(ಲೇಖನ 89)ದೇವರಿಗೆ ಹೆದರದವರು ಆಣೆ ಪ್ರಮಾಣಕ್ಕೆ ಹೆದರುತ್ತಾರೆಯೇ? ಪಾಪ ಕರ್ಮವನ್ನು ಪಾಲಿಸದವರು ಅನ್ಯಾಯ ಮಾಡದೇ ಇರುತ್ತಾರೆಯೇ?

(ಲೇಖನ -89)ದೇವರಿಗೆ ಹೆದರದವರು ಆಣೆ ಪ್ರಮಾಣಕ್ಕೆ ಹೆದರುತ್ತಾರೆಯೇ? ಪಾಪ ಕರ್ಮವನ್ನು ಪಾಲಿಸದವರು ಅನ್ಯಾಯ ಮಾಡದೇ ಇರುತ್ತಾರೆಯೇ? ಇನ್ನೊಬ್ಬರ ನೋವನ್ನೇ ಅರಿದಯವರು ದಯೆ ದಾಕ್ಷಿಣ್ಯ ಹೊಂದಿರುತ್ತಾರೆಯೇ? ಅತಿಯಾಸೆ ಇರುವವರು ಹೊಂದಾಣಿಕೆ ಬಯಸುವರೇ? ನಾನು ನನ್ನದು ಹೇಳುವವರು ನೆಮ್ಮದಿಯಾಗಿ ಜೀವಿಸುತ್ತಾರೆಯೇ? ಇಲ್ಲ..... ಇಲ್ಲವೇ ಇಲ್ಲ. ಪ್ರಪಂಚದಲ್ಲಿ ನಡೆಯುತ್ತಿರುವ ಅದೆಷ್ಟೋ ಘಟನೆಗಳು, ಅನ್ಯಾಯ, ಅತ್ಯಾಚಾರ, ಕೊಲೆ, ಬೆದರಿಕೆಗಳು ಈ ಮೇಲಿನ ವಿಚಾರಗಳನ್ನು ಹೊಂದಿರದೆ ಇರುವವರು. ತೊರ್ಪಡಿಕೆಗೆ ಪೂಜೆ, ಪ್ರಾರ್ಥನೆ, ಸಮಾಜ ಸೇವೆಯನ್ನ ಮಾಡುತ್ತ ಪರದೆಯ ಹಿಂದೆ ಮಾಡುವ ಅನಾಚಾರ ಸಾಮಾನ್ಯ ಜನರಿಗೆ ಗೊತ್ತಾಗುವುದಿಲ್ಲ. ಭಯ ಭಕ್ತಿಯನ್ನು ವ್ಯಾಪಾರಿಕರಣ ಮಾಡಿರುವ ಘಟನೆಗಳು ಅಲ್ಲಲ್ಲಿ ನೀವುಗಳು ನೋಡುತ್ತಿರಬಹುದು. ಬಡವರಲ್ಲಿ ಇರುವ ದೇವರ ಭಯ ಭಕ್ತಿ ಹೆಚ್ಚಿನ ಸಿರಿವಂತರಲ್ಲಿ ಕಾಣುವುದಿಲ್ಲ. ಬಡವನಾಗಿದ್ದಾಗ ಇದ್ದ ಭಯ ಭಕ್ತಿ ಹೆಚ್ಚಿನವರು ಸಂಪಾದನೆ ಮಾಡಿದ ಮೇಲೆ ದೇವರನ್ನೇ ಮರೆಯುವ ಜನರೂ ಇದ್ದಾರೆ. ಒಂದು ಕಡೆ ದೇವರೇ ಇಲ್ಲ ಎನ್ನುವ ಜನ, ಇನ್ನೊಂದೆಡೆ ದೇವರಿದ್ದಾನೆ  ಎನ್ನುವ ಜನ, ಇನ್ನೊಂದೆಡೆ ನಮ್ಮದೇ ದೊಡ್ಡ ದೇವರುಗಳು ಎಂದು ಪ್ರತಿಪಾದಿಸುವ ಅದೆಷ್ಟೋ ಜನ. ಈ ಪ್ರಪಂಚದಲ್ಲಿ ಅನೇಕ ರೀತಿಯ ಆಚರಣೆ ವಿಚಾರಗಳ ನಡುವೆ ನಡೆಯಲೇ ಬಾರದ ವಿಷಯಗಳು ನಡೆಯುತ್ತಲೇ ಇರುತ್ತದೆ.



          ಅಧಿಕಾರಕ್ಕಾಗಿ, ಆಸೆಗಾಗಿ, ಸಂಪತ್ತಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ಎಲ್ಲವೂ ನಡೆಯುತ್ತಾ ಇದೆ. ಹಾಗೆಂದು ಸಮಾಜದಲ್ಲಿ ಇರುವ ಎಲ್ಲರೂ ಸುಮ್ಮನೆ ಕುಳಿತುಕೊಂಡರೆ ಬದುಕಲು ಸಾಧ್ಯವಿದೆಯೇ? ಒಂದು ವೇಳೆ ಹೆಚ್ಚಿನವರು ಸುಮ್ಮನೆ ಕುಳಿತಾಗ ಪಾಪಿಗಳ ಅಟ್ಟಹಾಸ ಜಾಸ್ತಿಯಾಗಿ ಸಾಮಾನ್ಯ ಜನರ ಬದುಕನ್ನು ನರಕ ಮಾಡಿ ಬಿಡುತ್ತಾರೆ. ಈ ಹಿಂದೆಯೂ, ಮುಂದೆಯೂ ಎಲ್ಲರ ಬದುಕು ಹೆಚ್ಚಿನಮಟ್ಟಿಗೆ ಸುಮಾರಾಗಿ ನಡೆಯಬೇಕಿದ್ದರೂ ಅನಾಚಾರಗಳನ್ನು ದಿಕ್ಕರಿಸುವ, ಪ್ರತಿಭಟಿಸುವ ಜನರಿಂದಲೇ ಸಮಾಜದಲ್ಲಿ ಅಲ್ಪ ಪ್ರಮಾಣದಲ್ಲಿ ಸಮಾಜಘಾತುಕ ಕೆಲಸಗಳಿಗೆ ಕಡಿವಾಣ ಇದ್ದಂತಿದೆ ಇಲ್ಲವಾದಲ್ಲಿ ಈ ಅಹಂಕಾರಿಗಳು ಎಲ್ಲೆಡೆ ಹಬ್ಬಿ ಎಲ್ಲರನ್ನು ನುಂಗಿ ಬಿಡುತಿದ್ದರು. ಅಲ್ಲೊಬ್ಬ ಇಲ್ಲೊಬ್ಬ ಪ್ರಾಮಾಣಿಕ ಅಧಿಕಾರಿಗಳು, ಹೋರಾಟಗಾರರು, ಸತ್ಯವಾದ ಮತ್ತು ಸತ್ಯವಂತ ಜನರು ಇದ್ದಾಗ ಪಾಪಿಗಳಿಗೆ ಸರಾಗವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹಣ ಮತ್ತು ಅಧಿಕಾರ ಎರಡೂ ಇದ್ದಾಗ ಸಮಾಜದಲ್ಲಿ ಏನು ಮಾಡಿದರೂ ನಡೆಯುತ್ತದೆ ಅನ್ನುವ ಅಹಂಕಾರ ಇರುವವರ ಮಾತು, ನಡತೆ, ಎಲ್ಲವೂ ತಿಳಿಯಯುತ್ತದೆ. ಹಾಗೆಯೇ ತಿಳಿದರೆ ಸಾಮಾನ್ಯ ಜನರು ಏನು ಮಾಡಲು ಸಾಧ್ಯವಿಲ್ಲ ಎಂಬ ಭರವಸೆಯಿಂದ ದಿನ ದೂಡುತ್ತಾರೆ. ಸಜ್ಜನರ ಶಕ್ತಿ ಭಕ್ತಿ ಯುಕ್ತಿ, ಎಲ್ಲವೂ ಬಹಳಷ್ಟು ಶಕ್ತಿಯನ್ನು ಹೊಂದಿರುತ್ತದೆ. ಸಜ್ಜನಿಕೆಯ ವ್ಯಕ್ತಿ ನ್ಯಾಯಕ್ಕಾಗಿ ಯಾವ ಹಂತಕ್ಕೂ ತಲುಪಬಹುದು. ಸತ್ಯಕ್ಕಾಗಿ ಜೀವವನ್ನೇ ಬಲಿ ಕೊಡಬಹುದು. ಅನ್ಯಾಯವನ್ನು ಸಾಯುವವರೆಗೂ ವಿರೋಧಿಸಿ ಪ್ರತಿಭಟಿಸಿ ಪಾಪಿಗಳ ದುಸ್ವಪ್ನವಾಗಿ ಇರುತ್ತಾನೆ. ಅನೇಕ ಕೆಟ್ಟ ಜನರ ಕಿವಿಗೆ ಅಂಕುಷವಾಗಿರುತ್ತಾನೆ.

         ಯಾವುದನ್ನು ವಿರೋಧಿಸಬೇಕೋ ಅದನ್ನು ವಿರೋಧಿಸಲೇ ಬೇಕು, ಯಾವುದನ್ನು ಹೋಗಳಬೇಕೋ ಅದನ್ನು ಹೋಗಳಲೇಬೇಕು. ಅನಾಯವಂತ ಜನರು ಎಷ್ಟು ಸಿರಿವಂತ ಅಧಿಕಾರ ಹೊಂದಿದ್ದರೂ ವಿರೋಧಿಸುವ ಅವರನ್ನು ಮಟ್ಟಹಾಕುವ ತಾಕತ್ತು ಸತ್ಯವಂತನಿಗೆ ಮಾತ್ರ ಸಾಧ್ಯವಿದೆ. ಸತ್ಯವಂತನು ಯಾವತ್ತು ಕೂಡ ತನಗೆ ತಾನು ದ್ರೋಹ ಮಾಡಿಕೊಂಡು ಬದುಕುವುದಿಲ್ಲ. ಅತ್ಯಾಚಾರಿಗಳು, ಅವಿವೇಕಿಗಳು, ಭ್ರಷ್ಟರು ಅಲ್ಪ ಅವಧಿಯವರೆಗೆ ಮೆರೆದು ಒಂದಲ್ಲ ಒಂದು ರೀತಿಯಲ್ಲಿ ಮಾಡಿದ ತಪ್ಪುಗಳ ಬಲೆಗೆ ಬಿದ್ದು ಖಂಡಿತ ಸಾಯುತ್ತಾರೆ ಪ್ರತಿಭಟಿಸುವವರು ಇದ್ದಾಗ ಇಲ್ಲದೇ ಹೋದಲ್ಲಿ ಸತ್ಯವಂತರನ್ನು ನುಂಗಿ ತೆಗುವ ಇಂದಿನ ನಿದರ್ಶನಗಳು.

        ನನ್ನ ಸುತ್ತಲ ಪ್ರಪಂಚದಲ್ಲಿ ಕನಿಷ್ಠ ಸತ್ಯವಂತರಿದ್ದರೆ, ಪ್ರಾಮಾಣಿಕರಿದ್ದರೆ, ಧೈರ್ಯದ ಹೋರಾಟಗಾರರು, ನಿಸ್ಕಲ್ಮಷ ಜನರಿದ್ದರೆ ಸಾಕು. ಅದೆಂತಹ ಅಹಂಕಾರಿಯನ್ನು ಮಟ್ಟ ಹಾಕಬಹುದು. ಕೊಲೆಗೆಡುಕರಿಗೆ, ಪಾಪಿಗಳಿಗೆ ಸಹಾಯ ಮಾಡುವ ಸಾವಿರಾರು ಜನರಿದ್ದರೂ ಅಂತವರು ಪ್ರಾಮಾಣಿಕ ಜನರ ಮುಂದೆ ಚಿಕ್ಕಾಸು ಬೆಲೆ ಇಲ್ಲದವರಾಗಿರುತ್ತಾರೆ. ಅಪ್ರಾಮಾಣಿಕರ ಮುಖಕ್ಕೆ ಕ್ಯಾಕರಿಸಿ ಉಗಿದರೆ ತಪ್ಪಾಗುವುದಿಲ್ಲ. ಅಪ್ರಾಮಾಣಿಕರ ಮನೆಯಲ್ಲಿ ನಡೆಯಬಾರದ ವಿಚಾರ ನಡೆದರೂ ಆಶ್ಚರ್ಯವಿಲ್ಲ.

       ಮನುಷ್ಯ ಅರಿವಿಲ್ಲದೆ ಮಾಡುವ ತಪ್ಪುಗಳು ಕೂಡ ತಪ್ಪೇ ಅರಿತು ಮಾಡುವ ತಪ್ಪುಗಳು ಕೂಡ ತಪ್ಪೇ, ಆದರೆ ತಪ್ಪನ್ನು ತುಲನೆ ಮಾಡುವ ಒಂದು ಶಕ್ತಿ ಎದುರಿಗೆ ಬಂದಾಗ ಕೈಕಾಲು ಬಿಡುವುದು ಪಾಪಿಗಳ ಲಕ್ಷಣ. ಕಾಲಯೇ ತಸ್ಮೈ ನಮಃ

               ದೇವರನ್ನು ನಂಬುವವರು ಮೂಡರಲ್ಲ ದೇವರನ್ನು ನಂಬಿಸಿ ತನ್ನ ಚೀಲ ತುಂಬಿಸಿಕೊಳ್ಳುವವರು ನಿಜವಾದ ಮೂಡರು.

                      ✍️ಮಾಧವ. ಕೆ. ಅಂಜಾರು 

               

        

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.