ಬಣ್ಣದ ಚಿಟ್ಟೆ
ಬಿಳಿ ಬಣ್ಣದ ಚಿಟ್ಟೆ
ನಾ ನೋಡಿ ಬಿಟ್ಟೆ
ಅಲ್ಲೋಮ್ಮೆ ಇಲ್ಲೊಮ್ಮೆ
ಹಾರುವುದನು ಕಂಡಾಗ
ಹೂವ ಗಿಡವನು ನೆಟ್ಟುಬಿಟ್ಟೆ,
ಇಂದಲ್ಲ ನಾಳೆ
ಬರಬಹುದು ಚಿಟ್ಟೆ
ಮಕರಂದವ ಹೀರಿ
ಬದುಕಲಿ ಸುಂದರ ಚಿಟ್ಟೆ
ಇನ್ನಷ್ಟು ಹೂದೋಟ
ಮಾಡುವ ಕನಸನ್ನು ಕಂಡು ಬಿಟ್ಟೆ,
ಬರುತ್ತಿರಲಿ ಆ ಸುಂದರ ಚಿಟ್ಟೆ
ಮತ್ತೆ ಮತ್ತೆ ಸಿಗಲಿ
ಬಣ್ಣದ ಮುದ್ದಿನ ಚಿಟ್ಟೆ.
✍️ಮಾಧವ. ಕೆ ಅಂಜಾರು
Comments
Post a Comment