ಸುಂದರ ನಗುವಿಗಾಗಿ

ತುಂತುರು ಮಳೆಗೆ
ಹರಿಯೋ ನೀರಂತೆ
ಒಡೆದ ಹೃದಯಕೆ
ಬೆಸೆಯುವ ಮನಸಿನಂತೆ
ಮುಂಜಾನೆಯ ಬೆಳಕಿಗೆ
ನೀ ನಗುವ ಚೆಲ್ಲುವಂತೆ
ನಾಳೆಯ ಕನಸಿಗೆ
ಹೂವ ಹಾಸಿಗೆಯಂತೆ
ನೀ ನನ್ನ ಜೊತೆಗಿರು
ಜೀವದ ಉಸಿರಂತೆ,
ಚಿಗುರಿದ ಬಳ್ಳಿಗೆ
ನಿಲ್ಲುವ ಮರವಾಗಿ
ಬಾಡುವ ಹೂವಿಗೆ
ಕದಡದ ನೆರಳಾಗಿ
ಸೇವಕನಾಗಿ ಕಾಯುವೆ
ನಿನ್ನ ಸುಂದರ ನಗುವಿಗಾಗಿ.
           -ಮಾಧವ. ಕೆ. ಅಂಜಾರು 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ