು ತುಳುವರೆನ್ನಿ               - ಅಂಜಾರು ಮಾಧವ ನಾಯ್ಕ್

ಮೌನ ಪ್ರೇಮ

ಕಲ್ಲರಳಿ ಹೂವಾಗಿ ಗಿಡಬೆಳೆದು ಮರವಾಗಿ ಬೆಟ್ಟವೆಲ್ಲಾ ಹಸಿರಾಗಿ ನದಿನೀರು ತುಂಬಿ ಹರಿದು ಭೂಮಿ ತಾಯಿ ಹಸನಾಗಿ ನಗು ನಗುತಿರಲು ಮನವೆಲ್ಲಾ ಸಂತೋಷದ ಹೊಳೆ ಹರಿಯುವ ಭಾಸ ಹಕ್ಕಿಗಳ ಚಿಲಿಪಿಲಿ ಶಬ್ದನಾದಗಳ ನಡುವೆ ನನಗೆದ್ದು  ಉಲ್ಲಾಸದ ದಿನ ಆರಂಭಿಸಲು ತವಕ ನಿಷ್ಕಲ್ಮಶ ತಂಪು  ಗಾಳಿ ಸವಿಯುತ ಮೋಡಗಳ ಆಸರೆಯಲಿರಲು ಎಷ್ಟು ಸುಂದರ ನೀ ಎನ್ನ ಪ್ರೀತಿಸುವ ಪರಿ ನೆನೆಯುತ ಮುದವಾಯಿತು ಮನ ಮೌನ ಪ್ರೇಮಕೆ           - ಅಂಜಾರು ಮಾಧವ ನಾಯ್ಕ್

ನಿನ್ನ ಮೊಗ...

ತಂಪು ಗಾಳಿ ಸಂಜೆಯಲಿ ಬೆಟ್ಟ ತುದಿಯ ಅಂಚಿನಲಿ ಹನಿ ಮಳೆ ಸಿಂಚನದ ಹೃದಯ ಸ್ಪರ್ಶ ಆಸೆಯ ಆಗುತಿಹೆನಗೆ ನಿನ್ನ ಮೊಗ ಕಂಡಾಗ  ಎನ್ನ ಸೇರಿಕೊ ಪ್ರೀತಿಲಿ ಬಂಗಾರ               - ಅಂಜಾರು ಮಾಧವ ನಾಯ್ಕ್ 

ಅಂದ - ಕಂದ

ನೀ ನೋಡಲು ಚೆಂದ ನಾ ಪಡುವೆ ಆನಂದ ..! ನಿನ್ನ ಕಣ್ಣಿನ ರೆಪ್ಪೆಯಾಟ ಅಂದ ದುಂಡು ತುಟಿಗಳ, ಮುತ್ತು ಬಲು ಮಧುರ ..! ಮೃದು ಕೈಯ ಸ್ಪರ್ಶ ಬಂಧ ಕಾಲ್ಗೆಜ್ಜೆಯ ನಡುಗೆ ಚೆಂದ ..! ಜಿಂಕೆ ಮರಿಯಂತೆ ಓಟ ಅಂದ ಎನ್ನ ಮುದ್ದಿಸುವ ಹೃದಯ ಅಮರ ..! ನೀ ಹೇಗಿದ್ದರೂ ಬಲು ಚೆಂದ ಸುಖವಾಗಿರು ಓ ನನ್ನ ಮುದ್ದು ಕಂದ ..!              - ಅಂಜಾರು ಮಾಧವ ನಾಯ್ಕ್ 

'ತೆಲಿಕೆದ ಬೊಳ್ಳಿ'ಲು

'ತೆಲಿಕೆದ ಬೊಳ್ಳಿ'ಲು  ನಮ ಮಾತೆರ್ಲ ಎಲ್ಲೆ ಪೋವೊಂದುಲ್ಲ, ಈಲ ತೋವೆರೆಗ್ ಬಲ್ಲ ತುಳು ಅಭಿಮಾನ ತೋಜುಂಡು ನಮ್ಮಕ್ಲೆಡ ಏಪಲ ತುಳುವೆರ್ ಒಂಜಾದ್ ಉಲ್ಲ ..! ಉಪ್ಪಡ್ ಇಂಚನೆ ನಮ್ಮಕ್ಲೆನ ಸಂಘ ಜಾತಿ ಭೇದ ದಾಂತೆ ಬೆರೆಪುಗ ಏಪಲ ..! ಒಂಜಾದ್  ಬದ್ಕ್ ಗ  ತುಳುವಪ್ಪೆ ಜೋಕುಲು ಕೈ ಜೋಡಾದ್ ನಡಪುಗ ಪ್ರತಿ ಕಲೆಗ್ ಎಂಕುಲು ..!!               - ಅಂಜಾರು  ಮಾಧವ ನಾಯ್ಕ್

ಶಿವನೇ ಬಲ್ಲ....

ಜ್ಞಾನಿಯು ಅಲ್ಲ , ಅಜ್ಞಾನವು ಇಲ್ಲ ಕಲ್ಲು ಸಕ್ಕರೆಯಂತೆ ಸಿಹಿಯಾಗಿಲ್ಲ .. ಬೇವು ಬೆಲ್ಲದ ನಡುವೆ ಜೀವನವು ಎಲ್ಲಾ .. ಕಲ್ಲು ಮುಳ್ಳಿನ ದಾರೀಲಿ ನಡೆಯುವೆ ಮೆಲ್ಲ .. ಸುಳ್ಳು ಕಂತೆಯನು ಹೇಳುವುದಿಲ್ಲ .. ಚಳ್ಳೆ ಹಣ್ಣು ತಿನಿಸಿ ಓಡುವುದಿಲ್ಲ ...! ಪರರ ಜೀವಕೆ ಮುಳ್ಳಾಗಿರುವುದಿಲ್ಲ .. ಸತ್ಯ ಬದುಕನು ಬಾಳಿ ಬಸವಳಿದೆಯಲ್ಲ ..! ಎಲ್ಲರಲಿ ಬೆರೆತು ಇರಬಯಸುವೆನಲ್ಲ  .. ದಿನ ರಾತ್ರಿ ಎನದೆ ಸಂತೋಷವೆಲ್ಲ ಆ ಶಿವನೇ ಬಲ್ಲ ಎನ್ನ ಬದುಕೆಲ್ಲ ವಿಶ್ವಾಸವು ಎನಗೆ ದೇವ ಕೈ ಬಿಡಲ್ಲ ...!!        -ಅಂಜಾರು ಮಾಧವ ನಾಯ್ಕ್ 

ಇಂದನ್ನು ಬಾಳು ....

ದಿನಕಳೆದ ಮೇಲೆ ಮರುಗದಿರು ನಿರಂತರ ನಾಳೆ ಬರುವ ಮೊದಲು ಬೆದರದಿರು ಒಂಥರಾ ತಿಳಿದುಕೋ ಇರುವುದು ಬಾಳ್ವೆ , ಈ ಕ್ಷಣ ಈ ವರೆಗೆ ...! ಇಲ್ಲದ ನಾಳೆಗೆ ಯಾಕಾಗಿ ಭಯಪಟ್ಟಿರುವೆ ..! ಕರಗಿಸಿಕೋ ಒಡಲಲಿ ಪ್ರೀತಿ ಸಾಗರ ಕೈ ಬೀಸಿ ಕರೆದುಕೋ ಸ್ನೇಹಜೀವಿಯ ಬಾಳ ಪಯಣವು  ಸುಂದರ.. ಪ್ರೀತಿಯಿದ್ದರೆ ಬಾಳ ದಾರಿಯ ಸರಿಯಾಗಿಸು ತಪ್ಪಿ ಬಿದ್ದರೂ ..! ಜಯವಾಗಲಿ , ಜೀವನದ ಗುರಿ ಮುಟ್ಟಲಿ .. ಕೊನೆಯುಸಿರ ಎದೆಬಡಿತವು ಪ್ರೀತಿ ಸಹನೆ ತುಂಬಿರಲಿ ...!                         - ಅಂಜಾರು ಮಾಧವ ನಾಯ್ಕ್

ನನ್ನ ಪ್ರೀತಿಯ ಸೂರಿ ....

 ನೀಲಿ ಬಾನಲಿ ತೇಲೊ ಸಮಯದಲಿ  ಸ್ನೇಹವಾಯಿತೆನಗೆ  ತುಳುವ ಚಿಂತಕ ಸ್ಪೂರ್ತಿಯು ..! ಯೋಗಕ್ಷೇಮ ವಿಚಾರಧಾರೆ ಚಿಂತನ ಮಂಥನ ... ಅದರೊಂದಿಗೆ ಎರೆದೆ  ಎನ್ನ ಸಂಕ್ಷಿಪ್ತ ಬಾಳ ಪುಟವ ..! ತೆರೆದರು ತುಳುವಿನ ಬಾಗಿಲನು ಸಂತಸದಲಿ ... ಆಯಿತೆನಗೆ ಹರುಷವೋ ಹರುಷ ಕ್ಷಣಮಾತ್ರದಲಿ ..! ಕೇಳಿದರೊಂದು ಪ್ರಶ್ನೆ ಪಯಣಿಸುತಿರುವಂತೆ ನೀ ಬೇಗನೆ ಬರುವೆಯ ತುಳು ಮಂಚಕೆ  ..! ತಟ್ಟನೆ ಒದರಿದು ನಾಲಗೆ "ನನಗೇನು ಪ್ರಯೋಜನ " 'ಹತ್ತು ಹಲವಾರು ' ಉತ್ತರ ಎನ್ನ ಕಿವಿಗೆ ಬಿತ್ತರ ..!! ಮರಭೂಮಿಯ ಸ್ಪರ್ಶಿಸಲು ಅರಿವಾಯಿತೆನಗೆ .? ಸ್ನೇಹದ ಕಡಲೊಂದು ಸಿಕ್ಕಿರುವುದು ನಿನಗೆ .. ಗಟ್ಟಿಯಾಯಿತು ಭಾವನೆ ವರುಷವು ಕಳೆದಂತೆ ಒಂದಾಗಿರುವೆ ಇಂದಿಗೂ ಉಸಿರಂತೆ ಇರುವೆ .. ಹೇಳದೇ ಹೋದರೆ ಇರಲಾರದು ಹೆಮ್ಮೆ ... ನಗುಮೊಗವ ತೋರುವ 'ಸೂರಿ'ಯ ಒಲುಮೆ ಕರೆವರು ಎಲ್ಲರೂ 'ಸೂರಿ ' ಎಂದು ಪ್ರೀತಿಯಲಿ ಬೆಳಗಲಿ ಸೂರ್ಯನಂತೆ ಜೀವನವು ಸು-ರಸದಲಿ ....                     - ಅಂಜಾರು ಮಾಧವ ನಾಯ್ಕ್

'ಶಾಪಿಂಗ್ ಮಾಲ್ ನಲಿ' ನನ್ನಾಕೆ ....

ಅದೊಂದು ಕ್ಷಣ ನೆನೆಸಿಕೊಂಡಳು ನನ್ನಾಕೆ...! ಬಾಲ್ಯದಲಿ ಆಡಿದ ತುಂಟಾಟಗಳ ..! ಮೊನ್ನೆ ನಡೆದಾಡಿದಳು 'ಶಾಪಿಂಗ್ ಮಾಲಿನಲಿ'  ಈಕೆ .... ಟ್ರಾಲಿಯ ದೂಡುತ ಕೇಳಿದಳು ನನ್ನ....., ಇದರಲಿ ಹಾರ್ನ್ ಇಲ್ಲ ಯಾಕೆ ! ಅಯ್ಯೋ ಅಂತ ನನಗೆನಿಸಿತು  , ಇನ್ನೂ ಮರೆಯಬಾರದು ಯಾಕೆ . ತಿರುಗಿ ಯೋಚಿಸಿ ತಿಳಿದೆ , ಜೀವನದ ಆಟಕೆ ಪ್ರಾಯದ ಅಂತರವಿಲ್ಲ ಜೋಕೆ ...!!                - ಅಂಜಾರು ಮಾಧವ ನಾಯ್ಕ್

ಆ ಕಾಲ ..ಈ ಕಾಲ

ಬೆಳಗಾಗಲು ತಂದೆ ತಾಯಿ ಪಾದ ಪೂಜೆಯ,  ಆ ಕಾಲ ಅವಸರದಿ ಎದ್ದು ಹಲ್ಲುಜ್ಜದೆ ಮೊಬೈಲಂತರ್ಜಾಲ ನೋಡುವ,  ಈ ಕಾಲ ಬಸ್ಸಲಿ ಪಯಣಿಸಿ ಸಂತೋಷಪಡುತ್ತಿದ್ದ,   ಆ ಕಾಲ ಸಾಲ ಸೋಲ ಮಾಡಿ ಬೈಕು ಸವಾರಿಯ,  ಈ ಕಾಲ ಮನೆಮಂದಿಗೆ ಬಿಸಿಯಾದ ಔತಣದ, ಆ ಕಾಲ ಮನೆ ಮನೆಗೆ  ಕೆ . ಎಫ್ .ಸಿ ತಿನ್ನೋ ಚಟದ, ಈ ಕಾಲ ಮೈ ತುಂಬಾ ಬಟ್ಟೆ ಧರಿಸಿ ಓಡಾಡುವ,  ಆ ಕಾಲ ಶರೀರ ಉಬ್ಬು ತಗ್ಗು ಎತ್ತಿ ತೋರಿಸುವ,  ಈ ಕಾಲ ಹಾಲು ಮೊಟ್ಟೆ ಪಾನಕ ಕುಡಿಯುವ,  ಆ ಕಾಲ ಕೋಕ ಕೋಲ  ಪೆಪ್ಸಿ ಟೋಪಿಕಾನ ಕುಡಿಯೋ ಈ ಕಾಲ ಬದಲಾಗಿದೆ ದಿನಚರಿ ಆ ಕಾಲಕ್ಕಿಂತ ಈ ಕಾಲ ಇನ್ನಾದರೂ ಮರುಕಳಿಸಲಿ ಶಿಸ್ತಿನ ದಿನ ಬರೋ ಕಾಲ                           - ಅಂಜಾರು ಮಾಧವ ನಾಯ್ಕ್

ಕಪಟ ಭಕುತಿ ಇದು ..!!!

ನೂರು ತರಹದ ಶೃಂಗಾರ ಮಾಡಿ ಕೂಗಿ ಕರೆದು ಪ್ರಸಾದವ ನೀಡಿ , ಸಾಲು ಸಾಲಾಗಿ ಭಕುತರ ನಿಲಿಸಿದರೂ ಪಾಪದ ಹೊರೆಹೊತ್ತ ಮನುಜರು ಕೂಸಂತೆ ನಟಿಸಿದರೇ ? ಏನಿಹುದು ಅರ್ಥ ಜಗದಲಿ ನಡೆವ ಲೇಸಿನಾಟಕೆ ...               - ಅಂಜಾರು ಮಾಧವ ನಾಯ್ಕ್

ಹೌದಲ್ಲವೇ ..?

ಪರಿವರ್ತನೆ ಜಗದ ನಿಯಮ ಎನುತ...!  ದಿನ ಬಿಡದೆ ಪಾಪ ಕರ್ಮವ ಮಾಡುವರು                                  ........  ಜನರು ಪಡೆದು ಬಂದ ಭಾಗ್ಯ ನಮದು ಎನುತ ...! ತಡೆದು ನಿಲ್ಲಿಸಿ ಬಡಿದು ತುಳಿವರು                               ........  ಜನರು ಹಲವು ವೇಷವ ಹಾಕಿ ಧರ್ಮವನು ಸಾರುವರು ..! ಅಧರ್ಮ ಮಾಡಿ ವೇಷ ಬದಲಿಸಿ ತಿರುಗುವರು ,                                .......ಜ಼ನರು                                                   - ಅಂಜಾರು ಮಾಧವ ನಾಯ್ಕ್

ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು ..

ನ್ಯಾಯಕ್ಕೆಂದೇ....  ಅಲೆದಾಡುವರು ಕೋರ್ಟು ಕಛೇರಿ ಅನ್ಯಾಯಕ್ಕೆಂದೇ ... ಜನಿಸಿ ಬಿಡುವರು ಬೀದಿ ಬೀದಿಯಲಿ ಕೈ ಮುಗಿಯಲೆಂದೇ ಓಡಾಡುವರು ದೇಗುಲಗಳ ಮನದ , ಮನೆಯ ದೇವರನೇ ಮರೆವರು ಜನರು ಅಧಿಕಾರಿಯು ನಾನು , ನೀ ಎನ್ನ ಚೇಲನಯ್ಯ ಎನುವರು ನಾಯಿ ಬಾಲದಂತೆ ಅಲ್ಲಾಡುವರು , ಮೇಲಧಿಕಾರಿಯ ಕಂಡು ಕೆಲವರು ಡೊಂಬರಾಟ ಮಾಡುವರು ನಾಯಿ ಕುನ್ನಿಗಳ ಸೇರಿಸಿ ಕಂಡ ತ್ಯಾಜ್ಯ , ಮಾಂಸವ ಕಚ್ಚಿ ತಿನುವರು ಕಷ್ಟಪಟ್ಟ  ಪುಣ್ಯಕೆ..  ಮುತ್ತುಗಳ ಗಳಿಸುವೆ ನನ್ನಿಷ್ಟದಂತೆ ಹಾಯಾಗಿರುವೆ ತೃಪ್ತಿಯಲಿ ... ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು .. ನಿತ್ಯ ಆನಂದವಾಗಿರುವುದು ನಿನ್ನ  ಜೀವನವು                      - ಅಂಜಾರು ಮಾಧವ ನಾಯ್ಕ್

ಎಂಥವರಯ್ಯಾ .....!!!!

ಹೆತ್ತ ತಾಯಿ , ಸಾಕಿ ಸಲಹಿದ ತಂದೆಯ ಮರೆತು ನೀನೆಷ್ಟು ಗಳಿಸಿದರೂ , ತೃಪ್ತಿಯಾಗದು ನಿನ್ನ ಒಡಲು ಸತ್ಯ ಧರ್ಮದ, ಅರ್ಥವನರಿಯದ ಷಂಡ ಮನುಜನು ಸತ್ಯ ದೇವತೆಗೆ ನಿತ್ಯ ' ನೇಮ ' ಕೊಟ್ಟರೂ ವ್ಯರ್ಥವಯ್ಯ... ಅಣ್ಣ ತಮ್ಮನ  ಬಂಧವನರಿಯದ ಮನುಕುಲವು ಒಂದಾಗಿ ಬಂದು, ಕೊಂದು ತಿನ್ನಲು ಹವಣಿಪರು ...! ಅಂಥರಾತ್ಮದಲಿ ಒಂದಷ್ಟು ನಂಜು ಹೊಂದಿ ಬೆಣ್ಣೆಯಂತೆ ನಟಿಸುವರು ಕೆಲ ಬುದ್ದಿಜೀವಿಗಳು ನಿಜ ವಿಷಯ ಅರಿತು ಆಡಂಭರವ ಮಾಡಲು ಹೊರಟರೇ ತಂತ್ರಿ , ಭಟ್ಟರು ಮಾಡಿದ ಪೂಜೆಯು ವ್ಯರ್ಥವಯ್ಯ ಭೂತ ಕೋಲದ ನೆಪದಿ ಕಾಸುಗಳಿಸುವ ಪೂಜಾರಿಯು , ಸಹಾಯಕನು ಪೂಸಿ ಹೊಡೆದು ಹೆಂಡತಿಯ ಮಾರುವವನು ಆಗಿರಬಹುದಯ್ಯ ...! ದೈವ ದರ್ಶನದ ಶಕ್ತಿಯನರಿಯದ ಕರ್ಮಸುತನು ದುರುಪಯೋಗ ಮಾಡಿಕೊಳ್ಳುವರು ಹಿಂದೂ ಸಂಸ್ಕೃತಿಯ ದುಡ್ಡು ಕೊಟ್ಟರೆ, ಚಟ್ಟದ ಬಟ್ಟೆಯನು ಕಟ್ಟಿಕೊಂಡು .. ನಾ ಊರಿನ ಯಜಮಾನ , ಗುರಿಕಾರ ಎನುವರಯ್ಯ  ... ! ಸತ್ಯವನೆ.. ನಂಬಿ ಬದುಕಿದ  ನಿತ್ಯ ಜೀವನ ... ಸತ್ತು ಹೋದರೂ ತೃಪ್ತಿಯಾಗದು ಮನವು ಈ ಪಾಪಿ ಜಗದಲಿ.. ಇದುವೇ ಕಲಿಯುಗ .. ಇದುವೇ ಹೊಸಯುಗ .. ಇದುವೇ ಎನ್ನ ಅಂತರಾತ್ಮದ ತುಣುಕಯ್ಯಾ ....!!                   - ಅಂಜಾರು ಮಾಧವ ನಾಯ್ಕ್